ಜಾಹಿರಾತು ಗುತ್ತಿಗೆದಾರರು ಶುಲ್ಕ ಪಾವತಿಸಿರುವ ಮಾಹಿತಿ ಸಲ್ಲಿಸಲು ಸೂಚನೆ
ಹಾಸನ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಅಳವಡಿಸಿರುವ ಜಾಹಿರಾತು ಫಲಕಗಳು, ವಿಭಜಕ ಮಧ್ಯ ಇರುವ ಜಾಹಿರಾತು ಫಲಕಗಳು, ಮುಖ್ಯ ವೃತ್ತಗಳಲ್ಲಿ ದೊಡ್ಡದಾಗಿ ಅಳವಡಿಸಿರುವ ಜಾಹಿರಾತು ಫಲಕಗಳನ್ನು ಅಳವಡಿಸಿರುವುದು ಸರಿಯಷ್ಟೇ ಆದರೇ ಸದರಿ ಜಾಹಿರಾತು ಫಲಕಗಳ ಅಳ
ಜಾಹಿರಾತು ಗುತ್ತಿಗೆದಾರರು ಶುಲ್ಕ ಪಾವತಿಸಿರುವ ಮಾಹಿತಿ ಸಲ್ಲಿಸಲು ಸೂಚನೆ


ಹಾಸನ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಈಗಾಗಲೇ ಅಳವಡಿಸಿರುವ ಜಾಹಿರಾತು ಫಲಕಗಳು, ವಿಭಜಕ ಮಧ್ಯ ಇರುವ ಜಾಹಿರಾತು ಫಲಕಗಳು, ಮುಖ್ಯ ವೃತ್ತಗಳಲ್ಲಿ ದೊಡ್ಡದಾಗಿ ಅಳವಡಿಸಿರುವ ಜಾಹಿರಾತು ಫಲಕಗಳನ್ನು ಅಳವಡಿಸಿರುವುದು ಸರಿಯಷ್ಟೇ ಆದರೇ ಸದರಿ ಜಾಹಿರಾತು ಫಲಕಗಳ ಅಳವಡಿಕೆಗೆ ಸಂಬಂದಪಟ್ಟ ಜಾಹಿರಾತು ಗುತ್ತಿಗೆದಾರರು ಕಾರ್ಯದೇಶ ಪಡೆದಿರುವ ಬಗ್ಗೆ ಹಾಗೂ ಶುಲ್ಕ ಪಾವತಿಸಿರುವ ಮಾಹಿತಿಯನ್ನು ಮಹಾನಗರ ಪಾಲಕೆ ಕಚೇರಿಯ ಕಂದಾಯಾಧಿಕಾರಿಗಳಿಗೆ ಡಿ.16 ರೊಳಗೆ ನೀಡಲು ಸೂಚಿಸಿದೆ.

ತಪ್ಪಿದಲ್ಲಿ ಜಾಹಿರಾತು ಕಾರ್ಯಾದೇಶವನ್ನು ಮಹಾನಗರ ಪಾಲಿಕೆಯಿಂದ ಪಡೆದಿಲ್ಲವೆಂದು ಪರಿಗಣಿಸಿ ಹಾಲಿ ಇರುವ ಜಾಹಿರಾತು ಫಲಕಗಳನ್ನು ಮಹಾನಗರ ಪಾಲಿಕೆಯ ವಶಕ್ಕೆ ಪಡೆದು ನಿಯಮಾನುಸಾರ ಟೆಂಡರ್ ಕರೆಯಲು ಕ್ರಮವಹಿಸಲಾಗುವುದು ಎಂದು ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande