

ರಾಯಚೂರು , 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಉಪ ವಿಭಾಗದ ಎಲ್ಲಾ ವ್ಯಾಪಾರಿಗಳು ಹಾಗೂ ಹೋಟೆಲ್, ಅಂಗಡಿ ಸೇರಿದಂತೆ ಇತರೆ ಆಹಾರ ಕೇಂದ್ರಗಳು ತಪ್ಪದೇ ತಮ್ಮ ಆವರಣದಲ್ಲಿ ಶುದ್ಧತೆ, ಸುರಕ್ಷತೆ ಮತ್ತು ಗುಣಮಟ್ಟಕ್ಕೆ ಆದ್ಯತೆ ನೀಡಬೇಕೆಂದು ರಾಯಚೂರು ಕಂದಾಯ ಉಪ ವಿಭಾಗದ ಸಹಾಯಕ ಆಯುಕ್ತರಾದ ಗಜಾನನ ಬಾಳೆ ಅವರು ಸೂಚಿಸಿದರು.
ಇತ್ತೀಚೆಗೆ ಜಿಲ್ಲೆಯ ಮಾನವಿ ಪಟ್ಟಣದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ತಹಶೀಲ್ದಾರ್ ಕಾರ್ಯಾಲಯ, ಪುರಸಭೆ, ತಾಲೂಕ ಆರೋಗ್ಯ ಇಲಾಖೆ, ಆಹಾರ ಸುರಕ್ಷತಾ ಇಲಾಖೆ, ಕಂದಾಯ ಇಲಾಖೆ, ಪುರಸಭೆ ಹಾಗೂ ಪೆÇೀಲಿಸ್ ಇಲಾಖೆಯೊಂದಿಗೆ ವಿವಿಧ ಹೋಟೆಲ್ ಮತ್ತು ಬಾರ್ & ರೆಸ್ಟೋರೆಂಟ್‍ಗಳ ಮೇಲೆ ಹಠಾತ್ ದಾಳಿ ಮಾಡಿ ಗುಣಮಟ್ಟವನ್ನು ಪರಿಶೀಲಿಸಿ, ಅವರು ಮಾತನಾಡಿದರು.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ,2006ರ ಹಾಗೂ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಮಗಳು 2011ರ ಸೂಚನೆಗಳನ್ನು ಒಂದು ವಾರದೊಳಗಾಗಿ ಅನುಸರಿಸಬೇಕು. ಆಹಾರ ವ್ಯಾಪಾರ ನಿರ್ವಾಹಕರು ಸುಧಾರಣಾ ಸೂಚನೆಯನ್ನು ಅನುಸರಿಸಲು ವಿಫಲವಾದರೆ ಅವರ ಪರವಾನಿಗೆಯನ್ನು ಅಮಾನತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದರು.
ರಾಯಚೂರು ಕಂದಾಯ ಉಪ ವಿಭಾಗದ ವ್ಯಾಪ್ತಿಯ ಹೋಟೇಲ್‍ಗಳಲ್ಲಿ ಗುಣಮಟ್ಟವಾಗಿ ಆಹಾರ ಸುಧಾರಣೆ ಮಾಡಲು ಈಗಾಗಲೇ ಆಹಾರ ಸುರಕ್ಷತಾ ಅಧಿಕಾರಿಗಳಿಂದ ನೋಟಿಸ್ ನೀಡಲಾಗಿದೆ. ಮಾನವಿಯ ನಿಸರ್ಗ ಹೋಟೆಲ್, ಸಾಧಿಕ್ ಹೋಟೆಲ್, ಲಕ್ಷ್ಮೀವಿಲಾಸ ಹೋಟೆಲ್, ಗಗನ್ ಬಾರ್ & ರೆಸ್ಟೋರೆಂಟ್, ಜನತಾ ಹೋಟೆಲ್, ಡಾನ್ ಡಾಬಾಗಳ ಮೇಲೆ ದಾಳಿ ಮಾಡಿದರು. ಡಾನ್ ಡಾಬಾವನ್ನು ಸುಧಾರಣೆ ಮಾಡಲು ಅಪರ ಜಿಲ್ಲಾಧಿಕಾರಿಗಳು ಈ ಹಿಂದೆ ದಂಡ ವಿಧಿಸಿದರು ಸಹ ಯಾವುದೇ ಸುಧಾರಣೆಯಾಗದೇ ಇರುವುದು ಕಂಡು ಬಂದಿರುತ್ತದೆ. ಮತ್ತು ಮದ್ಯವನ್ನು ಡಾಬಾದಲ್ಲಿ ಸೇವನೆ ಮಾಡುತ್ತಿರುವುದು ದಾಳಿ ವೇಳೆಯಲ್ಲಿ ಕಂಡುಬಂದಿ ಎಂದರು.
ವಿ.ಎ.ಬಾರ್ & ರೆಸ್ಟೋರೆಂಟ್‍ನಲ್ಲಿ ನೀರಿನ ಗಿಜರ್ ಸ್ಥಳದಲ್ಲಿ ಕಲ್ಲಿದ್ದಲು ಮತ್ತು ಸಿಲೆಂಡರ್‍ಗಳನ್ನು ಸಂಗ್ರಹ ಮಾಡಲಾಗುತ್ತಿದೆ. ಹಾಗೂ ಅಡುಗೆ ಕೋಣೆಯಿಂದ ಬರುವಂತಹ ಹೊಗೆಯನ್ನು 02 ಎಕ್ಸ್‍ಸ್ಟ್ ಫ್ಯಾನ್‍ಗಳ ಮುಖಾಂತರ ಈ ಕೋಣೆಯಲ್ಲಿಯೇ ಬಿಟ್ಟಿರುತ್ತಾರೆ. ಇದರಿಂದ ಕೊಣೆಯ ತಾಪಮಾನ ಏರುಪೇರಿನಲ್ಲಿ ಅಗ್ನಿ ಅವಗಡ ಸಂಭವಿಸುವ ಸಂಭವವಿದ್ದು, ಈ ಹೋಟೇಲ್ ಮಾಲೀಕರಿಂದ ಯಾವುದೇ ಬೆಂಕಿ ನಿಂದಿಸುವ ಸಲಕರಣೆಗಳು ಇರಿಸದೇ ಇರುವುದು ಕಂಡು ಬಂದಿದೆ ಎಂದರು.
ಈ ಹೋಟಲ್‍ಗಳಿಗೆ ನಿಯಮಾನುಸಾರ ಕಾಯ್ದೆ ಪ್ರಕಾರ ಗೃಹ ಬಳಕೆ ಸಿಲಿಂಡರ್‍ಗಳ ಕುರಿತು ಉಪ ನಿರ್ದೇಶಕರು ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ರಾಯಚೂರು ಇವರು ಕಾನೂನು ಕ್ರಮಕೈಗೊಳ್ಳುತ್ತಾರೆ. ಎಲ್ಲಾ ಹೋಟೆಲ್‍ಗಳಲ್ಲಿ ನಿμÉೀಧಿತ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವುದರಿಂದ ಪುರಸಭೆ ಮಾನ್ವಿ ಇವರಿಂದ ದಂಡ ಹಾಗೂ ಈ ಸಾಮಗ್ರಿಗಳನ್ನು ಮುಟ್ಟುಗೋಲು ಮಾಡಿಕೊಳ್ಳಲಾಗಿದೆ ಎಂದರು.
ಆಹಾರ ಸುರಕ್ಷತಾ ಅಧಿಕಾರಿಗಳು ಮಾನವಿ ಇವರು ಸಾಧಿಕ್ ಹೋಟೆಲ್ ಮತ್ತು ಡಾನ್ ಡಾಬಾ ಇವರ ಆಹಾರ ಪರವಾನಿಗೆ ಪ್ರಮಾಣ ಪತ್ರ ಅಥವಾ ಅರ್ಜಿಯನ್ನು ಅಮಾನತ್ತುಗೊಳಿಸಲು ಸೂಕ್ತ ಕ್ರಮಕೈಗೊಳ್ಳಲು ಸೂಚಿಸಲಾದೆ. ವಿ.ಎ.ಬಾರ್ & ರೆಸ್ಟೋರೆಂಟ್ ಇವರು ಅವಶ್ಯಕತೆ ಇರುವ ಸ್ಥಳದಲ್ಲಿ ಬೆಂಕಿ ನಿಂದಿಸುವ ಸಲಕರಣೆಗಳನ್ನು ಇರದೇ ಇರುವುದರಿಂದ ಮುಂದಿನ ಸೂಕ್ತ ಕ್ರಮಕ್ಕಾಗಿ ಜಿಲ್ಲಾ ಅಗ್ನಿ ಶಾಮಕ ಅಧಿಕಾರಿಗಳು ಕರ್ನಾಟಕ ರಾಜ್ಯ ಅಗ್ನಿ ಶಾಮಕ ದಳ ಮತ್ತು ತುರ್ತು ಸೇವೆಗಳು ರಾಯಚೂರು ಇವರಿಗೆ ಸೂಚಿಸಲಾಗಿದೆ ಎಂದರು.
ಎಲ್ಲಾ ಹೋಟೆಲ್, ಬಾರ್ & ರೆಸ್ಟೋರೆಂಟ್ ಮತ್ತು ಇತರೆ ಆಹಾರ ತಯಾರಿಸುವ ಮಾರಾಟ ಮಾಡುವವರು ತಪ್ಪದೇ ಆಹಾರ ಸುರಕ್ಷತ ನಿಯಮಗಳನ್ನು ಪಾಲಿಸಿ ಅಗತ್ಯ ಗುಣಮಟ್ಟ ಆಹಾರವನ್ನು ಸಾರ್ವಜನಿಕರಿಗೆ ನೀಡತಕ್ಕದ್ದು, ಹಾಗೂ ಎಲ್ಲಾ ವ್ಯಾಪಾರಸ್ಥರು, ಹೋಟೇಲ್‍ದಾರರು ತಪ್ಪದೇ ನಿಯಮಾನುಸಾರ ಸಂಬಂಧಿಸಿದ ಇಲಾಖೆಗಳಿಂದ ವಾಣಿಜ್ಯ ಪರವಾನಿಗೆ ಮತ್ತು ಆಹಾರ ಸುರಕ್ಷತ ಪರವಾನಿಗೆಯನ್ನು ಅಥವಾ ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಆಹಾರ ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ನಜೀರ್ ಅಹ್ಮದ್, ತಹಶೀಲ್ದಾರ್ ವಾಯೀದ್, ಪುರಸಭೆ ಮುಖ್ಯಾಧಿಕಾರಿ ಪರಶುರಾಮ್, ತಾಲೂಕ ಆರೋಗ್ಯಾಧಿಕಾರಿ ಡಾ.ಶರಣಬಸವ, ಆಹಾರ ಸುರಕ್ಷತಾ ಇಲಾಖೆಯ ಅಧಿಕಾರಿ ಬನದೇಶ್ ಸೇರಿದಂತೆ ಇಲಾಖೆ ಅಧಿಕಾರಿಗಳು ಇದ್ದರು.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್