

ರಾಯಚೂರು, 02 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಆಕಸ್ಮಿಕವಾಗಿಯಾಗಲಿ ಅಥವಾ ಜೀವನದ ತಪ್ಪು ಹೆಜ್ಜೆಗಳಿಂದಾಗಲಿ ವ್ಯಕ್ತಿಯು ಹೆಚ್‍ಐವಿ ಸೋಂಕಿಗೆ ಒಳಗಾಗಿ ಜೀವನದ ಸುಂದರ ಕ್ಷಣಗಳನ್ನು ದೂರ ಮಾಡಿಕೊಳ್ಳುವ ದುರದೃಷ್ಟಕರ ಸನ್ನಿವೇಶಗಳಿಂದ ಪಾರಾಗಲು ಇರುವ ಸುರಕ್ಷತಾ ಕ್ರಮಗಳ ಜಾಗೃತಿ ಕಾರ್ಯಕ್ಕೆ ನಾವೆಲ್ಲರೂ ಕೈಜೊಡಿಸಿಬೇಕೆಂದು ಪ್ರಜಾಪೀತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಸ್ಮೀತಾ ಅಕ್ಕ ಮನವಿ ಮಾಡಿದರು.
ನಗರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರಿಮ್ಸ್ ನಸಿರ್ಂಗ್ ಕಾಲೇಜು, ಡ್ಯಾಪ್ಕೋ ಹಾಗೂ ಹೊಸಬೆಳಕು ಸಂಸ್ಥೆ ಸಹಯೋಗದಲ್ಲಿ ಹೆಚ್‍ಐವಿ ಜಾಗೃತಿಯ ಮೆಣದ ಬತ್ತಿಯೊಂದಿಗೆ ಜಾಗೃತಿ ನಡಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಸಮುದಾಯದಲ್ಲಿ ಏಡ್ಸ್ ಪಸರಿಸದಂತೆ ಎಚ್ಚರ ವಹಿಸುವುದು ಮತ್ತು ಜನತೆಗೆ ತಿಳಿ ಹೇಳುವುದು ನಮ್ಮೆಲ್ಲರ ಮಹತ್ವದ ಕಾರ್ಯವಾಗಬೇಕಿದೆ. ಇದು ಒಬ್ಬರಿಂದ ಸಾಧ್ಯವಾದುದಲ್ಲ. ಯುವ ಜನತೆಯು ಇದರಲ್ಲಿ ಪ್ರಮುಖ ಪಾತ್ರ ವಹಿಸಬೇಕಿದೆ ಎಂದರು.
ಈ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸುರೇಂದ್ರ ಬಾಬು ಅವರು ಮತನಾಡಿ, ಕಳೆದ ನಾಲ್ಕು ದಶಕಗಳಿಂದ ಸರಕಾರವು ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ನಾನಾ ಕಾರ್ಯಕ್ರಮ ರೂಪಿಸಿದೆ.
ಸೋಂಕಿಗೆ ಒಳಗಾದಾಗ ಅನುಭವಿಸುವ ಆರೋಗ್ಯ ಸಮಸ್ಯೆಗಳ ಗಂಭೀರತೆಯನ್ನು ಜನತೆಗೆ ಮನವರಿಕೆ ಮಾಡಿಕೊಡುತ್ತಿದೆ. ಹದಿಹರೆಯದವರ ಭವಿಷ್ಯದ ದೃಷ್ಟಿಯಿಂದ ಇಂದಿನಿಂದಲೇ ನಾವು ಜೀವನ ಜೋಪಾನಕ್ಕಾಗಿ ಅರಿವಿನ ಬತ್ತಿ ಹಚ್ಚೋಣವೆಂದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಆರ್‍ಸಿಹೆಚ್ ಅಧಿಕಾರಿ ಡಾ.ನಂದಿತಾ ಎಂ ಎನ್, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಗಣೇಶ ಕೆ., ಕುಟುಂಬ ಕಲ್ಯಾಣ ಕಾರ್ಯಕ್ರಮ ಅಧಿಕಾರಿ ಡಾ.ಶಿವಕುಮಾರ ನಾರಾ, ಮನೋವೈದ್ಯ ಡಾ.ಮನೋಹರ ಪತ್ತಾರ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ಹೆಚ್ ದಾಸಪ್ಪನವರ, ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಬಸಯ್ಯ, ಜಿಲ್ಲಾ ಡ್ಯಾಪ್ಕೋ ಮೇಲ್ವಿಚಾರಕ ಮಲ್ಲಯ್ಯ ಮಠಪತಿ, ರಿಮ್ಸ್ ನಸಿರ್ಂಗ್ ಕಾಲೇಜಿನ ಬೋಧಕರಾದ ಸಂತೋಷಕುಮಾರ, ಹೊಸ ಬೆಳಕು ಸಂಸ್ಥೆಯ ಅಧ್ಯಕ್ಷ ಅಮರಯ್ಯ ಸ್ವಾಮಿ, ದೇವರಾಜ್, ಜಿಲ್ಲಾ ಕ್ಷಯರೋಗ ಮೇಲ್ವಿಚಾರಕರ ಅಮರೇಶ, ಎಂಟಿಎಸ್ ಸಂಧ್ಯಾ ಸೇರಿದಂತೆ ಕ್ಷಯರೋಗ, ಡ್ಯಾಪ್ಕೋ, ಎಆರ್‍ಟಿ ಸಿಬ್ಬಂದಿಯರು, ಆಶಾ ಕಾರ್ಯಕರ್ತೆಯರು, ನಸಿರ್ಂಗ್ ವಿದ್ಯಾರ್ಥಿನಿಯರು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್