
ಹಾಸನ, 13 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಹಾಸನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ 01 ರಿಂದ 35 ವಾರ್ಡ್ಗಳ ಎಲ್ಲಾ ವಸತಿ ಮತ್ತು ವಾಣಿಜ್ಯ ಕಟ್ಟಡಗಳ ಸಂಬಂದ ಇ-ಆಸ್ತಿ ಗಣಕೀಕೃತವಾಗುತ್ತಿರುವುದರಿಂದ ಆನ್-ಲೈನ್ ತಂತ್ರಾಂಶದಲ್ಲಿ ವ್ಯತ್ಯಾಸವನ್ನು ಸರಿಪಡಿಸಲು ಕ್ರಮವಹಿಸಲಾಗುತ್ತಿದೆ. ಆದುದರಿಂದ ಆಸ್ತಿಯ ಮಾಲೀಕರು ಮನೆ ಬಾಗಿಲಿಗೆ ಬರುವ ಮಹಾನಗರ ಪಾಲಿಕೆಯ ಸಿಬ್ಬಂದಿಗಳಿಗೆ ತಮ್ಮ ಆಸ್ತಿಗೆ ಸಂಬಂದಪಟ್ಟ ಎಲ್ಲಾ ದಾಖಲಾತಿಗಳೊಂದಿಗೆ ಹಾಜರಿದ್ದು ಸರ್ವೆ ಕಾರ್ಯದಲ್ಲಿರುವ ಅಧಿಕಾರಿ/ನೌಕರರುಗಳಿಗೆ ಸಹಕರಿಸಬೇಕಾಗಿ ಮಹಾನಗರ ಪಾಲಿಕೆಯ ಆಯುಕ್ತರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa