ವಂದೇ ಭಾರತ್ ರೈಲುಗಳಿಗೆ ಪ್ರಧಾನಿ ಮೋದಿ ಹಸಿರು ನಿಶಾನೆ
ತೋ ಡ ರು
Green flag


ವಾರಣಾಸಿ, 08 ನವೆಂಬರ್ (ಹಿ.ಸ.) :

ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ನಾಲ್ಕು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು. ಇವುಗಳಲ್ಲಿ ಬನಾರಸ್–ಖಜುರಾಹೊ ರೈಲು ವಾರಣಾಸಿಗೆ ಸೇರಿದ ಎಂಟನೇ ವಂದೇ ಭಾರತ್ ರೈಲು ಆಗಿದೆ.

ಹೊಸ ರೈಲುಗಳು ಬನಾರಸ್–ಖಜುರಾಹೊ, ಲಕ್ನೋ–ಸಹಾರನ್‌ಪುರ, ಫಿರೋಜ್‌ಪುರ–ದೆಹಲಿ ಮತ್ತು ಎರ್ನಾಕುಲಂ–ಬೆಂಗಳೂರು ಮಾರ್ಗಗಳಲ್ಲಿ ಸಂಚರಿಸಲಿವೆ. ಈ ರೈಲುಗಳು ಪ್ರಯಾಣದ ಸಮಯ ಕಡಿಮೆಮಾಡಿ ಪ್ರವಾಸೋದ್ಯಮ ಮತ್ತು ಪ್ರಾದೇಶಿಕ ಸಂಪರ್ಕತೆಯನ್ನು ಬಲಪಡಿಸಲಿವೆ.

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಜರಿದ್ದರು. ರೈಲು ಚಾಲನೆ ವೇಳೆ ಪ್ರಯಾಣಿಕರು “ಹರ ಹರ ಮಹಾದೇವ್” ಘೋಷಣೆಗಳಿಂದ ಉತ್ಸಾಹ ತೋರಿದರು.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande