ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ : ಬೊಮ್ಮಾಯಿ
ಹುಬ್ಬಳ್ಳಿ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹ್ಯಾಂಡಸಮ್ ಟೀಚರ್ ಅಂಡ್ ಇಂಟಲಿಜೆಂಟ್ ಪೊಲಿಟಿಷಿಯನ್ ಮತ್ತು ಸಿನ್ಸಿಯರ್ ಫೈಟರ್ ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕದ ಧ್ವನಿಯಾಗಿ ಸದಾಕಾಲ ಕೆಲಸ ಮಾಡಿದ್ದಾರೆ. ಅವರು ಮುಂದೆ ಇದ್ದರೆ ನಾವೆಲ್ಲ ಅವರ ಜೊತೆಗೆ ಹೆಜ್ಜೆಗೆ ಹೆಜ್ಜೆ ಇಟ್ಟು ಕರ್ನಾಟಕವನ
ಹೊರಟ್ಟಿಯವರ ಸೇವೆ ಸದಾಕಾಲ ಮುಂದುವರೆಯಲಿ : ಬೊಮ್ಮಾಯಿ


ಹುಬ್ಬಳ್ಳಿ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹ್ಯಾಂಡಸಮ್ ಟೀಚರ್ ಅಂಡ್ ಇಂಟಲಿಜೆಂಟ್ ಪೊಲಿಟಿಷಿಯನ್ ಮತ್ತು ಸಿನ್ಸಿಯರ್ ಫೈಟರ್ ಬಸವರಾಜ ಹೊರಟ್ಟಿ ಅವರು ಉತ್ತರ ಕರ್ನಾಟಕದ ಧ್ವನಿಯಾಗಿ ಸದಾಕಾಲ ಕೆಲಸ ಮಾಡಿದ್ದಾರೆ. ಅವರು ಮುಂದೆ ಇದ್ದರೆ ನಾವೆಲ್ಲ ಅವರ ಜೊತೆಗೆ ಹೆಜ್ಜೆಗೆ ಹೆಜ್ಜೆ ಇಟ್ಟು ಕರ್ನಾಟಕವನ್ನು ವಿಶೇಷವಾಗಿ ಉತ್ತರ ಕರ್ನಾಟಕವನ್ನು ಎಲ್ಲ ರೀತಿಯಲ್ಲಿ ಅಭಿವೃದ್ಧಿ ಪಡಿಸುವ ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.

ಬಸವರಾಜ ಹೊರಟ್ಟಿ ಅಭಿನಂದನಾ ಸಮಿತಿ ಹುಬ್ಬಳ್ಳಿಯಲ್ಲಿ ಆಯೋಜಿಸಿರುವ ಸಭಾಪತಿ ಬಸವರಾಜ ಹೊರಟ್ಟಿ ಗೌರವ ಸನ್ಮಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.

ನಮ್ಮ ಹೊರಟ್ಟಿ ಮಾಸ್ತರು ಪ್ರತಿಯೊಬ್ಬ ಶಿಕ್ಷಕರ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದಾರೆ. ವಿಧಾನ ಪರಿಷತ್ತಿನಲ್ಲಿ ನಲವತ್ತೈದು ವರ್ಷ ಇದ್ದರೆ, ಶಿಕ್ಷಕರ ಹೃದಯದಲ್ಲಿ ಶಾಸ್ವತ ಸ್ಥಾನ ಮಾಡಿದ್ದಾರೆ. ಅಂತ ಅಪರೂಪದ ವ್ಯಕ್ತಿತ್ವದ ಹೊರಟ್ಟಿಯವರಿಗೆ ಸಾವುರಾರು ಅಭಿನಂದನೆಗಳು. ಹೊರಟ್ಟಿ ಸರ್ ಮಣ್ಣಿನ ಮಗ ಅವರು ತಮ್ಮತನದ ಅಭಿಮಾನ ಯಾವತ್ತು ಬಿಟ್ಟಿಲ್ಲ. ಅವರ ಯಶಸ್ಸಿನ ಗುಟ್ಟು ಅವರ ಸ್ವಾಭಿಮಾನ, ಅವರು ಎಂದೂ ಸ್ವಾಭಿಮಾನದಲ್ಲಿ ರಾಜಿ ಮಾಟಿಕೊಂಡಿಲ್ಲಾ ಹೀಗಾಗಿ ಅವರದು ಸ್ವಾಭಿಮಾನ ಭರಿತ ವ್ಯಕ್ತಿತ್ವ ಹೊರಟ್ಟಿಯವರು ಎಂ ಎಲ್ ಸಿ ಆಗುವ ಮುಂಚೆಯೇ ಪರಿಚಯ ಅವರು ಮಾಸ್ತರ ಇದ್ದರು ಅವರ ಜೊತೆಗೆ ನಮ್ಮ ಮಾವ ಕೆ.ವಿ ಶಂಕರ ಗೌಡರು ಬಹಳ ಆತ್ಮೀಯರು ಹಿಂಗಾಗಿ ಆಗಿನಿಂದಲೂ ನನಗೆ ಆತ್ಮೀಯರಾಗಿ, ಹಿರಿಯರಾಗಿ ಪರಿಚಯ. ಮುಂದೆ 1980 ರಲ್ಲಿ ಅವರು ಚುನಾವಣೆ ನಿಂತರು ಆಗ ಎಸ್ ಐ ಶೆಟ್ಟರ ಅಂತ ನಮ್ಮ ಪಕ್ಷದಿಂದ ನಿಂತಿದ್ದರು. ಹೊರಟ್ಟಿಯವರು ಸ್ವತಂತ್ರ ಸ್ಪರ್ಧೆ ಮಾಡಿದ್ದರು. ಅವರ ವಿರುದ್ದ ನಾನು ಮಾಡಿರುವುದು ಒಂದೇ ಚುನಾವಣೆ ಅದಾದ ಮೇಲೆ ಅಜಾತ ಶತ್ರು ಅಂತ ಕರೆಯಲು ಅವರು ಮುಂದಿನ ಚುನಾವಣೆ ಒಳಗೆ ನಮ್ಮನ್ನು ಸ್ನೇಹಿತರನ್ನಾಗಿ ಮಾಡಿಕೊಂಡು ಏಳು ಚುನಾವಣೆಗಳನ್ನು ನಾವು ಅವರ ಜೊತೆಗೆ ಮಾಡಿದ್ದೇವೆ. ಅಂತಹ ವ್ಯಕ್ತಿತ್ವ ಬಸವರಾಜ ಹೊರಟ್ಟಿಯವರದು. ನಾನು ನೀರಾವರಿ ಸಚಿವ ಆಗಿದ್ದಾಗ ನನ್ನ ಕರೆದು ತಮ್ಮೂರು ಯಡಳ್ಳಿಯಲ್ಲಿ ಸವುಳು ಜವುಳು ಸಮಸ್ಯೆಯಿಂದ ರೈತರಿಗೆ ತೊಂದರೆಯಾಗಿದೆ ಅಂತ ಹೇಳಿದರು. ಆ ಕಾರಣದಿಂದ ನಾನು ಸವುಳು ಜುವಳು ಕಾರ್ಯಕ್ರಮವನ್ನು ರೂಪಿಸುವಂತಾಯಿತು. ಅವರು ಶಿಕ್ಷಕರ ವಿಚಾರದಲ್ಲಿ ಎಷ್ಟು ಕಠೋರವಾಗಿದ್ದರು ಎಂದರೆ ಅದನ್ನು ಸಾಧಿಸುವವರೆಗೂ ಬಿಡುತ್ತಿರಲಿಲ್ಲ. ಅದಕ್ಕಾಗಿ ಮುಖ್ಯಮಂತ್ರಿಗಳ ಜೊತೆ ಜಗಳವನ್ನೂ ಆಡುತ್ತಿದ್ದರು. ಅವರು ಜಗಳ ಆಡದೇ ಇರುವ ಮುಖ್ಯಮಂತ್ರಿಗಳೇ ಇಲ್ಲ. ಜಗಳ ಆಡಿಯೂ ಪ್ರೀತಿ ವಿಶ್ವಾಸ ಉಳಿಸಿಕೊಳ್ಳುತ್ತಿದ್ದರು. ಇವತ್ತಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಯೂ ಜಗಳ ಆಡುತ್ತಾರೆ. ಆದರೆ, ಆ ಜಗಳದಲ್ಲಿಯೂ ಸ್ನೇಹ ಇರುತ್ತದೆ. ಈ ಥರದ ರಾಜಕಾರಣದಲ್ಲಿ ಬಹಳ ಕಷ್ಟ. ಏಕೆಂದರೆ ಒಮ್ಮೆ ಜಗಳಾಡಿದರೆ ಮುಖ ನೋಡುವುದಿಲ್ಲ. ಅಂತಹ ಕಾಲದಲ್ಲಿ ಅವರು ತಮ್ಮ ಸ್ನೇಹವನ್ನು ಎಂದೂ ಕೂಡ ಬಿಟ್ಟಿಲ್ಲ. ಸ್ವಾಭಿಮಾನ ಮತ್ತು ಸ್ನೇಹ ಎರಡನ್ನೂ ಜೊತೆ ಜೊತೆಗೆ ತೆಗೆದುಕೊಂಡು ಹೋಗಿರುವ ನೈಪುಣ್ಯತೆ ಬಸವರಾಜ ಹೊರಟ್ಟಿಯವರಿಗೆ ಇದೆ ಎಂದು ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande