81 ನೇ ಸಂಸ್ಥಾಪನಾ ದಿನಾಚರಣೆ
ಗದಗ, 13 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರೋಟರಿ ಸಂಸ್ಥೆ ಗದಗ-ಬೆಟಗೇರಿಯ 81ನೇ ಸಂಸ್ಥಾಪನಾ ದಿನಾಚರಣೆಯನ್ನು ಉಷಾದೇವಿ ಜಿ.ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ನಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ರೊ. ವಿ.ಕೆ. ಗುರುಮಠ ಮಾತನಾಡಿ, ಈ ಭಾಗದ ಜನರಲ್ಲಿ ರೋಟರಿ ಸಂಸ್ಥೆ ತನ್ನ ಗೌರವವ
ಫೋಟೋ


ಗದಗ, 13 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರೋಟರಿ ಸಂಸ್ಥೆ ಗದಗ-ಬೆಟಗೇರಿಯ 81ನೇ ಸಂಸ್ಥಾಪನಾ ದಿನಾಚರಣೆಯನ್ನು ಉಷಾದೇವಿ ಜಿ.ಕುಷ್ಟಗಿ ರೋಟರಿ ಕಮ್ಯುನಿಟಿ ಕೇರ್ ಸೆಂಟರ್‌ನಲ್ಲಿ ಆಚರಿಸಲಾಯಿತು. ಮುಖ್ಯ ಅತಿಥಿಗಳಾಗಿ ಆಗಮಿಸಿ ರೊ. ವಿ.ಕೆ. ಗುರುಮಠ ಮಾತನಾಡಿ, ಈ ಭಾಗದ ಜನರಲ್ಲಿ ರೋಟರಿ ಸಂಸ್ಥೆ ತನ್ನ ಗೌರವವನ್ನು ಹೆಚ್ಚಿಸಿಕೊಂಡಿದೆ.

ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಅಧ್ಯಕ್ಷ ರೊ.ಡಾ. ರಾಜೇಂದ್ರ ಗಚ್ಚಿನ್ನಠ ಮಾತನಾಡಿ, ಕಳೆದ ವೀರೇಶ್ವರ ಪುಣ್ಯಾಶ್ರಮದಲ್ಲಿ 80 ವರ್ಷಗಳಿಂದ ಉತ್ತಮ ಕಾರ್ಯವನ್ನು ಕೈಗೊಂಡು ಸಂಸ್ಥೆಯ ಕೀರ್ತಿಯನ್ನು ಹೆಚ್ಚಿಸಿದ ಎಲ್ಲಾ ಮಾಜಿ ಅಧ್ಯಕ್ಷರುಗಳಿಗೆ ಹಾಗೂ ಹಾಲಿ ಸದಸ್ಯರು ಮತ್ತು ಪದಾಧಿಕಾರಿಗಳಿಗಳಿಗೆ ಅಭಿನಂದನೆ ಸಲ್ಲಿಸಿದರು.

ಅಂಧರಿಗಾಗಿ ವಸತಿ ನಿಲಯ, ಅಂಧರಿಗಾಗಿ ಕೃತಕ ಬುದ್ಧಿಮತ್ತೆ ಕನ್ನಡಕ ವಿತರಣೆ, ಜೈಪೂರ ಫುಟ್ ಕ್ಯಾಂಪ್, ಉಚಿತ ಕಣ್ಣಿನ ಆಸ್ಪತ್ರೆಯಲ್ಲಿ ನಿರಂತರವಾಗಿ ಕಣ್ಣಿನ ಪೊರೆಯ ಶಸ್ತ್ರ ಚಿಕಿತ್ಸೆಯನ್ನು ನೆರೆವೇರಿಸುತ್ತಾ ಸಮಾಜದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ ಎಂದರು.

ರೊ. ಶ್ರೀಧರ್ ಸುಲ್ತಾನಪೂರ್ ರೋಟರಿ ಸಂಸ್ಥೆಯ ಇತಿಹಾಸವನ್ನು ತಿಳಿಸಿದರು. ಸಮಾರಂಭದಲ್ಲಿ ಗದಗ ಜಿಲ್ಲಾ ಚೇಂಬರ್ ಕಾಮರ್ಸ್‌ನ ಅಧ್ಯಕ್ಷ ರೊ. ಶರಣಬಸಪ್ಪ ಗುಡಿಮನಿ, ಗದಗ ಅತಿಥಿಗಳಾಗಿ ಆಗಮಿಸಿದ ಡಾ. ಕೆ.ವಿ. ಧನ್ನೂರ್ ಮಾತನಾಡಿ, ರೋಟರಿ ಸಂಸ್ಥೆಯು ತಾನು ಬೆಳೆಯುವುದರ ಜೊತೆಗೆ ಇನ್ನೂ ಅನೇಕ ಸಂಸ್ಥೆಗಳಿಗೆ ಪ್ರಾಯೋಜತ್ವವನ್ನು ನೀಡಿ ಅವುಗಳಿಂದಲೂ ಸಮಾಜಿಕ ಸೇವಾ ಕಾರ್ಯಗಳನ್ನು ಕೈಗೊಳ್ಳುವಂತೆ ಪ್ರೇರಣೆ ನೀಡಿದೆ. ಈ ಸಂಸ್ಥೆಯು 80 ವರ್ಷಗಳ ಸೇವೆಯನ್ನು ಪೂರೈಸಲು ಅದರ ಸದಸ್ಯರ ಹಾಗೂ ಪದಾಧಿಕಾರಿಗಳ ಕಾರ್ಯ ತತ್ಪರತೆ ಹಾಗೂ ಅವರ ದಕ್ಷತೆ ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ರಾಜು ಹೆಬ್ಬಳ್ಳಿ ಅವರನ್ನು ಸನ್ಮಾನಿಸಲಾಯಿತು. ರೊ. ಡಾ. ಶೇಖರ್ ಡಿ.ಸಜ್ಜನರ, ರೊ. ಮಹಾಂತೇಶ್ ಬಾತಖಾನಿ ಹಾಗೂ ರೊ. ಡಾ. ವಿನಯ್ ಅವರು ಅತಿಥಿಗಳ ಹಾಗೂ ಸನ್ಮಾನಿತರನ್ನು ಸಭೆಗೆ ಪರಿಚಯಿಸಿದರು. ರೊ. ಡಾ. ರಾಜಶೇಖರ ಬಳ್ಳಾರಿ, ರೊ. ನವೀನ ಕುಷ್ಟಗಿ ಸಮಾರಂಭದ ಆತಿಥ್ಯ ವಹಿಸಿದ್ದರು.

ರೊ. ಬಾಲಕೃಷ್ಣ ಕಾಮತ್ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ರೊ. ಡಾ. ಧನೇಶ ದೇಸಾಯಿ, ರೊ. ಶೈಲೇಂದ್ರ ಬಿರಾದಾರ್, ರೊ. ಶಿವಾಚಾರ್ಯ ಹೊಸಳ್ಳಿಮಠ, ರೊ. ಡಾ. ಕಮಲಾಕ್ಷಿ ಅಂಗಡಿ, ರೊ. ಸಂತೋಷ ಅಕ್ಕಿ, ರೊ. ಅಕ್ಷಯ ಶೆಟ್ಟಿ, ಡಾ. ಆರ್.ಬಿ. ಉಪ್ಪಿನ ರೊ. ಮಾಧವ ಕುಲಕರ್ಣಿ, ರೊ. ಚನ್ನವೀರಪ್ಪ ಹುಣಶಿಕಟ್ಟಿ, ರೊ. ಚೇತನ ಅಂಗಡಿ, ರೊ. ಎಂ.ಸಿ. ಐಲಿ, ರೊ. ಮಂಜುನಾಥ ಬೇಲೇರಿ, ಡಾ. ಪ್ರದೀಪ ಉಗಲಾಟ, ರೊ. ಹೆಚ್.ಎಸ್. ಪಾಟೀಲ, ರೊ. ಡಾ. ವಿ.ಸಿ. ಕಲ್ಮಠ, ರೊ. ಅಶೋಕ ಅಕ್ಕಿ, ಅಶ್ವಿನಿ ಜಗತಾಪ, ನೀಲಾಂಬಿಕಾ ಉಗಲಾಟ ಮುಂತಾದವರು ಭಾಗವಹಿಸಿದ್ದರು. ಕಾರ್ಯದರ್ಶಿ ರೊ. ಸುರೇಶ ಎಸ್.ಕುಂಬಾರ ವಸ್ತು. ಸೇರಿದಂತೆ ಹಲವಾರು ಭಾಗಿಯಾಗಿದ್ದರು.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande