
ಹಾಸನ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕನಿಷ್ಠ 2.5 ಎಕರೆ ತೆಂಗಿನ ತೋಟ ಹೊಂದಿರುವ ರೈತರಿಗೆ ಕೊಬ್ಬರಿ ಸಂಸ್ಕರಣಾ,ಶೇಖರಣಾ ಘಟಕ (ಪ್ರಾಥಮಿಕ ಸಂಸ್ಕರಣಾ ಘಟಕ) ನಿರ್ಮಾಣಕ್ಕೆ ತೆಂಗು ಅಭಿವೃದ್ಧಿ ಮಂಡಳಿಯಿಂದ ಆರ್ಥಿಕ ಸಹಾಯ ಲಭ್ಯವಿದ್ದು, ಆಸಕ್ತಿ ಹೊಂದಿರುವವರು ಈ ಯೋಜನೆಯ ಸದುಪಯೋಗಪಡಿಸಿಕೊಳ್ಳಬೇಕಾಗಿ ಕೋರಲಾಗಿದೆ.
ಅರ್ಜಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಡಿಸೆಂಬರ್ 15 ಆಗಿದ್ದು, ಅರ್ಜಿಗಳನ್ನು ಉಪ ನಿರ್ದೇಶಕರು, ಪ್ರಾದೇಶಿಕ ಕಚೇರಿ, ತೆಂಗು ಅಭಿವೃದ್ಧಿ ಮಂಡಳಿ, ಕೆರಾ ಭವನ, ರಾಯಲ್ ಮೀನಾಕ್ಷಿ ಮಾಲ್ ಎದುರು, ಬನ್ನೇರುಘಟ್ಟ ರಸ್ತೆ, ಹುಳಿಮಾವು, ಬೆಂಗಳೂರು – 560076. ದೂರವಾಣಿ-080-26593750
website link- https://coconutboard.gov.in/docs/AppForm_ProcessingCentre.pdf ವಿಳಾಸಕ್ಕೆ ಕಳುಹಿಸಬೇಕಾಗಿ ತಿಳಿಸಲಾಗಿದೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa