ಹೊಸಪೇಟೆ, ಹರಪನಹಳ್ಳಿಯಲ್ಲಿ ಸಖಿ ಒನ್ ಸ್ಟಾಪ್ ಕೇಂದ್ರ, ಸಿಬ್ಬಂದಿಗಳ ಹುದ್ದೆಗೆ ಅರ್ಜಿ ಆಹ್ವಾನ
ಹೊಸಪೇಟೆ, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹರಪನಹಳ್ಳಿ ಮತ್ತು ಹೊಸಪೇಟೆ ತಾಲೂಕುಗಳಿಗೆ ಹೊಸದಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಪ್ರಾರಂಭಿಸಲು ಮತ್ತು ಕೇಂದ್ರ ಸರ್ಕಾರದ ಯೋಜನೆಯನ್ನು ಅನುμÁ್ಠನಗೊಳಿಸುವ ನಿಟ್ಟಿನಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕೇಂದ್ರಕ್ಕೆ ಸೇವಾ ಒಪ್ಪಂದದ ಮೇರೆಗೆ ವಿವಿಧ ಹುದ್ದೆಗ
ಹೊಸಪೇಟೆ, ಹರಪನಹಳ್ಳಿಯಲ್ಲಿ ಸಖಿ ಒನ್ ಸ್ಟಾಪ್ ಕೇಂದ್ರ, ಸಿಬ್ಬಂದಿಗಳ ಹುದ್ದೆಗೆ ಅರ್ಜಿ ಆಹ್ವಾನ


ಹೊಸಪೇಟೆ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹರಪನಹಳ್ಳಿ ಮತ್ತು ಹೊಸಪೇಟೆ ತಾಲೂಕುಗಳಿಗೆ ಹೊಸದಾಗಿ ಸಖಿ ಒನ್ ಸ್ಟಾಪ್ ಸೆಂಟರ್ ಪ್ರಾರಂಭಿಸಲು ಮತ್ತು ಕೇಂದ್ರ ಸರ್ಕಾರದ ಯೋಜನೆಯನ್ನು ಅನುμÁ್ಠನಗೊಳಿಸುವ ನಿಟ್ಟಿನಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಕೇಂದ್ರಕ್ಕೆ ಸೇವಾ ಒಪ್ಪಂದದ ಮೇರೆಗೆ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ವೇತಾ ತಿಳಿಸಿದ್ದಾರೆ.

ಈ ಕೇಂದ್ರಗಳಲ್ಲಿ ದೌರ್ಜನ್ಯಕ್ಕೊಳಗಾದ ಮಹಿಳೆಯರಿಗೆ ಒಂದೇ ಸೂರಿನಡಿ ವೈದ್ಯಕೀಯ ಸೇವೆ, ಪೆÇಲೀಸ್ ಸೇವೆ, ಕಾನೂನು ಸೇವೆ, ಸಮಾಲೋಚನೆ ಮತ್ತು ತಾತ್ಕಾಲಿಕ ವಸತಿ ಒದಗಿಸುವ ಸದುದ್ದೇಶದಿಂದ ಸಖಿ ಒನ್ ಸ್ಯಾಪ್ ಸೆಂಟರ್ ಪ್ರಾರಂಭಿಸಲಾಗುತ್ತದೆ.

ಅರ್ಜಿ ಸಲ್ಲಿಸಲು ಜನವರಿ .12 ಕೊನೆಯ ದಿನಾಂಕವಾಗಿದೆ. ಜಿಲ್ಲೆಯಲ್ಲಿ ಸಖಿ ಒನ್ ಸ್ಟಾಪ್ ಸೆಂಟರ್ ಅನುμÁ್ಠನಗೊಳಿಸಲು ತಾತ್ಕಾಲಿಕವಾಗಿ ಹೊಸಪೇಟೆ ಮತ್ತು ಹರಪನಹಳ್ಳಿಯಲ್ಲಿ ತಲಾ 8 ಹುದ್ದೆಗಳನ್ನು ಗೌರವಧನ ಆಧಾರದಲ್ಲಿ ವಿದ್ಯಾರ್ಹತೆ, ಹೆಚ್ಚುವರಿ ಅರ್ಹತೆಗಳು, ಅನುಭವ ಹಾಗೂ ಉಸ್ತುವಾರಿಯಲ್ಲಿ ಉತ್ತಮ ಕೆಲಸ ನಿರ್ವಹಿಸಬಲ್ಲ, ತರಬೇತಿಗಳನ್ನು ಹಮ್ಮಿಕೊಳ್ಳಲು ಸಮರ್ಥ ಕೌಶಲ್ಯ ಹೊಂದಿರುವ, ಗಣಕಯಂತ್ರ ನಿರ್ವಹಣೆಯಲ್ಲಿ ಪರಿಣಿತಿ, ಕನ್ನಡ ಮತ್ತು ಅಂಗ್ಲ ಭಾμÉಯಲ್ಲಿ ಪರಿಪೂರ್ಣ ಹಿಡಿತವುಳ್ಳ ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಆಹ್ವಾನಿಸಲಾಗಿದೆ. ವಿದ್ಯಾರ್ಹತೆಯಲ್ಲಿ ಗಳಿಸಿದ ಅಂಕಗಳು, ಅನುಭವ, ಕಂಪ್ಯೂಟರ್ ಪರೀಕ್ಷೆಗಳ ಮೂಲಕ ನೇಮಕಾತಿ ಮಾಡಲಾಗುತ್ತದೆ.

ಹುದ್ದೆಗಳು : ಹೊಸಪೇಟೆ ಮತ್ತು ಹರಪನಹಳ್ಳಿಯಲ್ಲಿ ಕೇಂದ್ರ ಆಡಳಿತಾಧಿಕಾರಿ ಮತ್ತು ಆಪ್ತ ಸಮಾಲೋಚಕರ ತಲಾ ಒಂದು ಹುದ್ದೆ ಇದ್ದು, ಸಮಾಜ ಕಾರ್ಯದಲ್ಲಿ ಪದವಿ, ಪೆÇೀಷಣೆ ಮೆಡಿಸನ್, ಹೋಮ್ ಸೈನ್ಸ್, ಸೈಕಾಲಜಿ, ಮನೋವೈದ್ಯಶಾಸ್ತ್ರ ಮತ್ತು ಕಂಪ್ಯೂಟರ್ ಜ್ಞಾನ ಹೊಂದಿರಬೇಕು.

ಆಪ್ತ ಸಮಾಲೋಚಕರ ಹುದ್ದೆಗೆ ಆಪ್ತ ಸಮಾಲೋಚಕರಾಗಿ ಮೂರು ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿರಬೇಕು. ವಿಷಯ ನಿರ್ವಾಹಕರ ಮತ್ತು ಸಾಮಾಜಿಕ ಕಾರ್ಯಕರ್ತೆಯರ ತಲಾ ಎರಡು ಹುದ್ದೆಗಳಿದ್ದು, ಬಿಎಸ್‍ಡಬ್ಲೂ ಮತ್ತು ಬಿಎ ಸಮಾಜಶಾಸ್ತ್ರದಲ್ಲಿ ಪದವಿ ಹಾಗೂ ಕಂಪ್ಯೂಟರ್ ಜ್ಞಾನ ಹೊಂದಿರಬೇಕು. ಸಾಮಾಜಿಕ ಕಾರ್ಯಕರ್ತೆಯಾಗಿ ಎರಡು ವರ್ಷ ಕಾರ್ಯನಿರ್ವಹಿಸಿದ ಅನುಭವ ಇರಬೇಕು.

ಕಾನೂನು ಸಲಹೆಗಾರರ ತಲಾ ಎರಡು ಹುದ್ದೆಗಳಿದ್ದು, ಕಾನೂನು ವಿಷಯದಲ್ಲಿ ಪದವಿ ಪಡೆದಿರಬೇಕು. ಮತ್ತು 2 ರಿಂದ 3 ವರ್ಷ ಅನುಭವವನ್ನು ಹೊಂದಿರಬೇಕು.

ಭದ್ರತಾ ಸಿಬ್ಬಂದಿಗೆ ತಲಾ ಎರಡು ಹುದ್ದೆಗಳಿದ್ದು, ಸಹಾಯಕರಾಗಿ ಕೆಲಸ ಮಾಡಿದ ಅನುಭವ ಹೊಂದಿರಬೇಕು.

ಸಖಿ ಯೋಜನೆಯಡಿ ಮಹಿಳೆಯರಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ. ಅಭ್ಯರ್ಥಿಗಳ ಆಯ್ಕೆಯು ತಾತ್ಕಾಲಿಕವಾಗಿರುತ್ತದೆ. ನೇಮಕಾತಿಯು 11 ತಿಂಗಳ ಅವಧಿಯಾಗಿದ್ದು ಕೆಲಸ ನಿರ್ವಹಣೆಯ ಆಧಾರದ ಮೇರೆಗೆ ಹುದ್ದೆಯನ್ನು ಜಿಲ್ಲಾ ಸಮಿತಿ ಅನುಮೋದನೆ ಮೇರೆಗೆ ಮುಂದಿನ ಅವಧಿಗೆ ಮುಂದುವರೆಸಬಹುದಾಗಿರುತ್ತದೆ.

ಹೆಚ್ಚಿನ ಮಾಹಿತಿಗಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರ ಕಚೇರಿ, ಸಪ್ತಗಿರಿ ಶಾಲೆ ಹತ್ತಿರ, ಮೆಟ್ರೋ ಫ್ಯಾಷನ್ ಮೇಲಿನ ಮಹಡಿ, ಬಸವೇಶ್ವರ ಬಡವಾಣೆ, ಹೊಸಪೇಟೆ ಅಥವಾ ದೂ. 08394-223583 ಸಂಖ್ಯೆಗೆ ಕರೆ ಮಾಡಬಹುದು ಎಂದು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande