
ಕೋಲಾರ, ೦೨ ಡಿಸೆಂಬರ್ (ಹಿ.ಸ) :
ಆ್ಯಂಕರ್ : ಹತ್ತಾರು ಹಳ್ಳಿಗಳ ಜೀವನಾಡಿಯಾಗಿರುವ ಕೆರೆ, ದೇವಸ್ಥಾನ, ಪರಿಸರ, ಹಾಗೂ ಜಾನುವಾರುಗಳು ಮತ್ತು ಕಾಡು ಪ್ರಾಣಿಗಳರಕ್ಷಣೆಗಾಗಿ ಎಸ್.ಅಗ್ರಹಾರ ಸ.ನಂ. ೬೦ ಹಾಗೂ ಇರಗಸಂದ್ರ ಸ.ನಂ. ೫೨ ರಲ್ಲಿ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಗ್ರಾಮಸ್ಥರು ಮತ್ತು ರೈತ ಸಂಘದಿ0ದ ರಾಜ್ಯ ಹೆದ್ದಾರಿ ಚಿಟ್ನಹಳ್ಳಿ ಗೇಟ್ ಬಂದ್ ಮಾಡಿ, ಸಂಬ0ಧಪಟ್ಟ ಪರಿಸರ ಗಣಿ ಕಂದಾಯ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.
ಗಣಿಗಾರಿಕೆಗೆ ಅನುಮತಿ ನೀಡಲು ಮುಂದಾಗಿರುವ ಜಮೀನಿನ ಪಕ್ಕದಲ್ಲಿಯೇ ಹತ್ತಾರು ಹಳ್ಳಿಗಳಿಗೆ ಚಾನುವಾರುಗಳಿಗೆ ಹಾಗೂ ವ್ಯವಸಾಯಕ್ಕೆ ಯೋಗ್ಯ ಹಾಗೂ ಗುಣಮಟ್ಟದ ನೀರು ಸಿಗುವ ಕೆರೆ ಇರುವ ಜೊತೆಗೆ ಪಕ್ಕದಲ್ಲಿಯೇ ಚೌಡೇಶ್ವರಿ ದೇವಸ್ಥಾನವು ಅಭಿವೃದ್ಧಿಯಾಗಿದೆ. ಪ್ರತಿ ವರ್ಷ ೧೦ ಸಾವಿರ ಜನ ಭಕ್ತಾದಿಗಳು ಸೇರುವ ಪ್ರದೇಶವಾಗಿದೆ. ಅದರ ಜೊತೆಗೆ ಸಾವಿರಾರು ಜಿಂಕೆಗಳು ನವಿಲುಗಳು ಕಾಡು ಪ್ರಾಣಿಗಳು ಪ್ರತಿ ದಿನ ಕೆರೆಯಲ್ಲಿ ನೀರು ಕುಡಿಯುತ್ತಿರುತ್ತವೆ. ಒಂದು ವೇಳೆ ಗಣಿಗಾರಿಕೆಗೆ ಅವಕಾಶಕೊಟ್ಟರೆ, ಕೆರೆ, ಮಾಲಿನ್ಯ ವಾಗುವ ಜೊತೆಗೆ ಗಣಿಗಾರಿಕೆ ಸೃಷ್ಟಿಸುವ ದೂಳಿನಿಂದ ಸುತ್ತಮುತ್ತಲ ಹತ್ತಾರು ಹಳ್ಳಿಗಳ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಎಂದು ರೈತ ಸಂಘ ಆತಂಕ ವ್ಯಕ್ತಪಡಿಸಿತು.
ಅಮಾನಿಕೆರೆಗೆ ಕೆ.ಸಿವ್ಯಾಲಿ ನೀರು ಬಂದು ರೈತರ ಬದುಕು ಬೀದಿಗೆ ಬೀಳುವ ಜೊತೆಗೆ ಬೆಳೆ ಬೆಳೆಯಲ್ಲಾಗದೇ ನೀರು, ಕುಡಿಯಲಾಗದೆ. ತೊಂದರೆಯಲ್ಲಿರುವ ರೈತರಿಗೆ ವರದಾನವಾಗಿರುವ ನೂರಾರು ವರ್ಷಗಳ ಇತಿಹಾಸ ಇರುವ ಮೂರು ತಲಾಂತರದಿAದ ಕೆರೆ ನೀರನ್ನೇ ಕುಡಿದು ೧೦೦ ರಿಂದ ೧೩೦ ವರ್ಷ ಬದುಕಿರುವ ಇತಿಹಾವುಳ್ಳ ಕೆರೆಯನ್ನು ಹಾಳು ಮಾಡುವ ಗಣಿಗಾರಿಕೆಗೆ ಅನುಮತಿ ನೀಡಬಾರದು ಕೋಟಿಕೊಟ್ಟರೂ ಸಿಗದ ಶುದ್ಧ ನೀರನ್ನು ಉಳಿಸಿಕೊಡಬೇಕೆಂದು ಗ್ರಾಮಸ್ಥರ ಒತ್ತಾಯ ಮಾಡಿದರು.
ಸ.ನಂ. ೬೦ ಹಾಗೂ ೫೨ ರಲ್ಲಿ ೧೨೦ ಎಕರೆ ಸರ್ಕಾರಿ ಗೋಮಾಳ ಜಮೀನು ಇದ್ದು, ಇದರಲ್ಲಿ ೪೦ ಕ್ಕೂ ಹೆಚ್ಚು ಭೂಮಿ ಇಲ್ಲದ ಅತಿ ಸಣ್ಣ ರೈತರು ಸಾಗುವಳಿ ಮಾಡುವ ಜೊತೆಗೆ ವಿವಿಧ ವಾಣಿಜ್ಯ ಬೆಳೆಗಳನ್ನು ಬೆಳೆದು ಸ್ವಾಭಿಮಾನದ ಬದುಕನ್ನು ಕಟ್ಟಿಕೊಳ್ಳುವ ಜೊತೆಗೆ ಜಾನುವಾರುಗಳನ್ನು ಉಪ ಕಸಬಾಗಿ ಮಾಡಿಕೊಂಡು ಆ ಗೋಮಾಳ ಜಮೀನಿನಲ್ಲಿ ಸುತ್ತಮುತ್ತಲ ಹತ್ತಾರು ಹಳ್ಳಿಗಳು ಜಾನುವಾರುಗಳನ್ನು ಮೇಯಿಸಿಕೊಂಡು ಜೀವನ ಸಾಗಿಸುತ್ತಿದ್ದಾರೆ. ರೈತರ ಹೊಟ್ಟೆ ಮೇಲೆ ಬೆಂಗಳೂರು ಮೂಲದವರು ಗಣಿಗಾರಿಕೆ ಮಾಡಲು ಮೂರು ಅರ್ಜಿಗಳನ್ನು ಸುಮಾರು ೧೨ ಎಕರೆ ಜಮೀನಿಗೆ ಸಲ್ಲಿಸಿದ್ದು, ಕೆಲವು ರಾಜಕೀಯ ವ್ಯಕ್ತಿಗಳು ಜಿಲ್ಲೆಯ ಹಿರಿಯ ಅಧಿಕಾರಿಗಳ ಮೇಲೆ ಒತ್ತಡ ಹಾಕಿ ಗಣಿಗಾರಿಕೆಗೆ ಅನುಮತಿ ನೀಡುವಂತೆ ಒತ್ತಾಯಿಸುತ್ತಿರುವುದರಿಂದ ಸುತ್ತಮುತ್ತಲ ಹತ್ತಾರು ಗ್ರಾಮಗಳ ರೈತರ ಕೂಲಿ ಕಾರ್ಮಿಕರ ಬದುಕು ಬೀದಿಗೆ ಬೀಳುವಂತಾಗಿದೆ. ಯಾವುದೇ ಕಾರಣಕ್ಕೂ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಗ್ರಾಮ ಪಂಚಾಯಿತಿ ಸದಸ್ಯ ನಂದೀಶ್ ಅರ್ಜುನ್ ಹಾಗೂ ನಾಗೇಶ್ ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ಒಂದು ವರ್ಷದಿಂದ ಗಣಿಗಾರಿಕೆಗೆ ಅವಕಾಶ ನೀಡಬಾರದೆಂದು ಸುತ್ತಮುತ್ತಲ ಗ್ರಾಮಸ್ಥರು ಹಿರಿಯ ಅಧಿಕಾರಿಗಳಿಗೆ ಮನವಿ ನೀಡಿದ್ದರೂ ಆ ಮನವಿಯನ್ನು ಮರೆ ಮಾಚಿ ರಾಜಕೀಯ ವ್ಯಕ್ತಿಗಳ ಒತ್ತಡಕ್ಕೆ ಮಣಿದು ಸುತ್ತಮುತ್ತಲ ಗ್ರಾಮದ ರೈತ, ಕೂಳಕಾರ್ಮಿಖರಿಗೆ ಮಾಹಿತಿ ನೀಡದೇ ಸಂಜೆ ವೇಳೆಯಲ್ಲಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ಇರುವ ವಾಸ್ತವಾಂಶವನ್ನು ಮರೆಮಾಚಿ ಕೆರೆ, ದೇವಸ್ಥಾನ, ಜಾನುವಾರುಗಳು ಹಾಗೂ ಕಾಡು ಪ್ರಾಣಿಗಳ ಬಗ್ಗೆ ವರದಿ ನೀಡುವಾಗ ತಪ್ಪು ಮಾಹಿತಿ ನೀಡಿ ಗಣಿ ಅಧಿಕಾರಿಗಳಿಗೆ ಪರವಾನಿಗೆ ನೀಡಲು ಸೂಚಿಸಿರುವುದು ನ್ಯಾಯವೇ ಎಂದು ಅಧಿಕಾರಿಗಳನ್ನು ಪ್ರಶ್ನೆ ಮಾಡಿದರು.
ಮನವಿ ಸ್ವೀಕರಿಸಿ ಮಾತನಾಡಿದ ಗಣಿ ಪರಿಸರ.ಕಂದಾಯ ಅಧಿಕಾರಿಗಳು ಹತ್ತಾರು ಹಳ್ಳಿಯ ಸಾವಿರಾರು ರೈತರು ಗಣಿಗಾರಿಕೆಗೆ ತಕರಾರು ಇರುವುದರಿಂದ ಅವಕಾಶ ಮತ್ತು ಪರವಾನಿಗೆ ನೀಡುವುದಿಲ್ಲ ಎಂದು ಭರವಸೆ ನೀಡಿದರು.
ಹೋರಾಟದಲ್ಲಿ ಗ್ರಾಮ ಪಂಚಾಯಿತಿಯ ಸದ್ಯಸ್ಯರಾದ ಭೂಪತಿಗೌಡ. ಮಾದಮಂಗಲ ನಾಗರಾಜ ಬಾಸ್ಕರ. ಕೃಷ್ಣಪ್ಪ..ಮಂಜುನಾಥ. ಯಳೇಗೌಡ. ರಾಮು. ತಿಮ್ಮಣ್ಣ, ಗಿರೀಶ್, ರಾಜು, ಆಂಜಿನಪ್ಪ, ನಾಗರಾಜ್, ಕೃಷ್ಣಪ್ಪ, ಚಂದ್ರು, ಮುನಿಶಾಮಪ್ಪ, ಶ್ರೀನಿವಾಸ್, ವೆಂಕಟರವಣಪ್ಪ, ಹತ್ತಾರು ಹಳ್ಳಿಯ ನೂರಾರು ರೈತರು ಹಾಗೂ ರೈತ ಕೂಲಿಕಾರ್ಮಿಕರು ಭಾಗವಹಿಸಿದ್ದರು.
ಚಿತ್ರ : ಕೋಲಾರ ತಾಲ್ಲೂಕಿನ ಎಸ್.ಅಗ್ರಹಾರ ಕೆರೆ ಸಮೀಪ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಬಾರದೆಂದು ಒತ್ತಾಯಿಸಿ ರೈತ ಸಂಘದ ಆಶ್ರಯದಲ್ಲಿ ಚಿಟ್ನಹಳ್ಳಿ ಬಳಿ ರೈತರು ಪ್ರತಿಭಟನೆ ನಡೆಸಿದರು.
ಹಿಂದೂಸ್ತಾನ್ ಸಮಾಚಾರ್ / ಎಸ್.ಚಂದ್ರಶೇಖರ್