ಮುದ್ರಣ ತಂತ್ರಜ್ಞಾನಕ್ಕೆ ಕೊನೆಯಿಲ್ಲ : ಡಾ.ವಸುಂಧರಾ ಭೂಪತಿ
ಬಳ್ಳಾರಿ, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಮುದ್ರಣಗೊಳ್ಳುವ ಪುಸ್ತಕಗಳಿಗೂ ಹಾಗೂ ಮುದ್ರಣ ತಂತ್ರಜ್ಞಾನಕ್ಕೂ ಜೀವ ಸಂಕುಲ ಇರುವವರೆಗೂ ಸಾವಿಲ್ಲ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅವರು ತಿಳಿಸಿದ್ದಾರೆ. ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹ
ಮುದ್ರಣ ತಂತ್ರಜ್ಞಾನಕ್ಕೆ ಕೊನೆಯಿಲ್ಲ: ಡಾ.ವಸುಂಧರಾ ಭೂಪತಿ


ಮುದ್ರಣ ತಂತ್ರಜ್ಞಾನಕ್ಕೆ ಕೊನೆಯಿಲ್ಲ: ಡಾ.ವಸುಂಧರಾ ಭೂಪತಿ


ಬಳ್ಳಾರಿ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಮುದ್ರಣಗೊಳ್ಳುವ ಪುಸ್ತಕಗಳಿಗೂ ಹಾಗೂ ಮುದ್ರಣ ತಂತ್ರಜ್ಞಾನಕ್ಕೂ ಜೀವ ಸಂಕುಲ ಇರುವವರೆಗೂ ಸಾವಿಲ್ಲ ಎಂದು ಕರ್ನಾಟಕ ಪ್ರಕಾಶಕರ ಸಂಘದ ಅಧ್ಯಕ್ಷರಾದ ಡಾ. ವಸುಂಧರಾ ಭೂಪತಿ ಅವರು ತಿಳಿಸಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಹಾಗೂ ಕರ್ನಾಟಕ ಪ್ರಕಾಶಕರ ಸಂಘದ ಜಂಟಿ ಸಹಭಾಗಿತ್ವದಲ್ಲಿ ಬುಧವಾರ ಪ್ರಾರಂಭವಾದ ಎರಡು ದಿನಗಳ ಪುಸ್ತಕ ಪ್ರಕಾಶನ ಕಮ್ಮಟದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು.

ಎಐ, ಇ-ಪುಸ್ತಕಗಳು, ಪ್ರಿಂಟ್ ಆನ್ ಡಿಮಾಂಡ್ (ಪಿಓಡಿ) ಇನ್ನಿತರ ತಂತ್ರಜ್ಞಾನದ ಯುಗದಲ್ಲಿ ಕೇವಲ ಗಂಟೆಯಲ್ಲಿಯೇ ಪುಸ್ತಕವನ್ನು ಹೊರತರಬಹುದು. ಆದರೆ ಮುದ್ರಣವಾಗುವ ಪುಸ್ತಕಗಳು, ದಿನನಿತ್ಯ ಬಳಸುವ (ಕರೆನ್ಸಿ) ನೋಟುಗಳು ಮುದ್ರಣದ ಅವಿಭಾಜ್ಯ ಅಂಗವಾಗಿದ್ದು, ಅವುಗಳು ಎಂದಿಗೂ ನಿಲ್ಲುವುದಿಲ್ಲ ಎಂದರು.

ವಿವಿಯ ಸಿಂಡಿಕೇಟ್ ಸದಸ್ಯರಾದ ಅಮರೇಶ್ ನುಗಡೋಣಿ ಅವರು, ಉದ್ಘಾಟಿಸಿ, ಲೇಖಕ, ಪ್ರಕಾಶಕ, ಓದುಗ ಮತ್ತು ಪುಸ್ತಕಗಳು ಎಂಬ ನಾಲ್ಕು ದಿಸೆಯ ಅನನ್ಯವಾದ ಸಮಾಗಮ ನೆಲೆಗೊಂಡಿದೆ. 10ನೇ ಶತಮಾನದಲ್ಲಿ ಶಿಕ್ಷಿತರ ಪ್ರಮಾಣ ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದರಿಂದ ವಚನಕಾರರು, ಸಂತಕವಿಗಳು ತಮ್ಮ ಅನುಭವ, ಸಂವಾದ, ಚರ್ಚೆಗಳು ಎಂಬ ಮೌಖಿಕ ಸಂವಹನದ ಮೂಲಕ ಜನಪದ ಕಾವ್ಯಗಳನ್ನು ಎಲ್ಲೆಡೆ ಹರಡಿದರು ಎಂದರು.

ಅಕ್ಷರ ಸಂಸ್ಕøತಿ ಬ್ರಿಟೀಷರಿಂದ ಬಂದ ಬಳುವಳಿಯಾಗಿದೆ. ಭಾರತದ ಹಸ್ತಪ್ರತಿಗಳನ್ನು ಶೋಧ ಮಾಡಿ ಪ್ರಚುರಪಡಿಸಿದರು. ಶಿಕ್ಷಣದ ಮಹತ್ವ ಅರಿತಿದ್ದ ಅಂದಿನ ಮುಖ್ಯಮಂತ್ರಿಯಾಗಿದ್ದ ದೇವರಾಜ ಅರಸುರವರು ಹಿಂದುಳಿದ ಮತ್ತು ಶೋಷಿತರ ಧ್ವನಿಯಾಗಿದ್ದ ಅಂಬೇಡ್ಕರ್ ಅವರ ಆಶಯವನ್ನು ಪೂರೈಸಲು ಸರ್ಕಾರದ ವತಿಯಿಂದ ರಾಜ್ಯದಾದ್ಯಂತ ಗ್ರಂಥಾಲಯಗಳನ್ನು ನಿರ್ಮಾಣ ಮಾಡಿದರು. ಇಂದು ರಾಜ್ಯದಾದ್ಯಂತ 500ಕ್ಕೂ ಹೆಚ್ಚು ಗ್ರಂಥಾಲಯಗಳು ನೆಲೆಗೊಂಡಿವೆ ಎಂದು ತಿಳಿಸಿದರು.

ವಿವಿಯ ಕುಲಪತಿಗಳಾದ ಪ್ರೊ .ಎಂ. ಮುನಿರಾಜು ಅವರು, ಕಲೆ, ಸಾಹಿತ್ಯದ ಆಸಕ್ತಿ ಎಲ್ಲರಲ್ಲಿಯೂ ಕ್ಷೀಣಿಸುತ್ತಿದೆ. ಓದುವ, ಬರೆಯುವ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು. ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ವಿವಿಧ ತಾಂತ್ರಿಕ ಕೋರ್ಸ್‍ಗಳನ್ನು ಶೀಘ್ರದಲ್ಲೆ ಆರಂಭಿಸುವುದಾಗಿ ಕುಲಪತಿಗಳು ಘೋಷಿಸಿದರು.

ವಿವಿಯ ಮೌಲ್ಯಮಾಪನ ಕುಲಸಚಿವರಾದ ಪ್ರೊ ಎನ್.ಎಂ. ಸಾಲಿ, ವಿವಿಯ ಸಿಂಡಿಕೇಟ್ ಸದಸ್ಯರಾದ ಬಿ. ಪೀರ್‍ಬಾಷಾ, ಶಿವಕುಮಾರ್.ಕೆ ಮತ್ತು ಕರ್ನಾಟಕ ಪ್ರಕಾಶಕರ ಸಂಘದ ಪ್ರಧಾನ ಕಾರ್ಯದರ್ಶಿಗಳಾದ ನ. ರವಿಕುಮಾರ್ ವೇದಕೆಯಲ್ಲಿದ್ದರು. ಕಾರ್ಯಕ್ರಮದ ಸಂಯೋಜಕರಾದ ವಿವಿಯ ಪ್ರಸಾರಾಂಗದ ಪ್ರಭಾರ ನಿರ್ದೇಶಕರಾದ ಪ್ರೊ. ತಿಪ್ಪೇರುದ್ರ ಪ್ರಾಸ್ತಾವಿಕವಾಗಿ ಮಾತನಾಡಿದರು. ರಸಾಯನಶಾಸ್ತ್ರ ವಿಭಾಗದ ಪ್ರೊ. ಅರುಣ್‍ಕುಮಾರ್ ಲಗಶೆಟ್ಟಿ ಸ್ವಾಗತಿಸಿದರು. ಡಾ ಶಶಿಧರ್ ಕೆಲ್ಲೂರ್ ನಿರೂಪಿಸಿದರು.

ಎರಡು ದಿನಗಳ ಕಮ್ಮಟದಲ್ಲಿ ಒಟ್ಟು 5 ಚರ್ಚಾಗೋಷ್ಠಿಗಳು ನಡೆಯಲಿವೆ. ರಾಜ್ಯದ ಪ್ರಕಾಶಕರು, ಚಿಂತಕರು, ಉಪನ್ಯಾಸಕರುಗಳು, ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ನೂರಕ್ಕೂ ಹೆಚ್ಚು ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande