ಲೋಕ ಸಭೆಯಲ್ಲಿ ಪ್ರತಿಪಕ್ಷಗಳ ಗದ್ದಲ ; ಮಧ್ಯಾಹ್ನ 2 ಗಂಟೆಗೆ ಕಲಾಪ ಮುಂದೂಡಿಕೆ
ನವದೆಹಲಿ, 01 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಸಂಸತ್ತಿನ ಚಳಿಗಾಲ ಅಧಿವೇಶನ ಮೊದಲ ದಿನವೇ ಲೋಕ ಸಭೆ ಗದ್ದಲದಿಂದ ಕೂಡಿತು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಪ್ರತಿಪಕ್ಷಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ, ಸದನದ ಕಾರ್ಯ ಕಲಾಪ ಮಧ್ಯಾಹ್ನ 2 ಗಂಟೆವರೆಗೆ ಮ
Session


ನವದೆಹಲಿ, 01 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಸಂಸತ್ತಿನ ಚಳಿಗಾಲ ಅಧಿವೇಶನ ಮೊದಲ ದಿನವೇ ಲೋಕ ಸಭೆ ಗದ್ದಲದಿಂದ ಕೂಡಿತು. ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ವಿರುದ್ಧ ಪ್ರತಿಪಕ್ಷಗಳು ತೀವ್ರವಾಗಿ ಆಕ್ರೋಶ ವ್ಯಕ್ತಪಡಿಸಿದ ಪರಿಣಾಮ, ಸದನದ ಕಾರ್ಯ ಕಲಾಪ ಮಧ್ಯಾಹ್ನ 2 ಗಂಟೆವರೆಗೆ ಮುಂದೂಡಲಾಗಿದೆ.

ಅಧಿವೇಶನ ಆರಂಭದಲ್ಲಿ ಲೋಕ ಸಭೆ ಮಾಜಿ ಸಂಸದರಾದ ಕರ್ನಲ್ ಸೋನಾ ರಾಮ್ ಚೌಧರಿ, ವಿಜಯ್ ಕುಮಾರ್ ಮಲ್ಹೋತ್ರಾ, ರವಿ ನಾಯಕ್, ಧರ್ಮೇಂದ್ರ ಮತ್ತು ಶ್ರೀಪ್ರಕಾಶ್ ಜೈಸ್ವಾಲ್ ಅವರ ನಿಧನಕ್ಕೆ ಶ್ರದ್ದಾಂಜಲಿ ಸಲ್ಲಿಸಿ ಎರಡು ನಿಮಿಷ ಮೌನಾಚರಣೆ ನಡೆಸಲಾಯಿತು. ನಂತರ ಪ್ರತಿಪಕ್ಷ ಸಂಸದರು ಸ್ಪೀಕರ್ ವೇದಿಕೆಯತ್ತ ಧಾವಿಸಿ, ಎಸ್‌ಐಆರ್ ರದ್ದತಿ ಕುರಿತಾಗಿ ಘೋಷಣೆ ಕೂಗಿ ಗದ್ದಲ ಎಬ್ಬಿಸಿದರು.

ಲೋಕ ಸಭೆ ಸ್ಪೀಕರ್ ಓಂ ಬಿರ್ಲಾ, “ಸದನ ಚರ್ಚೆ-ಸಂವಾದ ಕಣವಾಗಬೇಕು” ಎಂದು ಮನವಿ ಮಾಡಿದರೂ ಪ್ರತಿಪಕ್ಷ ಗದ್ದಲ ಶಮನವಾಗಲಿಲ್ಲ. ಪರಿಸ್ಥಿತಿ ನಿಯಂತ್ರಣಕ್ಕೆ ಬಾರದ ಹಿನ್ನೆಲೆ, ಮೊದಲಿಗೆ ಸಭೆಯನ್ನು ಮಧ್ಯಾಹ್ನ 12 ಗಂಟೆಯವರೆಗೆ ಮುಂದೂಡಲಾಯಿತು. ಬಳಿಕ ಪುನರಾರಂಭವಾದ ಕೂಡಲೇ ಗೊಂದಲ ಮುಂದುವರಿದ ಕಾರಣ, ಮತ್ತೆ ಸಭೆಯನ್ನು ಮಧ್ಯಾಹ್ನ 2 ಗಂಟೆಯವರೆಗೆ ಮುಂದೂಡಲಾಗಿದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande