
ಶ್ರೀನಗರ, 01 ಡಿಸೆಂಬರ್ (ಹಿ.ಸ.) :
ಆ್ಯಂಕರ್ : ದೆಹಲಿ ಕೆಂಪುಕೋಟೆ ಸಮೀಪ ನವೆಂಬರ್ 10ರಂದು ನಡೆದ ಭೀಕರ ಕಾರ್ ಬಾಂಬ್ ಸ್ಫೋಟದ ತನಿಖೆಗೆ ವೇಗ ನೀಡಿರುವ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ), ಕಾಶ್ಮೀರ ಕಣಿವೆಯಾದ್ಯಂತ ಸುಮಾರು 10 ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿದೆ. ಸ್ಫೋಟದಲ್ಲಿ 15 ಮಂದಿ ಸಾವನ್ನಪ್ಪಿ, ಅನೇಕರು ಗಾಯಗೊಂಡಿದ್ದ ಪ್ರಕರಣದಲ್ಲಿ ಈಗಾಗಲೇ ಆರು ಮಂದಿ ಬಂಧನಕ್ಕೊಳಗಾಗಿದ್ದಾರೆ.
ಎನ್‌ಐಎ ತಂಡಗಳು ಮೌಲ್ವಿ ಇರ್ಫಾನ್ ಅಹ್ಮದ್ ವಾಗೆ, ಡಾ. ಅದೀಲ್, ಡಾ. ಮುಜಮ್ಮಿಲ್, ಅಮೀರ್ ರಶೀದ್ ಸೇರಿದಂತೆ ಹಲವರ ಮನೆಗಳ ಮೇಲೆ ದಾಳಿ ನಡೆಸಿದ್ದು, ಶೋಪಿಯಾನ್‌ನ ನಾಡಿಗಮ್, ಕೊಯಿಲ್, ಚಂದಗಮ್, ಮಲಂಗ್‌ಪೋರಾ ಹಾಗೂ ಪುಲ್ವಾಮಾ ಜಿಲ್ಲೆಯ ಸಂಬುರಾ ಗ್ರಾಮಗಳಲ್ಲಿ ಶೋಧ ಕಾರ್ಯ ಮುಂದುವರೆಸಿದೆ ಎಂದು ಮೂಲಗಳು ತಿಳಿಸಿವೆ.
ಅಧಿಕಾರಿಗಳ ಪ್ರಕಾರ, ತಂಡಗಳು “ವೈಟ್-ಕಾಲರ್ ಟೆರೆರ್ ಮಾಡ್ಯೂಲ್” ಹಾಗೂ ದೆಹಲಿ ಸ್ಫೋಟದ ನಡುವೆ ಇರುವ ಸಾಧ್ಯಕೊಂಡಿಗಳನ್ನು ಪತ್ತೆಹಚ್ಚಲು ಸಂಬಂಧಿಸಿದ ಡಿಜಿಟಲ್ ಪುರಾವೆಗಳು, ಸಂವಹನ ದಾಖಲೆಗಳು, ಹಣಕಾಸು ವ್ಯವಹಾರಗಳು ಹಾಗೂ ಸಂಪರ್ಕ ಜಾಲಗಳ ಮೇಲೆ ಕೇಂದ್ರೀಕರಿಸಿವೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa