ಸಂಶೋಧನೆ ಪ್ರಯೋಗಾಲಯಗಳ ಮಾನ್ಯತೆ ಕುರಿತು ಜಾಗೃತಿ
ವಿಜಯಪುರ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ವಿಜಯಪುರ ನಗರದಬಿ. ಎಲ್‌. ಡಿ. ಇ ಡೀಮ್ಡ್ ವಿಶ್ವ ವಿದ್ಯಾಲಯದಲ್ಲಿ, ಆಂತರಿಕ ಗುಣಮಟ್ಟ ಭರವಸೆ ಘಟಕ (IQAC) ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ (R&D Cell) QCI–NABL ಸಹಯೋಗದಲ್ಲಿ ನಿರ್ಣಾಯಕ ಮತ್ತು ಸಂಶೋಧನೆ ಪ್ರಯೋಗಾಲಯಗಳ ಮಾನ್ಯತೆ ಕುರಿ
ಜಾಗೃತಿ


ವಿಜಯಪುರ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ವಿಜಯಪುರ ನಗರದಬಿ. ಎಲ್‌. ಡಿ. ಇ ಡೀಮ್ಡ್ ವಿಶ್ವ ವಿದ್ಯಾಲಯದಲ್ಲಿ, ಆಂತರಿಕ ಗುಣಮಟ್ಟ ಭರವಸೆ ಘಟಕ (IQAC) ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗ (R&D Cell) QCI–NABL ಸಹಯೋಗದಲ್ಲಿ ನಿರ್ಣಾಯಕ ಮತ್ತು ಸಂಶೋಧನೆ ಪ್ರಯೋಗಾಲಯಗಳ ಮಾನ್ಯತೆ ಕುರಿತು ಜಾಗೃತಿ ಕಾರ್ಯಕ್ರಮ ಇಂದು ಶನಿವಾರ ನಡೆಯಿತು.

ನಿರ್ಣಾಯಕ ಮತ್ತು ಸಂಶೋಧನಾ ಪ್ರಯೋಗಾಲಯಗಳಿಗೆ ಅಗತ್ಯವಿರುವ ಗುಣಮಟ್ಟದ ಮಾನದಂಡಗಳು, ಕಾರ್ಯವಿಧಾನಗಳು ಹಾಗೂ ಎನ್.ಎ.ಬಿ.ಎಲ್(NABL) ಮಾನ್ಯತೆ ಪ್ರಕ್ರಿಯೆಗಳ ಕುರಿತು ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವ ಈ ಕಾರ್ಯಕ್ರಮದಲ್ಲಿ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸಲಹೆಗಾರ ಸಿ. ವೇಣುಗೋಪಾಲ, ಸಂಯೋಜಕ ಸಂತೋಷ, ಬಿ.ಎಲ್.ಡಿ.ಇ ಮೆಡಿಕಲ್ ಕಾಲೇಜಿನ ಸೂಕ್ಷ್ಮಜೀವಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಎನ್.ಎ.ಬಿ.ಕ್ಯೂ ಸಲಹೆಗಾರ ಡಾ. ಪ್ರವೀಣ ಶಹಾಪುರ ಅವರು ಗುಣಮಟ್ಟದ ರೂಪರೇಖೆಗಳು, ಎನ್.ಎ.ಬಿ.ಎಲ್ ಮಾನ್ಯತೆ ಪಡೆಯಲು ಅಗತ್ಯವಾದ ಅಂಶಗಳು ಹಾಗೂ ಉತ್ತಮ ಆಚರಣೆಗಳ ಕುರಿತು ಮಾತನಾಡಿದರು.

ಬಿ.ಎಲ್‌.ಡಿ.ಇ ಡೀಮ್ಡ್ ವಿವಿ ಸಮಕುಲಾಧಿಪತಿ ಡಾ. ವೈ. ಎಂ. ಜಯರಾಜ ಅವರು ಕಾರ್ಯಕ್ರಮ ಉದ್ಘಾಟಿಸಿ‌ ಮಾತನಾಡಿ, ವೈದ್ಯಕೀಯ ಮತ್ತು ಇತರ ಶೈಕ್ಷಣಿಕ ಸಂಸ್ಥೆಗಳಿಗೆ ಎನ್.ಎ.ಬಿ.ಎಲ್ ಮಾನ್ಯತೆಯ ಮಹತ್ವ, ಗುಣಮಟ್ಟ, ವಿಶ್ವಾಸಾರ್ಹತೆ ಹಾಗೂ ಜಾಗತಿಕ ಮಾನ್ಯತೆ ಕುರಿತು ವಿವರಿಸಿದರು.

ಮಕ್ಕಳಶಾಸ್ತ್ರ ವಿಭಾಗದ ಮುಖ್ಯಸ್ಥ ಮತ್ತು ಸಂಶೋಧನೆ ಅಭಿವೃದ್ಧಿ ವಿಭಾಗದ ನಿರ್ದೇಶಕ ಡಾ. ಎಂ. ಎಂ. ಪಾಟೀಲ ಅವರು ಸಂಸ್ಥೆಯ ಗುಣಮಟ್ಟ ಬಲವರ್ಧನೆಗೆ ಇಂಥ ಕಾರ್ಯಕ್ರಮಗಳು ಅಗತ್ಯತವಾಗಿವೆ ಎಂದು ಹೇಳಿದರು.

ಈ ಕಾರ್ಯಕ್ರಮದಲ್ಲಿ 75 ಪ್ರತಿನಿಧಿಗಳು ಭಾಗವಹಿಸಿದ್ದರು. ಬಾಗಲಕೋಟೆಯ ಎಸ್‌.ಎನ್‌.ಎಂ.ಸಿ, ವಿಜಯಪುರದ ಅಲ್- ಅಮೀನ್ ವೈದ್ಯಕೀಯ ಕಾಲೇಜು, ಬಿ.ಎಲ್‌.ಡಿ.ಇ.ಎ ಎಂಜಿನಿಯರಿಂಗ್, ಆಯುರ್ವೇದ, ನರ್ಸಿಂಗ್ ಹಾಗೂ ಫಾರ್ಮಸಿ ಕಾಲೇಜುಗಳು, ಜೊತೆಗೆ ಎನ್.ಎ.ಎ.ಸಿ, ಎನ್.ಎ.ಬಿ.ಎಚ್, ಎನ್.ಐ.ಆರ್.ಎಫ್,, ಎನ್.ಎ.ಬಿ.ಎಲ್ ಸಂಯೋಜಕರು ಹಾಗೂ ಐ.ಕ್ಯೂ.ಎ.ಸಿ ಸದಸ್ಯರು ಉಪಸ್ಥಿತರಿದ್ದರು.

ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡವರು ಗುಣಾತ್ಮಕ ಭಾರತ ಪ್ರತಿಜ್ಞೆ ಸ್ವೀಕರಿಸಿ, ಗುಣಮಟ್ಟದ ಶ್ರೇಷ್ಠತೆ ಮತ್ತು ನಿರಂತರ ಸುಧಾರಣೆಗೆ ತಮ್ಮ ಬದ್ಧತೆಯನ್ನು ವ್ಯಕ್ತಪಡಿಸಿದರು.

ಡಾ. ಮಂಜುಳಾ ನಿರೂಪಿಸಿದರು.‌ ಡಾ. ನಿರ್ಮಲಾ ಜಿ ವಂದಿಸಿದರು.

ಹಿಂದೂಸ್ತಾನ್ ಸಮಾಚಾರ್ / jyothi deshpande


 rajesh pande