ಕೋಲಾರ ಸರ್ಕಾರಿ ಮಹಿಳಾ ಕಾಲೇಜಿನ ಕಬಡ್ಡಿ ತಂಡಕ್ಕೆ ಪ್ರಥಮ ಸ್ಥಾನ
ಕೋಲಾರ ಸರ್ಕಾರಿ ಮಹಿಳಾ ಕಾಲೇಜಿನ ಕಬಡ್ಡಿ ತಂಡಕ್ಕೆ ಪ್ರಥಮ ಸ್ಥಾನ
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಗೌರಿಬಿದನೂರುನಲ್ಲಿ ನಡೆದ ಅಂತರ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಗಳಲ್ಲಿ ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.


ಕೋಲಾರ, ೦೨ ಡಿಸೆಂಬರ್ (ಹಿ.ಸ) :

ಆ್ಯಂಕರ್ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಗೌರಿಬಿದನೂರುನಲ್ಲಿ ನಡೆದ ಅಂತರ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಗಳಲ್ಲಿ ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ. ಪಂದ್ಯಾವಳಿಯಲ್ಲಿ ಸರ್ಕಾರಿ ಮಹಿಳಾ ಕಾಲೇಜು ಕಬಡ್ಡಿ ತಂಡದ ನಾಯಕಿ ಮಾನಸ ವಿ, ನಂದುಶ್ರೀ ಆರ್, ಶ್ವೇತ ಎ, ವಿದ್ಯ ಎಂ, ಮಹಾಲಕ್ಷಿ÷್ಮ ಎಂ, ಗೌರಮ್ಮ ಎಲ್, ಪೂರ್ಣಿಮಾ ಆರ್, ದೇವಿಕಾ, ನಂದಿತಾ ಆರ್, ಶೈಲಜಾ ಎನ್, ಅನುಷಾ ವಿ, ಶೈಲಾ ಎಸ್ ಉತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆಯಲು ಕಾರಣರಾದರು.

ಪಂದ್ಯಾವಳಿಯಲ್ಲಿ ಬೆಸ್ಟ್ ಆಲ್ ರೌಂಡರಾಗಿ ಮಹಿಳಾ ಕಾಲೇಜಿನ ಮಾನಸ ವಿ, ಬಹುಮಾನ ಪಡೆದುಕೊಂಡಿದ್ದು, ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ತಂಡಕ್ಕೆ ಕಾಲೇಜಿನ ನಾಲ್ಕು ವಿದ್ಯಾರ್ಥಿನಿಯರಾದ ಮಾನಸ ವಿ, ನಂದುಶ್ರೀ ಆರ್, ವಿದ್ಯಾ ಎಂ, ಗೌರಮ್ಮ ಎಲ್ ಆಯ್ಕೆಯಾದರು.

ಈ ನಡುವೆ ದಕ್ಷಿಣ ವಲಯದ ಅಂತರ್ ವಿಶ್ವವಿದ್ಯಾಲಯಗಳ ಕಬಡ್ಡಿ ಪಂದ್ಯಾವಳಿಗಳು ವಿನಾಯಕ ಮಿಷನ್ ಯುನಿವರ್ಸಿಟಿ, ಚೆನ್ನೆöÊನಲ್ಲಿ ಆಯೋಜಿಸಿದ್ದು, ಈ ಪಂದ್ಯಾವಳಿಗಳಲ್ಲಿ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವನ್ನು ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿನಿಧಿಸಿದ್ದು, ನಾಯಕಿಯಾಗಿ ಮಾನಸ ವಿ ನೇತೃತ್ವ ವಹಿಸಿದ್ದರು.

ವಿದ್ಯಾರ್ಥಿನಿಯರ ಈ ಸಾಧನೆಯನ್ನು ಕಾಲೇಜಿನ ಪ್ರಾಂಶುಪಾಲ ಪ್ರೊ.ಕೆ.ಎನ್. ಶ್ರೀನಿವಾಸ ಗೌಡ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಸುಬ್ರಮಣಿ ಎನ್, ಕ್ರೀಡಾ ಸಮಿತಿಯ ಸದಸ್ಯರು ಮತ್ತು ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.

ಚಿತ್ರ : ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಸಂಯುಕ್ತ ಆಶ್ರಯದಲ್ಲಿ ಸರ್ಕಾರಿ ಪ್ರಥಮ ದರ್ಜೆಯ ಕಾಲೇಜು ಗೌರಿಬಿದನೂರುನಲ್ಲಿ ನಡೆದ ಅಂತರ ಕಾಲೇಜು ಮಹಿಳಾ ಕಬಡ್ಡಿ ಪಂದ್ಯಾವಳಿಗಳಲ್ಲಿ ಕೋಲಾರದ ಸರ್ಕಾರಿ ಮಹಿಳಾ ಕಾಲೇಜಿನ ತಂಡ ಪ್ರಥಮ ಸ್ಥಾನ ಪಡೆದುಕೊಂಡಿದೆ.

ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್


 rajesh pande