ಪ್ರತ್ಯಕ್ಷ ದೇವರೇ ವಿಶೇಷ ಚೇತನ ಮಕ್ಕಳು : ಈಶ್ವರಯ್ಯ ಹಿರೇಮಠ
ಗದಗ, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಟ್ಟೀವಿ ಎಂಬುದು ಮುಖ್ಯ. ದೈವ ಸ್ವರೂಪಿಗಳಾದ ವಿಶೇಷ ಚೇತನ ಮಕ್ಕಳ ಪ್ರತಿಭೆಯನ್ನು ಸಮಾಜಕ್ಕೆ ತೋರಿಸುವುದರ ಮೂಲಕ ಮುಖ್ಯವಾಹಿನಿಗೆ ತರುವ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ವಿಶ್
ಫೋಟೋ


ಗದಗ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಮಾಜ ನಮಗೆ ಏನು ಕೊಟ್ಟಿದೆ ಅನ್ನುವುದಕ್ಕಿಂತ, ನಾವು ಸಮಾಜಕ್ಕೆ ಏನು ಕೊಟ್ಟೀವಿ ಎಂಬುದು ಮುಖ್ಯ. ದೈವ ಸ್ವರೂಪಿಗಳಾದ ವಿಶೇಷ ಚೇತನ ಮಕ್ಕಳ ಪ್ರತಿಭೆಯನ್ನು ಸಮಾಜಕ್ಕೆ ತೋರಿಸುವುದರ ಮೂಲಕ ಮುಖ್ಯವಾಹಿನಿಗೆ ತರುವ ಸೇವೆಯನ್ನು ನಿಸ್ವಾರ್ಥವಾಗಿ ಮಾಡುತ್ತಿರುವ ವಿಶ್ವ ಕಲ್ಯಾಣ ಸಂಸ್ಥೆ ಸೇವಾ ಕಾರ್ಯ ಶ್ಲಾಘನೀವಾಗಿದೆ. ಪ್ರತ್ಯಕ್ಷ ದೇವರೇ ಈ ವಿಶೇಷ ಚೇತನ ಮಕ್ಕಳೆಂದು ಗಣ್ಯ ಉದ್ಯಮಿ ಶ್ರೀ ಈಶ್ವರಯ್ಯ ಹಿರೇಮಠವರು ಹೇಳಿದರು.

ಗದಗ ನಗರದ ವಿಶ್ವ ಕಲ್ಯಾಣ (ರಿ) ಗದಗ ಸಂಚಾಲಿತ ಭುವನೇಶ್ವರಿ ವಿಶೇಷ ಅಗತ್ಯವುಳ್ಳ ಮಕ್ಕಳ ಶಾಲೆಗೆ ಆಗಮಿಸಿ, ಇಲ್ಲಿರುವ ವಿಶೇಷ ಚೇತನ ಮಕ್ಕಳಿಗೆ ಎಲ್ಲ ಸೌಲಭ್ಯಗಳು ಒಂದೇ ಸೂರಿನಡಿ ಸಿಗುವಂತೆ ಮಾಡಿ, ಇವರೆಲ್ಲರೂ ನಮ್ಮಂತೆಯೇ ಸ್ವಾವಲಂಬಿಯಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗೌರವಯುತವಾದ ಜೀವನವನ್ನು ನಡೆಸುವಂತಾಗಲು ಹಾಗೂ ವಿಶೇಷ ಚೇತನ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಬೇಕಾಗುವ ಎಲ್ಲ ರೀತಿಯ ಸಹಾಯ-ಸಹಕಾರ ನೀಡುವುದಾಗಿ ಶ್ರೀ ಈಶ್ವರಯ್ಯ ಹಿರೇಮಠವರು ತಿಳಿಸಿದರು.

ಮುಖ್ಯ ಅಥಿತಿಗಳಾಗಿ ಉದ್ಯಮಿಗಳಾದ ಶ್ರೀ ಅಶೋಕ ರಡ್ಡೇರ ಹಾಗೂ ಶಂಕರಗೌಡ ಪಾಟೀಲವರು ಮಾತನಾಡಿ, ವಿಶೇಷ ಚೇತನರಲ್ಲಿ ಅದ್ಬುತವಾದ ಶಕ್ತಿ ಇರುತ್ತದೆ. ಅವರನ್ನು ವೈಜ್ಞಾನಿಕವಾಗಿ ಶಿಕ್ಷಣ ಹಾಗೂ ತರಬೇತಿ ನೀಡಿ, ಸಮಾಜದಲ್ಲಿ ಸ್ವಾವಲಂಬಿ ಜೀವನವನ್ನು ನಡೆಸುವ ಹಾಗೆ ಮಾಡಿ, ಅವರಲ್ಲಿರುವ ಸೂಪ್ತವಾದ ಶಕ್ತಿಯನ್ನು ಹೊರತರುವ ಈ ಸೇವಾ ಕಾರ್ಯ ದೇವರು ಮೆಚ್ಚುವಂತಹದ್ದು, ಈ ಸೇವಾ ಕಾರ್ಯಕ್ಕೆ ನಾವೆಲ್ಲರೂ ಆಧಾರ ಸ್ಥಂಭವಾಗಿ ನಿಲ್ಲುತ್ತದೆಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಮಂಜುನಾಥ ಹದ್ದಣ್ಣವರವರು ವಹಿಸಿ ಮಾತನಾಡಿ, ಸಂಸ್ಥೆಯು ನಡೆದು ಬಂದ ದಾರಿಯನ್ನು ವಿವರಿಸಿ, ವಿಶೇಷ ಚೇತನರಿಗೆ ಹಮ್ಮಿಕೊಂಡು ಭವಿಷ್ಯದ ಯೋಜನೆಗಳನ್ನು ವಿವರಿಸಿದರು. ಕಾರ್ಯಕ್ರಮದಲ್ಲಿ ವಿಶೇಷ ಮಕ್ಕಳು, ಪಾಲಕರು ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande