ಅಂಬೇಡ್ಕರ್ ಸಂಘ : ಹೆಚ್. ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಆಯ್ಕೆ
ಬಳ್ಳಾರಿ, 17 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಬಳ್ಳಾರಿ ಜಿಲ್ಲಾ ಅಂಬೇಡ್ಕರ್ ಸಂಘದ ನೂತನ ಜಿಲ್ಲಾ ಅಧ್ಯಕ್ಷರಾಗಿ ಹೆಚ್. ತಿಪ್ಪೇಸ್ವಾಮಿ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 17 ಪದಾಧಿಕಾರಿಗಳ ನೂತನ ಸಮಿತಿಯನ್ನು ರಚನೆಯಾಗಿದೆ. ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ
ಅಂಬೇಡ್ಕರ್ ಸಂಘ : ಹೆಚ್. ತಿಪ್ಪೇಸ್ವಾಮಿ ಅಧ್ಯಕ್ಷರಾಗಿ ಆಯ್ಕೆ


ಬಳ್ಳಾರಿ, 17 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಬಳ್ಳಾರಿ ಜಿಲ್ಲಾ ಅಂಬೇಡ್ಕರ್ ಸಂಘದ ನೂತನ ಜಿಲ್ಲಾ ಅಧ್ಯಕ್ಷರಾಗಿ ಹೆಚ್. ತಿಪ್ಪೇಸ್ವಾಮಿ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದು, 17 ಪದಾಧಿಕಾರಿಗಳ ನೂತನ ಸಮಿತಿಯನ್ನು ರಚನೆಯಾಗಿದೆ.

ಜಿಲ್ಲಾ ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಆಡಳಿತ ಮಂಡಳಿಯ ಅವಧಿ ಮುಕ್ತಾಯ ಆಗಿದ್ದ ಕಾರಣ ನಡೆದ ಸಂಘದ ಮಹಾಜನ ಸಭೆಯಲ್ಲಿ ಮುಂದಿನ ಅವಧಿಗೆ ಸಂಘದ 40 ಆಜೀವ ಸದಸ್ಯರು ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಬಿ.ಕೆ. ಅನಂತಕುಮಾರ್ ಅವರ ಅಧ್ಯಕ್ಷತೆಯಲ್ಲಿ ಹಾಗೂ ಹಿರಿಯರಾದ ಕೆ. ಗಿರಿಮಲ್ಲಪ್ಪ ಮತ್ತು ಎಲ್. ಮಾರಣ್ಣ ಅವರ ಸಮಕ್ಷಮದಲ್ಲಿ ನೂತನ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಸಂಘದ ಕಾರ್ಯಾಧ್ಯಕ್ಷರಾಗಿ ಇ. ರಾಮಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ಎಂ.ವಿ. ಎರುಕಲಸ್ವಾಮಿ, ಗೌರವ ಅಧ್ಯಕ್ಷರಾಗಿ ಕೆ. ಗಿರಿಮಲ್ಲಪ್ಪ ಮತ್ತು ಎಲ್. ಮಾರಣ್ಣ, ಉಪಾಧ್ಯಕ್ಷರುಗಳಾಗಿ ಕೆ. ವೀರಬಸಪ್ಪ, ಎಸ್. ಕಲ್ಲಪ್ಪ, ಎನ್.ಡಿ. ವೆಂಕಮ್ಮ ಮತ್ತು ಎ. ನಾಗಪ್ಪ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಸಹ ಕಾರ್ಯದರ್ಶಿಯಾಗಿ ಎಸ್. ಪ್ರಸಾದ್, ಖಜಾಂಚಿಯಾಗಿ ಹೆಚ್. ಗೋವಿಂದರಾಜುಲು ಹಾಗೂ ಸಂಘಟನಾ ಕಾರ್ಯದರ್ಶಿಯಾಗಿ ಹೆಚ್. ಮಲ್ಲೇಶ್ವರ ಅವರು ಜವಾಬ್ದಾರಿ ವಹಿಸಿಕೊಂಡಿದ್ದಾರೆ.

ಹಣಕಾಸು ಸಮಿತಿ ಸದಸ್ಯರಾಗಿ ಸಂಘದ ಆರ್ಥಿಕ ವ್ಯವಹಾರಗಳ ಮೇಲ್ವಿಚಾರಣೆಗಾಗಿ ಕೆ. ಗಿರಿಮಲ್ಲಪ್ಪ, ಎಲ್. ಮಾರಣ್ಣ, ಎಸ್. ಚಿದಾನಂದಪ್ಪ, ಎಂ. ಎರಣ್ಣ ಹಾಗೂ ಇ. ರಾಮಪ್ಪ ಅವರನ್ನೊಳಗೊಂಡ ಹಣಕಾಸು ಸಮಿತಿಯನ್ನು ರಚಿಸಲಾಗಿದೆ ಎಂದು ಸಂಘ ತಿಳಿಸಿದೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande