
ನವದೆಹಲಿ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ರಾಜ್ಯ ಸಭೆಯ ನೂತನ ಸಭಾಪತಿಯಾದ ಸಿ.ಪಿ. ರಾಧಾಕೃಷ್ಣನ್ ಅವರನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಸೋಮವಾರ ಸಂಸತ್ತಿನಲ್ಲಿ ಸ್ವಾಗತಿಸಿ ಅಭಿನಂದಿಸಿದರು.
ಸಾಮಾನ್ಯ ರೈತ ಕುಟುಂಬದಿಂದ ಉಪರಾಷ್ಟ್ರಪತಿ ಸ್ಥಾನಮಾನದ ಮಟ್ಟಕ್ಕೆ ತಲುಪಿರುವ ರಾಧಾಕೃಷ್ಣನ್ ಅವರ ಬದುಕು ಭಾರತೀಯ ಪ್ರಜಾಪ್ರಭುತ್ವದ ನಿಜವಾದ ಶಕ್ತಿಯ ದ್ಯೋತಕ ಎಂದರು.
ರಾಧಾಕೃಷ್ಣನ್ ಅವರ ಸಮಾಜ ಸೇವೆಯ ಬದುಕು, ತುರ್ತು ಪರಿಸ್ಥಿತಿಯಲ್ಲಿ ಪ್ರಜಾಪ್ರಭುತ್ವ ರಕ್ಷಣೆಗೆ ತೋರಿದ ಧೈರ್ಯ, ಕೊಯಮತ್ತೂರಿನ ಬಾಂಬ್ ಸ್ಫೋಟ ಹಾಗೂ ಬಾಲ್ಯದ ಅಪಘಾತದಿಂದ ಪಾರಾದ ಅನುಭವಗಳು ಅವರ ಜೀವನದ ದಿಕ್ಕನ್ನು ರೂಪಿಸಿದೆ ಎಂದು ಪ್ರಧಾನಿ ನೆನಪಿಸಿದರು.
ಅಂಚಿನ ವರ್ಗಗಳಿಗೆ ಸೇವೆ – ಅಂತ್ಯೋದಯ, ರಾಧಾಕೃಷ್ಣನ್ ಅವರ ಜೀವನಪಾಠವಾಗಿದ್ದು, ಸದನವನ್ನು ಅವರು ನಡೆಸುತ್ತಿರುವುದು ಎಲ್ಲ ಸದಸ್ಯರಿಗೆ ಹೆಮ್ಮೆ ಎಂದೂ ಮೋದಿ ಹೇಳಿದರು.
ಸದನದ ಘನತೆ ಮತ್ತು ಸಭಾಪತಿಗಳ ಸ್ಥಾನಮಾನವನ್ನು ಕಾಪಾಡುವಲ್ಲಿ ಎಲ್ಲ ಸದಸ್ಯರು ಸಹಕರಿಸುವರೆಂಬ ವಿಶ್ವಾಸವನ್ನೂ ಪ್ರಧಾನ ಮಂತ್ರಿ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa