
ನವದೆಹಲಿ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನ ಲೋಕ ಸಭೆಯಲ್ಲಿ ಎಸ್‌ಐಆರ್ ವಿಚಾರ ಕುರಿತು ಪ್ರತಿ ಪಕ್ಷಗಳ ಗದ್ದಲ ಕಾರಣ ಕಲಾಪವನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.
ಬೆಳಿಗ್ಗೆ 11ಘಂಟೆಗೆ ಕಲಾಪ ಆರಂಭವಾದ ಕೂಡಲೇ ಪ್ರತಿ ಪಕ್ಷದ ಸಂಸದರು “ಮತ ಕಳ್ಳ, ಸಿಂಹಾಸನ ಬಿಟ್ಟುಬಿಡಿ” ಎಂಬ ಘೋಷಣೆಗಳನ್ನು ಹಾಕುತ್ತ ಸ್ಪೀಕರ್ ವೇದಿಕೆಯ ಬಳಿ ಪ್ರತಿಭಟನೆ ನಡೆಸಿದರು.
ಸ್ಪೀಕರ್ ಓಂ ಬಿರ್ಲಾ ಶಾಂತವಾಗಿರಲು ಮನವಿ ಮಾಡಿದರೂ ಗದ್ದಲ ಕಡಿಮೆಯಾಗದ ಹಿನ್ನೆಲೆಯಲ್ಲಿ, ಸ್ಪೀಕರ್ ಕಲಾಪವನ್ನು 12 ಗಂಟೆಯವರೆಗೆ ಮುಂದೂಡಿದ್ದರು. ನಂತರ ಕಲಾಪ ಆರಂಭವಾದಾಗ ಪ್ರತಿಪಕ್ಷಗಳು ಗದ್ದಲ ಮುಂದುವರೆಸಿದ್ದರಿಂದ ಕಲಾಪವನ್ನು ಮಧ್ಯಾಹ್ನ ೨ ಘಂಟೆವರೆಗೆ ಮುಂದೂಡಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa