ಲಿಂಗಸಗೂರು ಕೇಂದ್ರ ಬಸ್ ನಿಲ್ದಾಣಕ್ಕೆ ಕೆಕೆಆರ್‍ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಭೇಟಿ
ರಾಯಚೂರು, 02 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೆಕೆಆರ್‍ಟಿಸಿ ಅಧ್ಯಕ್ಷರಾದ ಅರುಣಕುಮಾರ ಎಂ.ವೈ.ಪಾಟೀಲ್ ಅವರು ಇತ್ತೀಚೆಗೆ ಲಿಂಗಸೂಗೂರ ನಗರಕ್ಕೆ ಭೇಟಿ ನೀಡಿದ್ದಾರೆ. ಲಿಂಗಸುಗೂರು ಬಸ್ ನಿಲ್ದಾಣ ಹಾಗೂ ಲಿಂಗಸುಗೂರು ಬಸ್ ಘಟಕದ ಸ್ಥಳಗಳಿಗೆ ಭೇಟಿ ಮಾಡಿ ಅಲ್ಲಿನ ಸಿಬ್ಬಂದಿಯ ಕಾರ್ಯವೈಖರಿಗಳನ್ನು ಪರಿಶೀಲ
ಲಿಂಗಸಗೂರು ಕೇಂದ್ರ ಬಸ್ ನಿಲ್ದಾಣಕ್ಕೆ ಕೆಕೆಆರ್‍ಟಿಸಿ  ಅಧ್ಯಕ್ಷ ಅರುಣಕುಮಾರ ಪಾಟೀಲ್ ಭೇಟಿ


ಲಿಂಗಸಗೂರು ಕೇಂದ್ರ ಬಸ್ ನಿಲ್ದಾಣಕ್ಕೆ ಕೆಕೆಆರ್‍ಟಿಸಿ  ಅಧ್ಯಕ್ಷ ಅರುಣಕುಮಾರ ಪಾಟೀಲ್ ಭೇಟಿ


ಲಿಂಗಸಗೂರು ಕೇಂದ್ರ ಬಸ್ ನಿಲ್ದಾಣಕ್ಕೆ ಕೆಕೆಆರ್‍ಟಿಸಿ  ಅಧ್ಯಕ್ಷ ಅರುಣಕುಮಾರ ಪಾಟೀಲ್ ಭೇಟಿ


ರಾಯಚೂರು, 02 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೆಕೆಆರ್‍ಟಿಸಿ ಅಧ್ಯಕ್ಷರಾದ ಅರುಣಕುಮಾರ ಎಂ.ವೈ.ಪಾಟೀಲ್ ಅವರು ಇತ್ತೀಚೆಗೆ ಲಿಂಗಸೂಗೂರ ನಗರಕ್ಕೆ ಭೇಟಿ ನೀಡಿದ್ದಾರೆ.

ಲಿಂಗಸುಗೂರು ಬಸ್ ನಿಲ್ದಾಣ ಹಾಗೂ ಲಿಂಗಸುಗೂರು ಬಸ್ ಘಟಕದ ಸ್ಥಳಗಳಿಗೆ ಭೇಟಿ ಮಾಡಿ ಅಲ್ಲಿನ ಸಿಬ್ಬಂದಿಯ ಕಾರ್ಯವೈಖರಿಗಳನ್ನು ಪರಿಶೀಲಿಸಿದರು.

ಇದೆ ವೇಳೆ, ಕೆಕೆಆರ್ ಟಿಸಿಯ ಸಿಬ್ಬಂದಿಯ ಸಮಸ್ಯೆಗಳನ್ನು ಆಲಿಸಿದರು. ಅವರು ಉತ್ತಮವಾಗಿ ಮಾಡುತ್ತಿರುವ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಇದೆ ವೇಳೆ, ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳ ಮತ್ತು ಹಿರಿಯ ನಾಗರಿಕರ ಸಾರಿಗೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಹ ಆಲಿಸಿದರು.

ಸುಗಮ ಸಾರಿಗೆ ಸೇವೆಯ ನಡುವೆ ಕೆಲ ಸಮಸ್ಯೆಗಳು ಕಾಣಿಸಿಕೊಂಡಿದ್ದು ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಂಬಂಧಪಟ್ಟ ಹಾಗೂ ಘಟಕ ವ್ಯವಸ್ಥಾಪಕರಿಗೆ ಸೂಚನೆ ನೀಡಿದರು.

ನಮ್ಮ ಕಡೆಯಿಂದ ಬೇಕಾದ ಸಹಾಯ, ಸೌಲಭ್ಯ, ಸಹಕಾರ ಪಡೆಯಲು ಮುಕ್ತವಾಗಿ ತಿಳಿಸಿದರೆ ಖಂಡಿತವಾಗಿ ಸಹಾಯ ಮಾಡುವುದಲ್ಲದೆ ಸುಗಮ ಸಾರಿಗೆ ಜನರ ಊರಿಗೆ ಎನ್ನುವ ಧೇಯವಾಕ್ಯವನ್ನು ಸಫಲಗೊಳಿಸುತ್ತೇವೆ ಎಂದು ಅಧ್ಯಕ್ಷರು ಇದೆ ವೇಳೆ ತಿಳಿಸಿದರು.

ಜನಸ್ನೇಹಿ ಸಾರಿಗೆ ವ್ಯವಸ್ಥೆ ರೂಪಿಸುವುದೇ ನಮ್ಮ ಧ್ಯೇಯೋದ್ದೇಶವಾಗಿದೆ. ಈ ದಿಶೆಯಲ್ಲಿ ಜನರ ಊರಿಗೆ ಸುಗಮ ಸಾರಿಗೆ ಆಶಯ ಸಕಾರಕ್ಕೆ ಶ್ರಮಿಸುತ್ತಿದ್ದೇವೆ.

ಕರ್ನಾಟಕ ರಾಜ್ಯ ಸಾರಿಗೆ ವ್ಯವಸ್ಥೆ ದೇಶದಲ್ಲೇ ಮಾದರಿಯಾಗಿದೆ. ಅದರಲ್ಲೂ ನಮ್ಮ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದಿದ್ದಕ್ಕಾಗಿ ಹತ್ತು ಹಲವು ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿ, ಪುರಸ್ಕಾರಗಳು ಪಡೆದಿದೆ.

ಇದರ ಹೊರತಾಗಿಯೂ ನಾವು ಇನ್ನೂ ಉತ್ತಮ ಜನಸ್ನೇಹಿ ಸಾರಿಗೆ ವ್ಯವಸ್ಥೆ ಹೊಂದುವುದಕ್ಕಾಗಿ ಬೇಕಾದ ಸುಧಾರಣೆಗಳನ್ನು ತರಲು ನಮ್ಮ ಸರ್ಕಾರ ಸಿದ್ಧವಿದೆ.

ನಮ್ಮ ಜನಪರ ಆಲೋಚನೆಗಳನ್ನು ಜಾರಿ ತರುವ ನಿಟ್ಟಿನಲ್ಲಿ ರಾಯಚೂರು ಜಿಲ್ಲೆಯ ಪ್ರವಾಸ ಹಮ್ಮಿಕೊಂಡಿದ್ದಾಗಿ ಇದೆ ವೇಳೆ ಅಧ್ಯಕ್ಷರು ಸುದ್ದಿಗಾರರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಲಿಂಗಸುಗೂರು ಘಟಕದ ವ್ಯವಸ್ಥಾಪಕರಾದ ಪ್ರಕಾಶ ದೊಡ್ಡಮನಿ, ಸಂಸ್ಥೆಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುμÁ್ಠನ ಸಮಿತಿಯ ಅಧ್ಯಕ್ಷರು, ಎಪಿಎಂಸಿ ಅಧ್ಯಕ್ಷರು ಮತ್ತು ಪಕ್ಷದ ಮುಖಂಡರು ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande