ವಂದೇ ಭಾರತ್ ರೈಲು ; ಭಾರತೀಯರಿಂದ, ಭಾರತೀಯರಿಗಾಗಿ : ಪ್ರಧಾನಿ ಮೋದಿ
ವಾರಣಾಸಿ, 08 ನವೆಂಬರ್ (ಹಿ.ಸ.) : ಆ್ಯಂಕರ್ : ವಂದೇ ಭಾರತ್ ರೈಲುಗಳು ಭಾರತೀಯರ ಕೌಶಲ್ಯ, ಶ್ರಮ ಮತ್ತು ಆತ್ಮಾಭಿಮಾನಗಳ ಸಂಕೇತ. ಅವುಗಳನ್ನು ಭಾರತೀಯರು, ಭಾರತೀಯರಿಗಾಗಿ ನಿರ್ಮಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ವಾರಣಾಸಿಯ ಬನಾರಸ್ ರೈಲು ನಿಲ್ದಾಣದಲ್ಲಿ ನಾಲ್ಕು ಹೊಸ ವಂದೇ ಭಾರತ್
Vande bharat


ವಾರಣಾಸಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ವಂದೇ ಭಾರತ್ ರೈಲುಗಳು ಭಾರತೀಯರ ಕೌಶಲ್ಯ, ಶ್ರಮ ಮತ್ತು ಆತ್ಮಾಭಿಮಾನಗಳ ಸಂಕೇತ. ಅವುಗಳನ್ನು ಭಾರತೀಯರು, ಭಾರತೀಯರಿಗಾಗಿ ನಿರ್ಮಿಸಿದ್ದಾರೆ” ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ವಾರಣಾಸಿಯ ಬನಾರಸ್ ರೈಲು ನಿಲ್ದಾಣದಲ್ಲಿ ನಾಲ್ಕು ಹೊಸ ವಂದೇ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿದ ನಂತರ ಅವರು ಮಾತನಾಡಿದರು. “ಪ್ರಪಂಚದಾದ್ಯಂತ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆರ್ಥಿಕ ಪ್ರಗತಿ ಪರಸ್ಪರ ಅವಿಭಾಜ್ಯವಾಗಿವೆ. ಭಾರತವೂ ಇದೇ ಹಾದಿಯಲ್ಲಿ ವೇಗವಾಗಿ ಸಾಗುತ್ತಿದೆ,” ಎಂದು ಅವರು ಒತ್ತಿಹೇಳಿದರು.

ವಂದೇ ಭಾರತ್, ನಮೋ ಭಾರತ್ ಮತ್ತು ಅಮೃತ್ ಭಾರತ್ ರೈಲುಗಳು ಮುಂದಿನ ಪೀಳಿಗೆಯ ಭಾರತೀಯ ರೈಲ್ವೆಗೆ ದೃಢವಾದ ಅಡಿಪಾಯ ಹಾಕುತ್ತಿವೆ. ಇದು ಭಾರತೀಯ ರೈಲ್ವೆಯ ಪರಿವರ್ತನೆಯ ಅಭಿಯಾನವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು

ಅವರು ಭಾರತದಲ್ಲಿ ತೀರ್ಥಯಾತ್ರೆಗಳ ಪ್ರಾಚೀನ ಪರಂಪರೆಯನ್ನು ಉಲ್ಲೇಖಿಸಿ, “ಪ್ರಯಾಗ್‌ರಾಜ್, ಅಯೋಧ್ಯೆ, ಹರಿದ್ವಾರ, ಚಿತ್ರಕೂಟ, ಕುರುಕ್ಷೇತ್ರ ಮುಂತಾದ ಸ್ಥಳಗಳು ಭಾರತದ ಆತ್ಮದ ಸಂಕೇತಗಳು. ಈಗ ಇವುಗಳನ್ನು ವಂದೇ ಭಾರತ್ ರೈಲು ಜಾಲದೊಂದಿಗೆ ಸಂಪರ್ಕಿಸಲಾಗುತ್ತಿದೆ. ಇದು ಭಾರತದ ಸಂಸ್ಕೃತಿ, ನಂಬಿಕೆ ಮತ್ತು ಅಭಿವೃದ್ಧಿಯ ನಡುವೆ ಹೊಸ ಸೇತುವೆಯಾಗಿದೆ,” ಎಂದರು.

ಪ್ರಧಾನಿ ಮೋದಿ ವಂದೇ ಭಾರತ್ ರೈಲುಗಳ ಪ್ರಾದೇಶಿಕ ಅಭಿವೃದ್ಧಿಯಲ್ಲಿ ಪಾತ್ರದ ಕುರಿತು ಪ್ರಸ್ತಾಪಿಸಿ “ಉತ್ತಮ ಸಂಪರ್ಕದಿಂದ ನಗರಗಳ ಬೆಳವಣಿಗೆ ಸ್ವಾಭಾವಿಕವಾಗಿ ನಡೆಯುತ್ತದೆ. ಮೂಲಸೌಕರ್ಯ ಎಂದರೆ ಕೇವಲ ಸೇತುವೆ ಮತ್ತು ಹೆದ್ದಾರಿಗಳು ಅಲ್ಲ; ಅದು ಜನರ ಜೀವನಮಟ್ಟವನ್ನು ಸುಧಾರಿಸುವ ವ್ಯವಸ್ಥೆಯಾಗಿದೆ.”

ಅವರು ಕಾಶಿಯ ಆರೋಗ್ಯ ಕ್ಷೇತ್ರದ ಅಭಿವೃದ್ಧಿಯನ್ನೂ ಪ್ರಸ್ತಾಪಿಸಿ: “10–11 ವರ್ಷಗಳ ಹಿಂದೆ ಕಾಶಿಯಲ್ಲಿ ಗಂಭೀರ ಕಾಯಿಲೆಗಳ ಚಿಕಿತ್ಸೆಗೆ ಅವಕಾಶಗಳೇ ಕಡಿಮೆ ಇತ್ತು. ಇಂದು ಮಹಾಮನ ಕ್ಯಾನ್ಸರ್ ಆಸ್ಪತ್ರೆ ಸೇರಿದಂತೆ ಅನೇಕ ಆಧುನಿಕ ಆಸ್ಪತ್ರೆಗಳು ನಿರ್ಮಾಣಗೊಂಡಿವೆ. ಆಯುಷ್ಮಾನ್ ಭಾರತ್ ಮತ್ತು ಜನ ಔಷಧಿ ಯೋಜನೆಗಳ ಮೂಲಕ ಪೂರ್ವಾಂಚಲಿನ ಬಡ ಜನತೆಗೆ ದೊಡ್ಡ ಸಹಾಯವಾಗಿದೆ.”

ಈ ಸಂದರ್ಭದಲ್ಲಿ ಅವರು ವಾರಣಾಸಿಯಿಂದ ಖಜುರಾಹೊ ವಂದೇ ಭಾರತ್ ರೈಲುಗೆ ಹಸಿರು ನಿಶಾನೆ ತೋರಿದರು. ಜೊತೆಗೆ ಅವರು ಲಕ್ನೋ–ಸಹಾರನ್‌ಪುರ, ಫಿರೋಜ್‌ಪುರ–ದೆಹಲಿ, ಮತ್ತು ಎರ್ನಾಕುಲಂ–ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ವರ್ಚುವಲ್ ಮೂಲಕ ಉದ್ಘಾಟಿಸಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande