ಮಧ್ಯ ಪ್ರದೇಶದಲ್ಲಿ ಇಂದಿನಿಂದ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ
ಭೋಪಾಲ್, 01 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಗೀತಾ ಜಯಂತಿಯ ವಿಶೇಷ ಸಂದರ್ಭದ ಅಂಗವಾಗಿ ಮಧ್ಯ ಪ್ರದೇಶದಲ್ಲಿ ಇಂದಿನಿಂದ ಮೂರು ದಿನಗಳ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ. ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಉಜ್ಜಯಿನಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ. ರಾಜ್
Gotta jayanti


ಭೋಪಾಲ್, 01 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಗೀತಾ ಜಯಂತಿಯ ವಿಶೇಷ ಸಂದರ್ಭದ ಅಂಗವಾಗಿ ಮಧ್ಯ ಪ್ರದೇಶದಲ್ಲಿ ಇಂದಿನಿಂದ ಮೂರು ದಿನಗಳ ಅಂತಾರಾಷ್ಟ್ರೀಯ ಗೀತಾ ಮಹೋತ್ಸವ ಅದ್ಧೂರಿಯಾಗಿ ಆರಂಭಗೊಳ್ಳುತ್ತಿದೆ.

ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಉಜ್ಜಯಿನಿಯಲ್ಲಿ ಉತ್ಸವಕ್ಕೆ ಚಾಲನೆ ನೀಡಲಿದ್ದಾರೆ.

ರಾಜ್ಯದ 313 ಅಭಿವೃದ್ಧಿ ಬ್ಲಾಕ್‌ಗಳು, 55 ಜಿಲ್ಲಾ ಕೇಂದ್ರಗಳು ಹಾಗೂ 10 ವಿಭಾಗಗಳಲ್ಲಿ ಆಚಾರ್ಯರ ಮಾರ್ಗದರ್ಶನದಲ್ಲಿ 3 ಲಕ್ಷಕ್ಕೂ ಹೆಚ್ಚು ಭಕ್ತರು ಶ್ರೀಮದ್ ಭಗವದ್ಗೀತೆಯ 15ನೇ ಅಧ್ಯಾಯವನ್ನು ಸಾಮೂಹಿಕ ಪಠಣ ಮಾಡಲಿದ್ದಾರೆ.

ಗೀತಾ ಜಯಂತಿ ಅಂಗವಾಗಿ ಉಜ್ಜಯಿನಿ, ಭೋಪಾಲ್ ಮತ್ತು ಇಂದೋರ್‌ನಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು, ಪಠಣ, ನೃತ್ಯನಾಟಕ ಮತ್ತು ವಿಶೇಷ ಪ್ರದರ್ಶನಗಳನ್ನು ಆಯೋಜಿಸಲಾಗಿದೆ.

ಇಂದೋರ್‌ನ ರಾಜವಾಡದ ಗೋಪಾಲ್ ಮಂದಿರದಲ್ಲಿ ಮಧ್ಯಪ್ರದೇಶದ ಮೊದಲ ಗೀತಾ ಭವನವನ್ನು ಹರಿಯಾಣ ಮುಖ್ಯಮಂತ್ರಿ ನಯಾಬ್ ಸಿಂಗ್ ಸೈನಿ ಮತ್ತು ಮಧ್ಯಪ್ರದೇಶ ಮುಖ್ಯಮಂತ್ರಿ ಡಾ. ಮೋಹನ್ ಯಾದವ್ ಉದ್ಘಾಟಿಸಲಿದ್ದಾರೆ.

ಈ ಸಂದರ್ಭದಲ್ಲಿ 2025ರ ನವೆಂಬರ್ 16–28ರ ನಡುವೆ ನಡೆದ ಶ್ರೀಮದ್ ಭಗವದ್ಗೀತಾ ಜ್ಞಾನ ಸ್ಪರ್ಧೆಯ ವಿಜೇತರ ಹೆಸರನ್ನು ಘೋಷಿಸಲಿದ್ದು, ಪ್ರಶಸ್ತಿಗಳನ್ನು ಗಣರಾಜ್ಯೋತ್ಸವ ದಿನ (ಜನವರಿ 26, 2026) ವಿತರಿಸಲಾಗುತ್ತದೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande