ಹೆರಿಟೇಜ್ ರನ್-2025ಕ್ಕೆ ಸಂಘಗಳಿಂದ ಆರ್ಥಿಕ ನೆರವು
ವಿಜಯಪುರ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಪರಿಸರ ಪ್ರೀಯರು, ಕ್ರೀಡಾಸಕ್ತರು ಹಾಗೂ ಗಣ್ಯರು ಸೇರಿದಂತೆ ಹಲವಾರು ಸಂಘ- ಸಂಸ್ಥೆಗಳು ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿ
ನೆರವು


ವಿಜಯಪುರ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್-2025ಕ್ಕೆ ದಿನಗಣನೆ ಪ್ರಾರಂಭವಾಗಿದ್ದು, ಪರಿಸರ ಪ್ರೀಯರು, ಕ್ರೀಡಾಸಕ್ತರು ಹಾಗೂ ಗಣ್ಯರು ಸೇರಿದಂತೆ ಹಲವಾರು ಸಂಘ- ಸಂಸ್ಥೆಗಳು ಪ್ರಾಯೋಜಕತ್ವಕ್ಕಾಗಿ ಆರ್ಥಿಕ ನೆರವು ನೀಡಿದ್ದಾರೆ.

ಪ್ರತಿವರ್ಷ ವೃಕ್ಷಥಾನ್ ಹೆರಿಟೇಜ್ ರನ್ ಪ್ರಖ್ಯಾತವಾಗುತ್ತಿದ್ದು, ಪ್ರಾಯೋಜಕರೂ ಕೂಡ ಸ್ವಯಂ ಪ್ರೇರಿತರಾಗಿ ಸಂತೋಷದಿಂದ ಹಣಕಾಸಿನ ನೆರವು ನೀಡಿದ್ದಾರೆ.

ಮಾಜಿ ಮೇಯರ್ ಸಜ್ಜಾದೆ ಪೀರಾ ಮುಶ್ರಿಫ್ ರೂ. 2 ಲಕ್ಷ ಆರ್ಥಿಕ ನೆರವು ನೀಡಿದ್ದಾರೆ. ಅದೇ ರೀತಿ ಮುಖಂಡರಾದ ಹಮೀದ್ ಮುಶ್ರಿಫ್ ರೂ. 1.50 ಲಕ್ಷ, ಜಮೀರ ಬಕ್ಷಿ, ನೇತ್ರತಜ್ಞ ಡಾ. ಪ್ರಭುಗೌಡ ಲಿಂಗದಳ್ಳಿ, ವ್ಯಾಪಾರಸ್ಥರ ಸಂಘ, ಕ್ರಡೈ, ಅಬ್ದಲ್ ಪೀರಾ ಜಮಖಂಡಿ, ಕಿಶೋರ್ ಜೈನ್ ಮತ್ತು ಜಿಓಸಿಸಿ ಬ್ಯಾಂಕ್ ತಲಾ ರೂ. 1 ಲಕ್ಷ ನೀಡಿದ್ದಾರೆ. ಅಲ್ಲದೇ, ನೆಸ್ಟಾ ಕಾರ್ಪ್ ಸೊಲೂಷನ್ಸ್ ಪ್ರೈ. ಲಿ., ಟಿ. ಆರ್. ಓಸ್ವಾಲ, ಸಂಜಯ ಗುಪ್ತಾ, ಡಾ. ಸುನೀಲ ಕಲ್ಲೂರ ತಲಾ ರೂ. 50 ಸಾವಿರ ಹಣ ನೀಡಿದ್ದಾರೆ. ಮೈನೂದ್ದೀನ್ ಬೀಳಗಿ, ಸನ್ನಿ ಗವಿಮಠ, ಡಾ.ಗಂಗಾಧರ ಸಂಬಣ್ಣಿ ತಲಾ ರೂ. 25 ಸಾವಿರ ಹಾಗೂ ಮೋಯಿನ್ ಶೇಖ್ ರೂ.10 ಸಾವಿರ ಪ್ರಾಯೋಜಕತ್ವ ಹಣ ನೀಡಿದ್ದಾರೆ ಎಂದು ವೃಕ್ಷ ಅಭಿಯಾನ ಪ್ರತಿಷ್ಠಾನದ ಮಾಧ್ಯಮ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande