ವಿಶ್ವ ಏಡ್ಸ್ ದಿನ ಕುರಿತು ಕ್ಯಾಂಡಲ್ ದಿನ ಆಚರಣೆ
ಗದಗ, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ತಡೆಗಟ್ಟುವಿಕೆ ಮತ್ತು ನಿಯಂತ್ರಣಘಟಕ, ಜಿಲ್ಲಾ ವಾರ್ತಾ ಪ್ರಸಾರ ಇಲಾಖೆ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ
ಫೋಟೋ


ಗದಗ, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಹಾಗೂ ಜಿಲ್ಲಾ ಏಡ್ಸ್ತಡೆಗಟ್ಟುವಿಕೆ ಮತ್ತು ನಿಯಂತ್ರಣಘಟಕ, ಜಿಲ್ಲಾ ವಾರ್ತಾ ಪ್ರಸಾರ ಇಲಾಖೆ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟ, ಚೈತನ್ಯ ಗ್ರಾಮೀಣ ಅಭಿವೃದ್ದಿ ಸಂಸ್ಥೆ ಗದಗ ಇವರುಗಳ ಸಹಯೋಗದೊಂದಿಗೆ ನಗರದ ಗಾಂಧೀ ವೃತ್ತದಲ್ಲಿ ವಿಶ್ವಏಡ್ಸ್ ದಿನದ ನಿಮಿತ್ಯ ಕ್ಯಾಂಡಲ್ ದಿನ ಮತ್ತು ಆಚರಣಾ ಕಾರ್ಯಕ್ರಮ ಜರುಗಿತು.

ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ. ಅರುಂಧತಿ ಕುಲಕರ್ಣಿ ಪ್ರಾಸ್ತಾವಿಕವಾಗಿ ಮಾತನಾಡಿ ಹೆಚ್.ಐ.ವಿ. ಸೋಂಕಿನಿಂದ ಮರಣಿಸಿದವರ ಸಂತಾಪ ಸೂಚಕವಾಗಿ ಶೋಕ ವ್ಯಕ್ತ ಪಡಿಸಲು ಹಾಗೂ ಅವರಿಗೆ ಚಿರಶಾಂತಿ ಕೋರಲು ಕ್ಯಾಂಡಲ್ ದಿನವನ್ನು ಹಮ್ಮಿಕೊಂಡಿದ್ದು, ಸೋಂಕಿತರು ಎದೆಗುಂದದೆ ಮಾನಸಿಕ ಸ್ಥೈರ್ಯ ಮತ್ತು ಸದೃಢತೆಯಿಂದ ಜೀವನ ಸಾಗಿಸಲು ಸಂಘ ಸಂಸ್ಥೆಗಳು ಇಲಾಖೆಯೊಂದಿಗೆ ಕೈಜೋಡಿಸಿ ಶ್ರಮಿಸಲು ತಿಳಿಸಿದರು. ಸರಕಾರಿ ಆಸ್ಪತ್ರೆಗಳಲ್ಲಿ ಐ.ಸಿ.ಟಿ.ಸಿ ಆಪ್ತ ಸಮಾಲೋಚಕರು ರೋಗಿಗಳಿಗೆ ನೈತಿಕ ಸ್ಥೈರ್ಯ ಮತ್ತು ಮಾನಸಿಕ ಬೆಂಬಲವನ್ನು ನೀಡಿ ಆಪ್ತ ಸಮಾಲೋಚನೆ ಮಾಡುತ್ತಿದ್ದು, ರೋಗಿಗಳು ಭಯಮುಕ್ತವಾಗಿ ಸಮಾಜದಲ್ಲಿ ಬದುಕಲು ಸಾಧ್ಯವಾಗಿದೆ. ಜೋತೆಗೆ ಹೆಚ್.ಐ.ವಿ. ಏಡ್ಸ್ ಮಸೂದೆ-2017 ಬದುಕಿಗೆಇನ್ನಷ್ಟು ಬಲ ನೀಡಿದೆಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಸತೀಶ ಪರ್ವತಗೌಡರ ಮಾಜಿ ನಗರಸಭಾ ಸದಸ್ಯರು, ಎ.ಆರ್.ಟಿ. ಕೇಂದ್ರದ ಸಿಬ್ಬಂದಿ, ಐ.ಸಿ.ಟಿ.ಸಿ ಸಿಬ್ಬಂದಿ, ಡ್ಯಾಪ್ಕೂö್ಯ ಸಿಬ್ಬಂದಿ, ರಕ್ಷಣೆ ಜಿಲ್ಲಾ ಮಹಿಳಾ ಒಕ್ಕೂಟದ ಶ್ರೀಮತಿ ಹಜರತಬಿ ಹಾಗೂ ಸದಸ್ಯರು, ಚೈತನ್ಯಗ್ರಾಮೀಣಅಭಿವೃದ್ದಿಸಂಸ್ಥೆಯ ಸುನೀಲ ಹಾಗೂ ಸದಸ್ಯರು, ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗು ಎನ್.ಜಿ.ಓ. ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಶ್ರೀಮತಿ ಸುಮಿತ್ರಾ ಮಾವಿನಕಾಯಿ ಪ್ರಾರ್ಥಿಸಿದರು. ಬಸವರಾಜ ಲಾಳಗಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ ಬಡಿಗೇರ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande