ಬಾಗಲಕೋಟೆಯಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ತೋಟಗಾರಿಕೆ ಮೇಳ
ಕೊಪ್ಪಳ, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಉದ್ಯಾನ ನಗರಿ ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ತೋಟಿಗಾರಿಕೆ ಮೇಳ-2025 ಕಾರ್ಯಕ್ರಮ ನಡೆಯಲಿದ್ದು, ಈ ಮೇಳದಲ್ಲಿ ಆಯ್ಕೆಯಾದ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಬಾಗಲಕೋಟೆ
ಬಾಗಲಕೋಟೆಯಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ತೋಟಗಾರಿಕೆ ಮೇಳ


ಕೊಪ್ಪಳ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಉದ್ಯಾನ ನಗರಿ ಬಾಗಲಕೋಟದ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದಲ್ಲಿ ಡಿಸೆಂಬರ್ 21 ರಿಂದ 23 ರವರೆಗೆ ತೋಟಿಗಾರಿಕೆ ಮೇಳ-2025 ಕಾರ್ಯಕ್ರಮ ನಡೆಯಲಿದ್ದು, ಈ ಮೇಳದಲ್ಲಿ ಆಯ್ಕೆಯಾದ ರೈತರಿಗೆ ಪ್ರಶಸ್ತಿ ಪ್ರಧಾನ ಮಾಡಲಾಗುವುದು ಎಂದು ಬಾಗಲಕೋಟೆ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಕುಲಪತಿ ಡಾ. ವಿಷ್ಣುವರ್ಧನ ಅವರು ತಿಳಿದ್ದಾರೆ.

ಈ ತೋಟಗಾರಿಕೆ ಮೇಳವನ್ನು ಮೌಲ್ಯವರ್ಧನೆ ಮತ್ತು ರಫ್ತು ಅವಕಾಶಗಳಿಗಾಗಿ ನಿಖರ ತೋಟಗಾರಿಕೆ ಎಂಬ ಧೈಯ್ಯ ವಾಕ್ಯದೊಂದಿಗೆ ಆಯೋಜಿಸಲಾಗುತ್ತದ್ದು, ಮೇಳದಲ್ಲಿ ರಾಜ್ಯಾದ್ಯಂತ 5 ಲಕ್ಷಕ್ಕೂ ಅಧಿಕ ರೈತರು, ಉದ್ಯಮಿಗಳು, ಪಾಲುದಾರರು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

*ಮೇಳದ ಪ್ರಮುಖ ಅಂಶಗಳು:* ತೋಟಗಾರಿಕೆಯಲ್ಲಿ ವ್ಯಾಪಾರವನ್ನು ಉತ್ತೇಜಿಸಲು ರಫ್ತುದಾರ ಮತ್ತು ಮಾರಟಗಾರರ ನಡುವಿನ ಮಾರುಕಟ್ಟೆ ಸಂಪರ್ಕವನ್ನು ಬಲಪಡಿಸಿಲು ವಿನ್ಯಾಸಗೊಳಿಸಲಾದ ನಿಖರ ತೋಟಗಾರಿಕೆ ತಂತ್ರಜ್ಞಾನಗಳು, ಮೌಲ್ಯವರ್ಧನೆ, ರಫ್ತು ಸಮಾವೇಶ ಮತ್ತು ಖರೀದಿದಾರರು ಮತ್ತು ಮಾರಟಗಾರರ ಸಭೆ.

ಮೂರು ದಿನಗಳವರೆಗೆ ನಡೆಯುವ ಈ ಮೇಳದಲ್ಲಿ ಸಾಧಕ ರೈತರು ತಮ್ಮ ಅನುಭವವನ್ನು ಇತರೇ ರೈತರೊಂದಿಗೆ ಹಂಚಿಕೊಳ್ಳಲಿದ್ದಾರೆ. ಈ ಮೇಳದಲ್ಲಿ 400 ಕ್ಕೂ ಹೆಚ್ಚು ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳ ಮಳಿಗೆಗಳು ಮತ್ತು ಯಾಂತ್ರೀಕರಣ ಮಳಿಗೆಗಳು, ತೋಟಗಾರಿಕೆ ಬೆಳೆಯಲ್ಲಿ ಡೋನಗಳ ಬಳಕೆ, ಹೈನುಗಾರಿಕೆ, ಶ್ವಾನ ಮತ್ತು ಮತ್ಸ ಲೋಕ ಪ್ರದರ್ಶನ, ಜಿಪಿಎಸ್, ಜಿಐಎಸ್, ಸಂವೇದಕಗಳ ತಂತ್ರಜ್ಞಾನದ ಮಾಹಿತಿ, ನಿಖರ ನೀರಾವರಿ ವ್ಯವಸ್ಥೆ ಮತ್ತು ರಸಾವರಿ ಮಾದರಿಗಳು, ಐಒಟ ಸಾಧನಗಳ ಅಳವಡಿಕೆ, ತೋಟಗಾರಿಕೆ ಮೇಳವು ತಂತ್ರಜ್ಞಾನ ಪ್ರಸರಣದ ಅತ್ಯಂತ ಪರಿಣಾಮಕಾರಿ ಕಾರ್ಯಕ್ರಮವಾಗಿದ್ದು, ಒಂದೇ ಸೂರಿನಡಿ ಪ್ರತಿ ವರ್ಷ ರೈತ ಸಮುದಾಯಕ್ಕೆ ನವೀನ, ಸಮಯೋಚಿತ ತಂತ್ರಜ್ಞಾನಗಳನ್ನು ವರ್ಗಾವಣೆ ಮಾಡಲು ತೋಟಗಾರಿಕೆ ಮೇಳವನ್ನು ಆಯೋಜಿಸಲಾಗಿದೆ.

ಈ ಮೇಳದಲ್ಲಿ ಕರ್ನಾಟಕ ಸರ್ಕಾರದ ಸಚಿವರು, ಸಂಸದರು, ಶಾಸಕರು ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ ಎಂದು ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ. ಪ್ರಭುಲಿಂಗ ಜಿ, ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande