
ಗಂಗಾವತಿ, 17 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗ್ರಾಮ ದೇವತೆ ಶ್ರೀ ದುರ್ಗಾದೇವಿ ಜಾತ್ರೆ ಮಹೋ ತ್ಸವದ ಅಂಗವಾಗಿ ನ ಗರದ ಗಣೇಶ್ ವೃತ್ತ ದಲ್ಲಿ ಡಿಸೆoಬರ್ 18 ಗುರುವಾರ ರಾತ್ರಿ 7-30ಕ್ಕೆ ಮೆಲೋಡಿಸ್, ಜೆಎನ್‍ಎನ್ ಚಾನಲ್ ಹಾಗೂ ಶ್ರೀ ಅಂಜನಾದ್ರಿ ಗೆಜ್ಜೆ ಹೆಜ್ಜೆ ಜನ ಸೇವಾ ಕಲಾ ಟ್ರಸ್ಟ್ ಉಪ್ಪಾರ ಓಣಿ ಗಂಗಾವತಿ ಸಹಯೋಗದಲ್ಲಿ ಭಕ್ತಿ ರಸ ಸಂಜೆ, ಭರತ ನಾಟ್ಯ, ದೇವಿ ದಶಾವತಾರ, ಅಕರ್ಷಕ ಪೌರಾಣಿಕ ನಾಟಕ ಸಂಭಾಷಣೆ ಹಾಗೂ ಸಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸಿ ಯಶಶ್ವಿಗೊಳಿಲು ವಿಐಪಿ ಮೆಲೋಡಿಸ್ ಮಾಲಿಕರು ಮತ್ತು ಗಾಯನ ರತ್ನ ಪ್ರಶಸ್ತಿ ಪುರಸ್ಕೃತ ಪಂಪಾಪತಿ ಇಂಗಳಗಿ ಕೋರಿದ್ದಾರೆ.
ಕಾರ್ಯಕ್ರಮದಲ್ಲಿ ಮಾಜಿ ಸಚಿವರಾ ದ ಮಲ್ಲಿಕಾರ್ಜುನ ನಾಗಪ್ಪ, ಮಾಜಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಹೆಚ್. ಆರ್. ಶ್ರೀನಾಥ್, ಶ್ರೀ ದುರ್ಗಾದೇವಿ ದೇವಸ್ಥಾನ ಸಮಿತಿ ಅಧ್ಯಕ್ಷರು, ರಿಟಿಟಿ ಚಾನಲ್ ಮಾಲೀಕರು ಜೋಗದ ನಾರಾಯಣಪ್ಪ ನಾಯಕ, ಗೆಜ್ಜೆ ಹೆಜ್ಜೆ ಕಲಾ ಸಂಘದ ಅಧ್ಯಕ್ಷ ನಾಗರಾಜ್ ಇಂಗಳಗಿ ಇತರರು ಪಾಲ್ಗೊಳ್ಳಲ್ಲಿದ್ದಾರೆ ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್