
ಬಳ್ಳಾರಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್: ಬಳ್ಳಾರಿಯ ವೈ.ಎಂ. ಸತೀಶ್ ಫೌಂಡೇಶನ್‍ನ ಎಕ್ಸಿಕ್ಯೂಟಿವ್ ಟ್ರಸ್ಟಿ ವೈ. ಕಾರ್ತಿಕ್ ಅವರು ಡೆಬಿಟ್ ಕಾರ್ಡ್‍ಗಳ ಸಮಗ್ರ ವ್ಯವಹಾರವನ್ನು ಬ್ರೈಲ್ ಲಿಪಿಯಲ್ಲಿ ಅಂಧ ಗ್ರಾಹಕರಿಗೆ ನೀಡಲು ಹಾಗೂ ಕರೆನ್ಸಿ ನೋಟುಗಳ ಮೇಲೆ ಬ್ರೈಲ್ ಲಿಪಿಯಲ್ಲಿ ಅಂಕೆ - ಸಂಖ್ಯೆ ಮತ್ತು ಅಕ್ಷರಗಳನ್ನು ಮುದ್ರಿಸಲು ಕೋರಿ ಸಲ್ಲಿಸಿದ್ದ ಮನವಿಯು ಕರ್ನಾಟಕ ರಾಜ್ಯ ಮಟ್ಟದ ಬ್ಯಾಂಕರುಗಳ ಸಮಿತಿಗೆ ಶಿಫಾರಸುಗೊಂಡಿದೆ.
ವೈ.ಎಂ. ಸತೀಶ್ ಫೌಂಡೇಶನ್‍ನ ಎಕ್ಸಿಕ್ಯೂಟಿವ್ ಟ್ರಸ್ಟಿ ವೈ. ಕಾರ್ತಿಕ್ ಅವರು ಅಂಧರ ಡೆಬಿಟ್ ಕಾರ್ಡ್‍ಗಳ ವ್ಯವಹಾರದ ಸಮಗ್ರ ಮಾಹಿತಿಯನ್ನು ಬ್ರೈಲ್ ಲಿಪಿಯಲ್ಲಿ ನೀಡಬೇಕು, ಕರೆನ್ಸಿ ನೋಟುಗಳ ಮೇಲೆ ಬ್ರೈಲ್ ಲಿಪಿಯಲ್ಲಿ ಅಂಕೆ -ಸಂಖ್ಯೆ ಮತ್ತು ಅಕ್ಷರಗಳನ್ನು ಮುದ್ರಿಸಲು ಮತ್ತು ವಿಶೇಷ ಚೇತನರಿಗೆ ಉದ್ಯೋಗವಕಾಶಗಳನ್ನು ಕಲ್ಪಿಸುವ ಕುರಿತು ಬಳ್ಳಾರಿ ನಗರದ ಬ್ಯಾಂಕ್‍ಗಳಿಗೆ ಮನವಿ ಸಲ್ಲಿಸಿದ್ದರು.
ಅಲ್ಲದೇ, ಕರೆನ್ಸಿ ನೋಟುಗಳ ಮೇಲೆ ಬ್ರೈಲ್ ಲಿಪಿಯಲ್ಲಿ ಅಂಕೆ - ಸಂಖ್ಯೆ ಮತ್ತು ಅಕ್ಷರಗಳನ್ನು ಮುದ್ರಿಸುವುದರಿಂದ ನಕಲಿ ನೋಟುಗಳ ಮುದ್ರಣ ಹಾಗೂ ಚಲಾವಣೆಯನ್ನು ನಿಯಂತ್ರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದರು.
ವೈ. ಕಾರ್ತಿಕ್ ಅವರ ಮನವಿಯನ್ನು ಕೆನರಾ ಬ್ಯಾಂಕ್‍ನ ಗಿರೀಶ್ ವಿ. ಕುಲಕರ್ಣಿ ಅವರು ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಗೆ ಸಲ್ಲಿಸಿ, ಅಗತ್ಯ ಕ್ರಮಕೈಗೊಳ್ಳಲು ಕೋರಿದ್ದರು. ವೈ. ಕಾರ್ತಿಕ್ ಅವರ ಮನವಿಯನ್ನು ಪರಿಶೀಲಿಸಿರುವ ಕರ್ನಾಟಕ ರಾಜ್ಯಮಟ್ಟದ ಬ್ಯಾಂಕರುಗಳ ಸಮಿತಿಯ ಸಹಾಯಕ ಮಹಾಪ್ರಭಂದಕರಾಗಿರುವ ಜಿ. ಶಿವಶಂಕರ್ ಅವರು, ಈ ವಿಷಯವನ್ನು ವಿಶೇಷವಾಗಿ ಪರಿಗಣಿಸಲಾಗಿದೆ ಎಂದು ಉತ್ತರವನ್ನು ನೀಡಿದ್ದಾರೆ.
ಅಲ್ಲದೇ, ಬ್ರೈಲ್‍ನಲ್ಲಿ ಡೆಬಿಟ್ ಕಾರ್ಡ್‍ನ ವ್ಯವಹಾರಗಳ ಮಾಹಿತಿಯನ್ನು ನೀಡುವುದರಿಂದ ದೃಷ್ಟಿಹೀನ ಗ್ರಾಹಕರಿಗೆ ಅವರ ಕಾರ್ಡ್ ವಹಿವಾಟುಗಳ ಸಮಗ್ರ ಮಾಹಿತಿಯನ್ನು ಪಡೆಯುವುದು ಸುಲಭ ಸಾಧ್ಯವಾಗುತ್ತದೆ. ಅಲ್ಲದೇ, ಖಾತೆಯನ್ನು ಸ್ವತಂತ್ರವಾಗಿ - ಪಾರದರ್ಶಕತೆಯಿಂದ ನಿಯಂತ್ರಣ ಮಾಡಲು ಸಾಧ್ಯವಾಗುತ್ತದೆ.
ಬ್ರೈಲ್ ಸೇವೆಯನ್ನು ದೃಷ್ಟಿಹೀನ ಗ್ರಾಹಕರ ಖಾತೆಗಳಿಗೆ ಮನವಿ ಮೇರೆಗೆ ಒದಗಿಸಿದಲ್ಲಿ ಖಾತೆದಾರರು ತಮ್ಮ ಖಾತೆಗಳ ಸಮಗ್ರ ವಹಿವಾಟಿನ ಮಾಹಿತಿಗಳನ್ನು ಪಡೆಯಲು ಸಾಧ್ಯವಾಗುತ್ತದೆ. ಬ್ರೈಲ್ ದಾಖಲೆಗಳ ರಚನೆ, ನಿರ್ವಹಣೆ ಮತ್ತು ಪುರಾವೆ ಓದುವಿಕೆಯನ್ನು ತರಬೇತಿ ಪಡೆದ ಸಿಬ್ಬಂದಿ ಒದಗಿಸುತ್ತದೆ. ಬ್ರೈಲ್ ಅಥವಾ ಇ-ಪಬ್ ಪೋರ್ಟಲ್‍ನಲ್ಲಿ ಪ್ರವೇಶಿಸುವ ಮೂಲಕ ಮಾಹಿತಿ ಪಡೆಯಬಹುದಾಗಿದೆ ಎಂದು ವಿವರಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್