
ಗದಗ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಕೇಂದ್ರ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ.ಕುಮಾರಸ್ವಾಮಿ ಅವರ ಜನ್ಮದಿನ ಅಂಗವಾಗಿ ನಗರದ ಗಂಗಾಪೂರ ಪೇಟೆಯಲ್ಲಿರುವ ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ವಿದ್ಯಾರ್ಥಿಗಳಿಗೆ ಜೆಡಿಎಸ್ ಯುವ ಮುಖಂಡ ಪ್ರಭುರಾಜಗೌಡ ಪಾಟೀಲ ನೇತೃತ್ವದಲ್ಲಿ ನೋಟ್‍ಬುಕ್ ಪೆನ್ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾ ಉಪಾಧ್ಯಕ್ಷ ಗಿರೀಶ ಸಂಶಿ, ತಾಲ್ಲೂಕ ಪ್ರಧಾನ ಕಾರ್ಯದರ್ಶಿ ಸಂತೋಷ ಪಾಟೀಲ, ಹಿರಿಯ ಮುಖಂಡರಾದ ರಮೇಶ ಹುಣಸಿಮರದ, ಅಜಯ ಕುಲಕರ್ಣಿ, ಸಂಘಟನಾ ಕಾರ್ಯದರ್ಶಿ ಕೆ.ಎಪ್.ದೊಡ್ಡಮನಿ, ರೋಣ ತಾಲ್ಲೂಕು ಅಧ್ಯಕ್ಷ ಜಿ.ಬಿ.ಹನುಮನಾಳ, ಸನ್ಮಾನಿತರಾದ ರಾಷ್ಟ್ರೀಯ ಪ್ಯಾರಾ ಓಲಂಪಿಕ್ ವಿಜೇತರಾದ ಮಾಲತಿ ಇನಾಮತಿ, ಮಹಾಂತೇಶ ಬೇವೂರು, ಆನಂದ ಬೇದ್ರೆ, ಶ್ರೀ ದುರ್ಗಾದೇವಿ ಶಿಕ್ಷಣ ಸಮಿತಿಯ ನಿರ್ದೇಶಕರಾದ ಮೋಹನ ಇಮರಾಪೂರ, ಸಲಹಾ ಸಮಿತಿಯ ಸದಸ್ಯರಾದ ಮುತ್ತು ಜಡಿ, ಲೋಕೇಶ ಮಲ್ಲಿಗವಾಡ, ಮುಖ್ಯೋಪಾದ್ಯಾಯನಿ ಶ್ರೀಮತಿ ಎಚ್.ಎಂ.ನದಾಪ್, ಸಹ ಶಿಕ್ಷಕರಾದ ಮಂಜುಳಾ ಹಿಡ್ಕಿಮಠ, ರೇಖಾ ಅಂಗಡಿ, ಸುಧಾ ತಿರಕಣ್ಣವರ, ಶೋಭಾ ಸಂಬರಗಿಮಠ, ಮಂಜುಳಾ ದಾಸರ, ಅಂಜಲಿ ಕಲಾಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.
ಹಿಂದೂಸ್ತಾನ್ ಸಮಾಚಾರ್ / lalita MP