ನಗರದ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಪಾಲಿಕೆ ಆಯುಕ್ತರ ಭೇಟಿ
ರಾಯಚೂರು, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ನಗರವನ್ನು ಸುಂದರ ನಗರವನ್ನು ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ರಾಯಚೂರು ಮಹಾನಗರ ಪಾಲಿಕೆಯ ಪರಿಸರ ವಿಭಾಗದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಭೇಟಿ ನೀಡಿ
ನಗರದ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಪಾಲಿಕೆ ಆಯುಕ್ತರ  ಭೇಟಿ


ನಗರದ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಪಾಲಿಕೆ ಆಯುಕ್ತರ  ಭೇಟಿ


ನಗರದ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ಪಾಲಿಕೆ ಆಯುಕ್ತರ  ಭೇಟಿ


ರಾಯಚೂರು, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ನಗರವನ್ನು ಸುಂದರ ನಗರವನ್ನು ರೂಪಿಸುವ ನಿಟ್ಟಿನಲ್ಲಿ ಈಗಾಗಲೇ ರಾಯಚೂರು ಮಹಾನಗರ ಪಾಲಿಕೆಯ ಪರಿಸರ ವಿಭಾಗದಿಂದ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳ ಸ್ಥಳಕ್ಕೆ ರಾಯಚೂರು ಮಹಾನಗರ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಭೇಟಿ ನೀಡಿ ಪರಿಶೀಲನೆ ಮಾಡಿದರು.

ನಗರದ ಸೌಂದರ್ಯೀಕರಣಗಳ ವಿವಿಧ ಸ್ಥಳಗಳನ್ನು ಮತ್ತು ವಿವಿಧ ವೃತ್ತಗಳನ್ನು ವರದಿಯನ್ನು ಪರಿಶೀಲಿಸಲು ನಗರಾದ್ಯಂತ ಪರಿಶೀಲನೆ ಕೈಗೊಂಡು ನಗರದ ಪ್ರಮುಖ ಸಾರ್ವಜನಿಕ ಸ್ಥಳಗಳಲ್ಲಿ ಭವಿಷ್ಯದ ಸುಂದರೀಕರಣ ಯೋಜನೆಗಳ ಸಿದ್ಧತೆ ಮತ್ತು ಯೋಜನಾ ಸಿದ್ಧತೆಗಾಗಿ ಪರಿಶೀಲಿಸಿ ಖಾತರಿ ಪಡಿಸುಕೊಳ್ಳಲಾಯಿತು.

ಈ ವೇಳೆ ಅಧಿಕಾರಿಗಳ ತಂಡದೊಂದಿಗೆ ಆಂಬೇಡ್ಕರ್ ವೃತ್ತ, ನಗರ ಬಸ್ ನಿಲ್ದಾಣ, ಆರ್.ಟಿ.ಒ ವೃತ್ತ, ರಾಮ ಮಂದಿರ ಕಲ್ಯಾಣಿ ಮತ್ತು ರೈಲ್ವೇ ನಿಲ್ದಾಣ ವೃತ್ತ ಸೇರಿದಂತೆ ನಗರದ ಪ್ರಮುಖ ಜಂಕ್ಷನ್ಗಳಿಗೆ ಭೇಟಿ ನೀಡಿ, ಈ ಸ್ಥಳಗಳಲ್ಲಿ ಕೈಗೊಳ್ಳಲು ಉದ್ದೇಶಿಸಲಾದ ಸುಂದರೀಕರಣ, ಗೋಡೆ ಚಿತ್ರಕಲೆ (ವಾಲ್ ಪೇಂಟಿಂಗ್) ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಸಂಬಂಧಿಸಿದ ಯೋಜನೆಯ ಕುರಿತು ಚರ್ಚಿಸಲಾಯಿತು.

ಈ ವೇಳೆ ಪಾಲಿಕೆಯ ಆಯುಕ್ತರಾದ ಜುಬಿನ್ ಮೊಹೊಪಾತ್ರ ಅವರು ಮಾತನಾಡಿ, ನಗರದ ಪ್ರಮುಖ ಸ್ಥಳಗಳನ್ನು ಸುಂದರವಾಗಿ ಮಾರ್ಪಡಿಸುವ ಸಲುವಾಗಿ ವ್ಯವಸ್ಥಿತ ಯೋಜನೆ ರಚಿಸಲು ಈ ಭೇಟಿಯನ್ನು ನಡೆಸಲಾಗಿದೆ. ನಾವು ಈ ಸ್ಥಳಗಳಿಗೆ ಸಂಬಂಧಿಸಿದ ವಿವರವಾದ ಯೋಜನೆಗಳನ್ನು ರೂಪಿಸುತ್ತಿದ್ದೇವೆ. ಮತ್ತು ಶೀಘ್ರದಲ್ಲೇ ಕಾರ್ಯಗಳನ್ನು ಪ್ರಾರಂಭಿಸಲು ತಯಾರಿ ನಡೆಸುತ್ತಿದ್ದೇವೆ ಎಂದು ಹೇಳಿದರು.

ನಂತರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಕಾಮಗಾರಿಗೆ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಜಿಲ್ಲಾಡಳಿತ, ಮಹಾನಗರ ಪಾಲಿಕೆ, ಪಿಡಬ್ಲ್ಯೂಡಿ ಇಲಾಖೆ ಮತ್ತು ಆರ್.ಡಿ.ಎ ಜಂಟಿ ಪ್ರಯತ್ನದಿಂದ ವೃತ್ತದ ಅಭಿವೃದ್ಧಿಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. ಕೋಟೆಯ ಪುನಃಸ್ಥಾಪನೆ ಕಾರ್ಯವು ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತಿದ್ದು, ಅದು ಮುಕ್ತಾಯಗೊಳ್ಳುವ ಹಂತದಲ್ಲಿದೆ. ಮತ್ತು ಶೀಘ್ರದಲ್ಲೇ ವರ್ಣರಂಜಿತ ಬೆಳಕಿನೊಂದಿಗೆ ಸಾರ್ವಜನಿಕರಿಗೆ ಮುಕ್ತವಾಗಲಿದೆ ಎಂದರು.

ಇದೇ ಸಂದರ್ಭದಲ್ಲಿ ಪರಿಸರ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಜೈಪಾಲ್ ರೆಡ್ಡಿ, ವಲಯ ಆಯುಕ್ತರಾದ ಮಲ್ಲಿಕಾರ್ಜುನ, ಕಾರ್ಯಪಾಲಕ ಅಭಿಯಂತರಾದ ಬಸವರಾಜ ಹೆಬ್ಬಾಳ, ಸಹಾಯಕ ಅಭಿಯಂತರರಾದ ಮಹೇಶ ಸೇರಿದಂತೆ ಪಾಲಿಕೆಯ ತಾಂತ್ರಿಕ ವಿಭಾಗಗಳ ಹಿರಿಯ ಮತ್ತು ಕಿರಿಯ ಅಧಿಕಾರಿಗಳು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande