
ರಾಯಚೂರು, 1 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ಗ್ಲಾಸ್ ಶೀಟ್‍ಗಳನ್ನು ತುಂಬಿಕೊಂಡು ಸಾಗುತ್ತಿದ್ದ ಲಾರಿಗೆ ಅಡ್ಡವಾಗಿ ಬಂದಿದ್ದ ಬೈಕ್ ಸವಾರನ ಪ್ರಾಣ ಉಳಿಸಲು ಯತ್ನಿಸಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಮೇಲೆ ಅಡ್ಡವಾಗಿ ಪಲ್ಟಿಯಾದ ಕಾರಣ ಗಾಜಿನ ತುಂಡುಗಳು ರಸ್ತೆಯಲ್ಲಿ ಚಲ್ಲಾಪಿಲ್ಲಿಯಾಗಿ ಚದುರಿದ ಘಟನೆ ಕಲ್ಮಾದ ಬಳಿ ಸೋಮವಾರ ನಡೆದಿದೆ. ಈ ಘಟನೆಯಲ್ಲಿ ಬೈಕ್ ಸವಾರರಿಗೆ ಗಾಯಗಳಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹೊಸೂರು ಗ್ರಾಮದ ಅಯ್ಯಣ್ಣ ಮತ್ತು ಅಮರೇಶ್ ಬೈಕ್‍ನಲ್ಲಿ ಕಲ್ಮಲಾ ಗ್ರಾಮದ ರಸ್ತೆಯಲ್ಲಿ ಸಾಗುತ್ತಿದ್ದಾಗ ಎದುರುಗಡೆ ಬಂದ ಗ್ಲಾಸ್ ಶೀಟುಗಳನ್ನು ತುಂಬಿಕೊಂಡಿದ್ದ ಲಾರಿ ಅವರಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಬ್ರೇಕ್ ಹಾಕಿದಾಗ ಈ ಘಠನೆ ನಡೆದಿದೆ.
ಗ್ಲಾಸ್ ಶೀಟ್‍ಗಳು ಚದುರಿದ ಕಾರಣ ಗ್ಲಾಸ್‍ನ ಚೂರುಗಳು ರಸ್ತೆ ತುಂಬಾ ಚದುರಿ ಬಿದ್ದ ಕಾರಣ ಈ ರಸ್ತೆ ಸಂಚಾರ ಕೆಲ ಹೊತ್ತು ಸ್ಥಗಿತಗೊಂಡಿತ್ತು. ಪೊಲೀಸರು ಸ್ಥಳಕ್ಕೆ ಆಗಮಿಸಿ, ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
ಕ್ರೇನ್ ಸಹಾಯದಿಂದ ಲಾರಿಯನ್ನು ರಸ್ತೆ ಬದಿಗೆ ತಳ್ಳಲಾಯಿತು. ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಗ್ಲಾಸ್ ತುಂಡುಗಳನ್ನು ತೆಗೆಯಲು ಸಾರ್ವಜನಿಕರು ಮತ್ತು ಸ್ಥಳೀಯರು ಸಹ ಸಹಕಾರ ನೀಡಿದರು.
ರಾಯಚೂರು ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆದಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್