ರೈತರ ಕೋಪ, ಶಿಕ್ಷಕರ ಶಾಪಕ್ಕೆ ಕಾಂಗ್ರೆಸ್ ಬಲಿಯಾಗಲಿದೆ : ಗೋವಿಂದಗೌಡ್ರ
ಗದಗ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯಾದ್ಯಂತ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ , ಧರಣಿಯಲ್ಲಿ ನಿರತರಾದರು ಕೂಡ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರನ್ನು ನಿರ್ಲಕ್ಷಿಸುತ್ತಿರುವುದು ಗಣಘೋರ ಅಪರಾಧವೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿ
ಫೋಟೋ


ಗದಗ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯಾದ್ಯಂತ ರೈತರು ವಿವಿಧ ಬೇಡಿಕೆಗಳ ಈಡೇರಿಕೆಗೆ ಪ್ರತಿಭಟನೆ , ಧರಣಿಯಲ್ಲಿ ನಿರತರಾದರು ಕೂಡ ರಾಜ್ಯ ಸರ್ಕಾರ ರೈತರ ಸಮಸ್ಯೆಗಳಿಗೆ ಸ್ಪಂದಿಸದೆ ರೈತರನ್ನು ನಿರ್ಲಕ್ಷಿಸುತ್ತಿರುವುದು ಗಣಘೋರ ಅಪರಾಧವೆಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ರಾಜ್ಯ ಸರ್ಕಾರದ ನಿರ್ಲಕ್ಷದ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಈ ಸರಕಾರದ ಅವಧಿಯಲ್ಲಿ ರೈತರು ಸಂಕಟಕ್ಕೆ ಸಿಲುಕಿದ್ದು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ತಮ್ಮ ಕುರ್ಚೆ ಕಾದಾಟಕ್ಕೆ ರೈತ ಸಮುದಾಯವನ್ನು ಸಂಕಟಕ್ಕೆ ದೂಡಿದೆ. ರೈತರು ರಾಜ್ಯದ್ಯಂತ ಬೆಂಬಲ ಬೆಲೆಗಳನ್ನು ಘೋಷಿಸಿ, ಖರೀದಿ ಕೇಂದ್ರವನ್ನು ಸ್ಥಾಪಿಸುವಂತೆ ಒತ್ತಾಯಿಸಿ ಧರಣಿ ಹಾಗೂ ಪ್ರತಿಭಟನೆಗಳನ್ನು ಮಾಡುತ್ತಿದ್ದರು ಕೂಡ ಸಂಬಂಧ ಪಟ್ಟ ಮಂತ್ರಿಗಳಾಗಲಿ ಸರಕಾರದ ಪ್ರತಿನಿಧಿಯಾಗಲಿ ರೈತರ ಸಂಕಟವನ್ನು ಕೇಳುವ ಸೌಜನ್ಯವೂ ಕೂಡ ಈ ಸರ್ಕಾರಕ್ಕೆ ಇಲ್ಲದಾಗಿದೆ. ಅದೇ ರೀತಿ ಅರೆಕಾಲಿಕ ಉಪನ್ಯಾಸಕರು ಕೂಡ ಧರಣಿಯಲ್ಲಿ ಧರಣಿ ನಡೆಸುತ್ತಾ 10 ದಿನಗಳು ಕಳೆದರೂ ಅವರ ಸಮಸ್ಯೆಗೆ ಕಿವಿಗೊಡದೆ. ಅರೆ ಕಾಲಿಕ ಉಪನ್ಯಾಸಕರು ರಸ್ತೆಯಲ್ಲಿ ಪ್ರತಿಭಟನೆ ಮಾಡಿದರೂ ಕೂಡ ಅವರ ಸಮಸ್ಯೆಗಳನ್ನು ಕೇಳಲು ಕೂಡ ಈ ಸರ್ಕಾರಕ್ಕೆ ಸಮಯವಿಲ್ಲ ಆದರೆ ಬ್ರೇಕ್ ಫಾಸ್ಟ್, ಡಿನ್ನರ್ ಮೀಟಿಂಗ್ ಅಂತ ಕಾಲಹರಣ ಮಾಡುತ್ತಿದ್ದು ಈ ಕಾಂಗ್ರೆಸ್ ಸರ್ಕಾರ ಶಿಕ್ಷಕರನ್ನು ಭಿಕ್ಷಕರಂತೆ ಕಾಣುತ್ತಿದೆ ಎಂದರು.

65 ಸಾವಿರ ಶಿಕ್ಷಕರನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ವಿಳಂಬ ಮಾಡುವುದರಿಂದ ಮಕ್ಕಳ ಭವಿಷ್ಯಕ್ಕೆ ಮಾರಕವಾಗಿದೆ ಎಂದು ವೆಂಕನಗೌಡ ಆರ್ ಗೋವಿಂದಗೌಡ್ರ ರಾಜ್ಯದ ಕಾಂಗ್ರೆಸ್ ಸರ್ಕಾರದ ಶಿಕ್ಷಕರ ವಿರೋಧಿ ನೀತಿಯನ್ನು ಕಟುವಾಗಿ ಟೀಕಿಸಿದ್ದಾರೆ.

ಈ ಸರಕಾರ ಬಂದಮೇಲೆ ಯಾರಿಗೂ ನೆಮ್ಮದಿಯೇ ಇಲ್ಲದಂತಾಗಿದೆ ಇದರ ಪರಿಣಾಮ ಇದಕ್ಕೆ ತಟ್ಟಲಿದೆ ಎಂದು ಅವರು ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಟೀಕಿಸಿದರೆ.ಇದೇ ರೀತಿ ಈ ಕಾಂಗ್ರೆಸ್ ಸರ್ಕಾರ ಮುಂದುವರೆದರೆ ಕಾಂಗ್ರೆಸ್ ಪಕ್ಷಕ್ಕೆ ರೈತರ ಕೋಪ ಹಾಗೂ ಶಿಕ್ಷಕರ ಶಾಪಕ್ಕೆ ಬಲಿಯಾಗುವುದು ಖಂಡಿತ ಎಂದು ಜೆಡಿಎಸ್ ಪಕ್ಷದ ರಾಜ್ಯ ವಕ್ತರ ವೆಂಕನಗೌಡ ಆರ್ ಗೋವಿಂದಗೌಡ್ರ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಿದ್ದಾರೆ. ಹೆಚ್ಚಿನ ಅನಾಹುತಗಳು ಆಗುವ ಮೊದಲು ರಾಜ್ಯ ಸರ್ಕಾರ ಎಚ್ಚೆತ್ತುಕೊಂಡು ರೈತರ ಹಾಗೂ ಶಿಕ್ಷಕರ ಸಮಸ್ಯೆಗೆ ಸ್ಪಂದಿಸಬೇಕೆಂದು ಜೆಡಿಎಸ್ ಪಕ್ಷದ ಮುಖಂಡರುಗಳಾದ ಬಸವರಾಜ ಅಪ್ಪಣ್ಣವರ್ ಪ್ರಫುಲ್ ಪುಣೆಕರ್ ಜಿಕೆ ಕೊಳ್ಳಿಮಠ ಸಿದ್ದಲಿಂಗಯ್ಯ ಹೊಂಬಾಳಿಮಠ ಮಂಜುಳಾ ಮೇಟಿ ಅಭಿಷೇಕ ಕಂಬಳಿ ಕಲ್ಕು ಸಾ ಸಿಂಗರಿ ಅಭಿಷೇಕ ದೇಸಾಯಿ ಶರಣಪ್ಪ ಹೂಗಾರ್ ಲಲಿತಾ ಹಿರೇಕಲ್ಲಪ್ಪನವರ್ ಪತ್ರಿಕಾ ಪ್ರಕಟಣೆಯ ಮೂಲಕ ರಾಜ್ಯ ಸರ್ಕಾರವನ್ನು ಎಚ್ಚರಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande