ಕೊಪ್ಪಳ ಕಾರ್ಖಾನೆ ವಿರೊಧಿ ಹೋರಾಟದಲ್ಲಿ ಕ್ರಿಸ್ಮಸ್
ಕೊಪ್ಪಳ, 01 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ನಗರಸಭೆ ಮುಂದೆ ನಡೆಯುತ್ತಿರುವ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದಸುಮಿ, ಎಕ್ಸಿಂಡಿಯಾ ಇತರೆ ಯಾವುದೇ ಕಾರ್ಖಾನೆಗಳ ವಿಸ್ತ
ಕೊಪ್ಪಳ : ಕಾರ್ಖಾನೆ ವಿರೊಧಿ ಹೋರಾಟದಲ್ಲಿ ಕ್ರಿಸ್ಮಸ್


ಕೊಪ್ಪಳ, 01 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆಯ ಜಂಟಿ ಕ್ರಿಯಾ ವೇದಿಕೆಯಿಂದ ನಗರಸಭೆ ಮುಂದೆ ನಡೆಯುತ್ತಿರುವ ಬಲ್ಡೋಟಾ (ಬಿಎಸ್ಪಿಎಲ್), ಕಿರ್ಲೋಸ್ಕರ್, ಕಲ್ಯಾಣಿ ಸ್ಟೀಲ್, ಮುಕುಂದಸುಮಿ, ಎಕ್ಸಿಂಡಿಯಾ ಇತರೆ ಯಾವುದೇ ಕಾರ್ಖಾನೆಗಳ ವಿಸ್ತರಣೆ ವಿರೋಧಿ 32ನೇ ದಿನದ ಚಾರಣ ಬಳಗ, ಮಕ್ಕಳ ಹಕ್ಕುಗಳ ಜಾಗೃತಿ ಸಮಿತಿ ಸರದಿಯಲ್ಲಿ ಹಾಡು ಹೇಳಿ, ಪರಿಸರ ಕವನ ವಾಚನ ಮಾಡಿ ಬೆಂಬಲಿಸಿದರು.

ಕ್ರೈಸ್ತ ಸಮುದಾಯದ ಫಾದರ್ ಡಿ. ಆರ್. ಪೀಟರ್ ಅವರು ಧರಣಿ ಸ್ಥಳದಲ್ಲಿ ಸಿಹಿ ಹಂಚಿಕೊಂಡು ಈ ಪ್ರಕೃತಿಯನ್ನು ದೇವರು ಸೃಷ್ಟಿಸಿದ್ದಾನೆ. ಇದನ್ನು ಕೆಡಿಸಲಿಕ್ಕೆ ಯಾರಿಗೂ ಹಕ್ಕಿಲ್ಲ. ಜಗತ್ತಿಗೆ ಲೇಸನ್ನೇ ಬಯಸಿದ ಕ್ರಿಸ್ತನು ಕ್ಷಮಾ ಗುಣದ ಮೇರುವಾಗಿದ್ದರು. ಪಾಪಿಗಳನ್ನು, ತಪ್ಪು ಮಾಡಿದವರನ್ನು ಕ್ಷಮಿಸಬೇಕೆಂದು ತನ್ನ ಅನುಯಾಯಿಗಳಿಗೆ ಹೇಳಿಕೊಟ್ಟಿದ್ದಾರೆ ಎಂದು ಹೇಳಿದರು.

ಕೊಪ್ಪಳ ಚಾರಣ ಬಳಗದ ಸಿ.ಬಿ. ಪಾಟೀಲ್ ಮಾತನಾಡಿ ದುರಿತಕಾಲದಲ್ಲಿ, ಸಂಕಷ್ಟದ ದಿನಗಳಲ್ಲಿ ಈ ಕಾರ್ಖಾನೆಗಳು ಜನರಿಗೆ ಕೆಲಸವನ್ನು ಕೊಟ್ಟಿಲ್ಲ. ತಮ್ಮ ಲಾಭಕ್ಕಾಗಿ ಮಾತ್ರ ಅವು ಏನೆಲ್ಲ ಹಾಳು ಮಾಡಲು ಹಿಂದೆ ಮುಂದೆ ನೋಡುವುದಿಲ್ಲ.. ಇಲ್ಲಿನ ಅಹ್ಲಾದಕರ ಹವಾಗುಣವನ್ನು ಹಾಳು ಮಾಡಿವೆ ಎಂದರು.

ಧರಣಿಯಲ್ಲಿ ಅಲ್ಲಮಪ್ರಭು ಬೆಟ್ಟದೂರು, ಮಲ್ಲಿಕಾರ್ಜುನ ಗೋನಾಳÀ (ಕೆ.ಬಿ.ಗೋನಾಳ), ಮಂಜುನಾಥ ಜಿ. ಗೊಂಡಬಾಳ, ಭುಜಂಗ ಸ್ವಾಮಿ, ಮೈಲಾರಪ್ಪ ಪೂಜಾರ, ಕಾಶಪ್ಪ ಚಲವಾದಿ, ಗವಿಸಿದ್ದಪ್ಪ ಹಲಿಗಿ, ನೇತ್ರಾವತಿ, ವೃಕ್ಷಾನ, ಎಸ್.ಬಿ.ರಾಜೂರ, ಡಿ.ಎಂ.ಬಡಿಗೇರ, ಸೌಮ್ಯ ನಾಲ್ವಾಡ, ಶ್ವೇತಾ ಅಕ್ಕಿ, ರವಿ ಕಾಂತನವರ, ಬಸವರಾಜ ಶೀಲವಂತರ್, ಎಸ್‍ಎ. ಗಫಾರ್, ಡಾ. ವಿಜಯ್ ಸುಂಕದ್, ಗ್ರಾಮ ಪಂಚಾಯತ್ ಅಧ್ಯಕ್ಷ ಹನುಮಂತಪ್ಪ ಉಪ್ಪಾರ್, ಎಫ್.ಎಸ್. ಜಾಲಿಹಾಳ್, ಮಖಬೂಲ್ ರಾಯಚೂರು, ರತ್ನಮ್ಮ ದೊಡ್ಡಮನಿ, ಭೀಮಪ್ಪ ಯಲಬುರ್ಗಾ, ಗ್ರಾಮ ಪಂಚಾಯತ್ ಸದಸ್ಯ ಗಾಳೆಪ್ಪ ಹೂವಿನಾಳ ಅನೇಕರು ಇದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande