ರಾಜಕೀಯ ಸೇಡಿಗಾಗಿ ಗಾಂಧಿ ಕುಟುಂಬ ಗುರಿ : ಡಿ.ಕೆ. ಶಿವಕುಮಾರ್
ಬೆಂಗಳೂರು, 01 ಡಿಸೆಂಬರ್ (ಹಿ.ಸ.) : ಆ್ಯಂಕರ್ : ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ರಾಜಕೀಯ ಸೇಡಿನ ಸಾಧನವಾಗಿ ಬಳಸಲಾಗುತ್ತಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂ
Dks


ಬೆಂಗಳೂರು, 01 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ನ್ಯಾಷನಲ್ ಹೆರಾಲ್ಡ್ ಪ್ರಕರಣವನ್ನು ರಾಜಕೀಯ ಸೇಡಿನ ಸಾಧನವಾಗಿ ಬಳಸಲಾಗುತ್ತಿದೆ ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆರೋಪ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ನಡೆಯುತ್ತಿರುವ ಕಾರ್ಯಾಚರಣೆ “ಚಿತ್ರಹಿಂಸೆಯ ಪರಾಕಾಷ್ಠೆ” ಎಂದರು.

ನ್ಯಾಷನಲ್ ಹೆರಾಲ್ಡ್ ಸೋನಿಯಾ ಗಾಂಧಿ ಅಥವಾ ರಾಹುಲ್ ಗಾಂಧಿಯವರ ವೈಯಕ್ತಿಕ ಆಸ್ತಿ ಅಲ್ಲ ಎಂದು ಸ್ಪಷ್ಟಪಡಿಸಿದ ಅವರು, ಅವರು ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಕಾರಣಕ್ಕೆ ಮಾತ್ರ ಷೇರುದಾರರಾಗಿದ್ದರು. ನಾವು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಆಗಿ ಅನೇಕ ಮಂಡಳಿಗಳ ಅಧ್ಯಕ್ಷರಾಗಿ ಕೆಲಸ ಮಾಡುತ್ತೇವೆ. ಅಧ್ಯಕ್ಷರಾಗಿ ಇದ್ದವರಿಗೆ ಷೇರುಗಳು ಇರುವುದು ಸಾಮಾನ್ಯ. ನಂತರ ಅವರು ಹುದ್ದೆ ಬಿಟ್ಟಾಗ ಅವುಗಳನ್ನು ವರ್ಗಾಯಿಸಲಾಗುತ್ತದೆ. ಕಾಂಗ್ರೆಸ್ ನಾಯಕರೇ ನ್ಯಾಷನಲ್ ಹೆರಾಲ್ಡ್ ಅಧ್ಯಕ್ಷರಾಗಿರುವುದು ದಶಕಗಳಿಂದಲೂ ಇರುವ ಪರಂಪರೆ,” ಎಂದು ಹೇಳಿದರು.

ಯಂಗ್ ಇಂಡಿಯಾ ಹಾಗೂ ನ್ಯಾಷನಲ್ ಹೆರಾಲ್ಡ್ ಎರಡೂ ಪಕ್ಷದ ಆಸ್ತಿಗಳು, ಖಾಸಗಿ ಆಸ್ತಿಗಳು ಅಲ್ಲ ಎಂಬುದನ್ನು ಪಕ್ಷವು ಈಗಾಗಲೇ ದಾಖಲೆಗಳಲ್ಲಿ ತಿಳಿಸಿರುವುದನ್ನು ಶಿವಕುಮಾರ ನೆನಪಿಸಿದರು.

ತನಿಖಾ ಸಂಸ್ಥೆಗಳ ಮೂಲಕ ಗಾಂಧಿ ಕುಟುಂಬದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ ಅವರು, ರಾಹುಲ್ ಗಾಂಧಿ ಅವರನ್ನು ಜೈಲಿಗೆ ಹಾಕಿದರೂ ತೊಂದರೆಯಾಗುವುದಿಲ್ಲ. ಆದರೆ ಇಂತಹ ಸೇಡಿನ ರಾಜಕೀಯ ಪ್ರಜಾಪ್ರಭುತ್ವಕ್ಕೆ ಒಳ್ಳೆಯದಲ್ಲ. ರಾಜಕೀಯ ನೇರವಾಗಿರಬೇಕು. ಚುನಾವಣೆಯಲ್ಲಿ ನೇರಾ ನೇರ ಹೋರಾಡಿ ಗೆಲ್ಲಬೇಕು ತನಿಖಾ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಮೂಲಕ ಅಲ್ಲ ಎಂದು ಶಿವಕುಮಾರ ಹೇಳಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande