
ಕೊಪ್ಪಳ, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಪ್ರಾಂತೀಯ ವ್ಯವಸ್ಥಾಪಕರು, ಕರ್ಣಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು, ಕಲಬುರಗಿ ಪ್ರಾಂತೀಯ ಕಚೇರಿಯ ವರದಿಯನ್ವಯ ಜಿಲ್ಲೆಯಲ್ಲಿ ಕರ್ನಾಟಕ ಸಹಖಾರಿ ಸಂಘಗಳ ಕಾಯ್ದೆ 1997 ರ ಅಡಿಯಲ್ಲಿ ನೋಂದಣಿಗೊಂಡು ಸಂಘದ ಬೈಲಾ ರೀತ್ಯಾ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿರುವ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ಹಾಗೂ ಮುಂದೆ ಇವುಗಳನ್ನು ನೋಂದಣಿ ರದ್ದತಿಗೆ ಕ್ರಮವಿಡಲಾಗುತ್ತಿದ್ದು, ಈ ಕುರಿತು ಸಂಬಂಧಿಸಿದವರಿಂದ ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ.
ಕನಕಗಿರಿ ತಾಲ್ಲೂಕಿನ ನವಲಿಯ ವಿಶ್ವಾಸ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ., ಕುಷ್ಟಗಿ ತಾಲ್ಲೂಕಿನ ಹನುಮಸಾಗರದ ಅನ್ನಪೂರ್ಣೇಶ್ವರಿ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ., ಕುಷ್ಟಗಿಯ ಕಾಯಕಲ್ಪ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ನಿ., ಕುಕನೂರಿನ ಐಶ್ವರ್ಯ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ. ಹಾಗೂ ಯಲಬುರ್ಗಾ ತಾಲ್ಲೂಕು ರೆಡ್ಡಿ ನೌಕರರ ಪತ್ತಿನ ಸಹಕಾರಿ ಸಂಘ ನಿ., ಮತ್ತು ಕೊಪ್ಪಳದ ಮಹಾಲಕ್ಷ್ಮೀ ಸ್ವಶಕ್ತಿ ಮಹಿಳಾ ಸೌಹಾರ್ದ ಸ್ವ ಸಹಾಯ ಸಹಕಾರಿ ನಿ., ಈ ಸಹಕಾರ ಸಂಘಗಳನ್ನು ಸಮಾಪನೆಗೊಳಿಸಲು ಕ್ರಮ ವಹಿಸಲಾಗುತ್ತಿದೆ.
ಈ ಬಗ್ಗೆ ಆಕ್ಷೇಪಣೆಗಳಿದ್ದಲ್ಲಿ ಈ ಪ್ರಕಟಣೆ ಹೊರಡಿಸಿದ 15 ದಿನಗಳೊಳಗಾಗಿ ಅಗತ್ಯ ದಾಖಲಾತಿಗಳೊಂದಿಗೆ ಸಕ್ಷಮ ನಿಬಂಧಕರಿಗೆ ಸಲ್ಲಿಸಬೇಕು ಎಂದು ಕೊಪ್ಪಳ ಸಹಕಾರ ಸಂಘಗಳ ಉಪ ನಿಬಂಧಕರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್