ಮ್ಯಾಗ್ನೆಟ್‍ನಿಂದ ಬಳ್ಳಾರಿ ಗುಡಾರನಗರದ ಶಾಲೆ ಕೈಬಿಡಿ : ವಿದ್ಯಾರ್ಥಿ ಸಂಘಟನೆ
ಬಳ್ಳಾರಿ, 01 ಡಿಸೆಂಬರ್ (ಹಿ.ಸ.) : ಆ್ಯಂಕರ್ : ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ 40,000 ಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ ಗುಡಾರನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೈಬಿಡಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್
ಮ್ಯಾಗ್ನೆಟ್‍ನಿಂದ ಬಳ್ಳಾರಿಯ ಗುಡಾರನಗರದ ಶಾಲೆಯನ್ನು  ಕೈಬಿಡಿ : ವಿದ್ಯಾರ್ಥಿ ಸಂಘಟನೆ


ಮ್ಯಾಗ್ನೆಟ್‍ನಿಂದ ಬಳ್ಳಾರಿಯ ಗುಡಾರನಗರದ ಶಾಲೆಯನ್ನು  ಕೈಬಿಡಿ : ವಿದ್ಯಾರ್ಥಿ ಸಂಘಟನೆ


ಬಳ್ಳಾರಿ, 01 ಡಿಸೆಂಬರ್ (ಹಿ.ಸ.) :

ಆ್ಯಂಕರ್ : ಕೆಪಿಎಸ್ ಮ್ಯಾಗ್ನೆಟ್ ಶಾಲೆ ಹೆಸರಿನಲ್ಲಿ 40,000 ಕ್ಕೂ ಸರ್ಕಾರಿ ಶಾಲೆಗಳನ್ನು ಮುಚ್ಚಲು ಮುಂದಾಗಿರುವ ಕರ್ನಾಟಕ ರಾಜ್ಯ ಸರ್ಕಾರದ ಪ್ರಸ್ತಾವನೆಯಲ್ಲಿ ಗುಡಾರನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಕೈಬಿಡಲು ಆಗ್ರಹಿಸಿ ಆಲ್ ಇಂಡಿಯಾ ಡೆಮಾಕ್ರೆಟಿಕ್ ಸ್ಟೂಡೆಂಟ್ ಆರ್ಗನೈಜೇಷನ್‍ನ ಜಿಲ್ಲಾ ಘಟಕ ಸರ್ಕಾರಕ್ಕೆ ಮನವಿ ಸಲ್ಲಿಸಿದೆ.

ವಿದ್ಯಾರ್ಥಿಗಳು ಮತ್ತು ಪೋಷಕರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯ ನೇತೃತ್ವವಹಿಸಿದ್ದ ಜಿಲ್ಲಾ ಅಧ್ಯಕ್ಷ ಕೆ. ಈರಣ್ಣ ಅವರು, ಕೆಪಿಎಸ್ ಮ್ಯಾಗ್ನೆಟ್ ಶಾಲೆಯನ್ನು ಶ್ರೀಧರಗಡ್ಡೆ ಗ್ರಾಮಕ್ಕೆ ಕಳುಹಿಸಲು ಗುಡಾರ ನಗರದ ಜನರಿಗೆ ಸಮ್ಮತಿ ಇರುವುದಿಲ್ಲ. ಗುಡಾರ ನಗರದಲ್ಲಿ ವಾಸಿಸುವ ಜನರೆಲ್ಲಾ ಅಲೆಮಾರಿಗಳು. ನಿತ್ಯ ಬೆಳಿಗ್ಗೆ 6 ಗಂಟೆಗೆ ಮನೆ ಬಿಟ್ಟರೆ, ಸಂಜೆ 6 ಗಂಟೆಯ ನಂತರ ಮನೆಗೆ ಹಿಂದಿರುಗುತ್ತಾರೆ. ಕಾರಣ ಇಲ್ಲಿ ಶಾಲೆಯನ್ನು ಉಳಿಸಬೇಕು ಎಂದು ಆಗ್ರಹಿಸಿದರು.

ಗುಡಾರ ನಗರದ ಕಿರಿಯ ಪ್ರಾಥಮಿಕ ಶಾಲೆಯನ್ನು ಶ್ರೀಧರಗಡ್ಡೆಯ ಸರ್ಕಾರಿ ಶಾಲೆಗೆ ಸೇರಿಸಿದಲ್ಲಿ ಇಲ್ಲಿಯ ವಿದ್ಯಾರ್ಥಿಗಳು ಕಿಲೋಮೀಟರ್ ದೂರದ ಸರ್ಕಾರಿ ಶಾಲೆಗೆ ಹೋಗಿ ಬರುವುದು ಕಷ್ಟವಾಗುತ್ತದೆ. ಅಲ್ಲದೇ, ಅಲೆಮಾರಿ ಕುಟುಂಬಗಳಿಗೆ ತೊಂದರೆ ಆಗಲಿದೆ. ಕಾರಣ ಗುಡಾರನಗರದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ಮ್ಯಾಗ್ನೆಟ್ ಪ್ರಸ್ತಾವನೆಯಿಂದ ಕೈಬಿಡಬೇಕು ಎಂದು ಅವರು ಕೋರಿದರು.

ಎಐಡಿಎಸ್‍ಓ ಸದಸ್ಯ ತಿಪ್ಪೇಸ್ವಾಮಿ ಅವರು ಪ್ರತಿಭಟನೆ ಅಧ್ಯಕ್ಷತೆ ವಹಿಸಿದ್ದರು. ಎಐಡಿಎಸ್‍ಓ ಸದಸ್ಯರಾದ ಕಾಂತೇಶ್ ಮತ್ತು ಗುಡಾರನಗರದ ನಿವಾಸಿಗಳಾದ ರಾಮು, ಬಾಬು, ಗಾಳೆಪ್ಪ ಕಲ್ಯಾಣ್ ಕುಮಾರ್, ಮಂದಾಕಿನಿ, ಲಲಿತಾ ಬಾಯಿ, ಮಾರೆಕ್ಕ, ಜ್ಯೋತಿ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande