ಕೃಷಿ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಪಂದ್ಯಾವಳಿ
ರಾಯಚೂರು, 12 ಡಿಸೆಂಬರ್ (ಹಿ.ಸ.) : ಆ್ಯಂಕರ್ : ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಏಳು ಕೃಷಿ ಮಹಾವಿದ್ಯಾಲಯಗಳ ಅಂತರ ಮಹಾವಿದ್ಯಾಲಯ ಗುಂಪು ಪಂದ್ಯಾವಳಿಗಳು ರಾಯಚೂರಿನ ಕೃ.ವಿ.ವಿಯ ಆವರಣದಲ್ಲಿ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಯಶಸ್ವಿಯಾಗಿ ನಡೆದವು. 2025-26ನ
ಕೃಷಿ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಪಂದ್ಯಾವಳಿ


ಕೃಷಿ ವಿಶ್ವವಿದ್ಯಾಲಯ ಅಂತರ ಮಹಾವಿದ್ಯಾಲಯಗಳ ಪಂದ್ಯಾವಳಿ


ರಾಯಚೂರು, 12 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ರಾಯಚೂರು ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯದ ವ್ಯಾಪ್ತಿಯ ಏಳು ಕೃಷಿ ಮಹಾವಿದ್ಯಾಲಯಗಳ ಅಂತರ ಮಹಾವಿದ್ಯಾಲಯ ಗುಂಪು ಪಂದ್ಯಾವಳಿಗಳು ರಾಯಚೂರಿನ ಕೃ.ವಿ.ವಿಯ ಆವರಣದಲ್ಲಿ ಕೃಷಿ ತಾಂತ್ರಿಕ ಮಹಾವಿದ್ಯಾಲಯದ ವತಿಯಿಂದ ಯಶಸ್ವಿಯಾಗಿ ನಡೆದವು.

2025-26ನೇ ಸಾಲಿನ ಅಂತರ ಮಹಾವಿದ್ಯಾಲಯಗಳ ಪುರುಷರ ಹಾಗೂ ಮಹಿಳೆಯರ ಟೇಬಲ್ ಟೇನ್ನಿಸ್, ಕಬಡ್ಡಿ, ವಾಲಿಬಾಲ್ ಮತ್ತು ಖೋ-ಖೋ ಸ್ಪರ್ಧೆಗಳಲ್ಲಿ ಏಳು ಕೃಷಿ, ಸ್ನಾತಕೋತ್ತರ ಮಹಾವಿದ್ಯಾಲಯಗಳಿಂದ 320 ಪುರುಷ ಮತ್ತು 200 ಮಹಿಳಾ ಕ್ರೀಡಾ ಪಟುಗಳು ಭಾಗವಹಿಸಿದ್ದರು.

ಪುರುಷರ ಟೇಬಲ್ ಟೇನ್ನಿಸ್ ವಿಭಾಗದಲ್ಲಿ ರಾಯಚೂರಿನ ಕೃವಿವಿಯ ಸ್ನಾತಕೋತ್ತರ ವಿಭಾಗವು ಚಾಂಪಿಯನ್ ಹಾಗೂ ಭೀಮರಾಯನಗುಡಿ ಕೃಷಿ ಮಹಾವಿದ್ಯಾಲಯವು ರನ್ ಆಫ್ ಸ್ಥಾನ ಪಡೆದವು. ಮಹಿಳೆಯರ ಟೇಬಲ್ ಟೇನ್ನಿಸ್ ವಿಭಾಗದಲ್ಲಿ ರಾಯಚೂರಿನ ಕೃಷಿ ತಾಂತ್ರಿಕ ಮಹಾವಿದ್ಯಾಲಯವು ಚಾಂಪಿಯನ್ ಹಾಗೂ ಗಂಗಾವತಿ ಕೃಷಿ ಮಹಾವಿದ್ಯಾಲಯವು ರನ್ ಆಫ್ ಸ್ಥಾನ ಪಡೆದವು.

ಪುರುಷರ ಕಬಡ್ಡಿ ವಿಭಾಗದಲ್ಲಿ ರಾಯಚೂರಿನ ಕೃಷಿ ಮಹಾವಿದ್ಯಾಲಯವು ಚಾಂಪಿಯನ್ ಹಾಗೂ ಗಂಗಾವತಿ ಕೃಷಿ ಮಹಾವಿದ್ಯಾಲಯವು ರನ್ ಆಫ್ ಸ್ಥಾನ ಪಡೆದವು. ಪುರುಷರ ವಾಲಿಬಾಲ್ ವಿಭಾಗದಲ್ಲಿ ರಾಯಚೂರಿನ ಸ್ನಾತಕೋತ್ತರ ವಿಭಾಗವು ಚಾಂಪಿಯನ್ ಹಾಗೂ ರಾಯಚೂರಿನ ತಾಂತ್ರಿಕ ಕೃಷಿ ಮಹಾವಿದ್ಯಾಲಯವು ರನ್ ಆಫ್ ಸ್ಥಾನ ಪಡೆದವು.

ಮಹಿಳೆಯರ ವಾಲಿಬಾಲ್ ವಿಭಾಗದಲ್ಲಿ ಗಂಗಾವತಿಯ ಕೃಷಿ ಮಹಾವಿದ್ಯಾಲಯವು ಚಾಂಪಿಯನ್ ಹಾಗೂ ಕಲಬುರಗಿ ಕೃಷಿ ಮಹಾವಿದ್ಯಾಲಯವು ರನ್ ಆಫ್ ಸ್ಥಾನ ಪಡೆದವು. ಪುರುಷರ ಖೋ-ಖೋ ವಿಭಾಗದಲ್ಲಿ ರಾಯಚೂರಿನ ತಾಂತ್ರಿಕ ಕೃಷಿ ಮಹಾವಿದ್ಯಾಲಯವು ಚಾಂಪಿಯನ್ ಹಾಗೂ ರಾಯಚೂರಿನ ಕೃಷಿ ಮಹಾವಿದ್ಯಾಲಯವು ರನ್ ಆಫ್ ಸ್ಥಾನ ಪಡೆದವು.

ಮಹಿಳೆಯರ ಖೋ-ಖೋ ವಿಭಾಗದಲ್ಲಿ ಕಲಬುರಗಿಯ ಕೃಷಿ ಮಹಾವಿದ್ಯಾಲಯವು ಚಾಂಪಿಯನ್ ಹಾಗೂ ರಾಯಚೂರಿನ ಕೃಷಿ ಮಹಾವಿದ್ಯಾಲಯವು ರನ್ ಆಫ್ ಸ್ಥಾನ ಪಡೆದವು.

ಡಿ.10ರಂದು ಸಮಾರೋಪ ಸಮಾರಂಭ ನಡೆಯಿತು. ಕುಲಪತಿ ಡಾ.ಎಂ.ಹನುಮ0ತಪ್ಪ ಅವರು ಮಾತನಾಡಿ, ಕ್ರೀಡಾ ಮನೋಭಾವ ಮತ್ತು ಶಿಸ್ತಿನ ಬಗ್ಗೆ ವಿದ್ಯಾರ್ಥಿಳಿಗೆ ಸಲಹೆ ಮಾಡಿದರು. ವಿದ್ಯಾರ್ಥಿಗಳು ಶೈಕ್ಷಣಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಸಮಾನವಾಗಿ ತೊಡಗಿಸಿಕೊಳ್ಳಬೇಕೆಂದರು.

ಸಮಾರೋಪ ಸಮಾರಂಭದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳಾದ ಡಾ. ನಾರಾಯಣರಾವ್ ಕೆ., ಕೃಷಿ ಮಹಾವಿದ್ಯಾಲಯದ ಡೀನ್ ಡಾ.ಎಮ್.ಎಸ್.ಅಯ್ಯನಗೌಡರ್, ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಡೀನ್ ಡಾ.ಯು.ಸತೀಶ ಕುಮಾರ್, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಡೀನ್ ಡಾ.ಜಾಗೃತಿ ಬಿ. ದೇಶಮಾನ್ಯ, ಆಡಳಿತ ಅಧಿಕಾರಿ ಡಾ. ರಾಜಣ್ಣ, ಕೃವಿವಿಯ ದೈಹಿಕ ಶಿಕ್ಷಣ ವಿಭಾಗ ಉಪ ನಿರ್ದೇಶಕರು ಹಾಗೂ ಪ್ರಾಧ್ಯಾಪಕರು, ಇತರೆ ಅಧಿಕಾರಗಳು ಮತ್ತು ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಉಪಸ್ಥಿತರಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande