
ನವದೆಹಲಿ, 08 ನವೆಂಬರ್ (ಹಿ.ಸ.) :
ಆ್ಯಂಕರ್ : ಬಿಹಾರ ವಿಧಾನ ಸಭಾ ಚುನಾವಣೆಯ ತೀವ್ರ ಪ್ರಚಾರ ಹಂತಕ್ಕೆ ಕಾಲಿಟ್ಟಿದ್ದು, ಇಂದು ಭಾರತೀಯ ಜನತಾ ಪಕ್ಷದ ಮೂವರು ಹಿರಿಯ ನಾಯಕರು — ಪ್ರಧಾನಿ ನರೇಂದ್ರ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ, ರಾಜ್ಯದಲ್ಲಿ ಚುನಾವಣಾ ಸಭೆಗಳನ್ನು ನಡೆಸಲಿದ್ದಾರೆ.
ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದು, ಈ ಕುರಿತು ವೇಳಾಪಟ್ಟಿಯನ್ನು ಬಿಜೆಪಿ ತನ್ನ ಅಧಿಕೃತ ಎಕ್ಸ್ ಖಾತೆಯಲ್ಲಿ ಪ್ರಕಟಿಸಿದೆ.
ಪ್ರಧಾನಿ ಮೋದಿ ಅವರು ಬೆಳಿಗ್ಗೆ 11 ಗಂಟೆಗೆ ಸೀತಾಮರ್ಹಿಯಲ್ಲಿ ಮತ್ತು ಮಧ್ಯಾಹ್ನ 1 ಗಂಟೆಗೆ ಬೆಟ್ಟಿಯಾದಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಅಮಿತ್ ಶಾ ಅವರು ಇಂದು ಮೂರು ಪ್ರದೇಶಗಳಲ್ಲಿ ಪ್ರಚಾರ ನಡೆಸಲಿದ್ದು, ಬೆಳಿಗ್ಗೆ 11:15 ಕ್ಕೆ ಪೂರ್ಣಿಯಾ, ಮಧ್ಯಾಹ್ನ 1:45 ಕ್ಕೆ ಕತಿಹಾರ್ ಮತ್ತು 2:15 ಕ್ಕೆ ಸುಪೌಲ್ ನಲ್ಲಿ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ರಾಜನಾಥ್ ಸಿಂಗ್ ಅವರು ಸಹ ರಾಜ್ಯದ ಮೂವರು ಕ್ಷೇತ್ರಗಳಲ್ಲಿ ಮತದಾರರನ್ನು ಉದ್ದೇಶಿಸಿ ಮಾತನಾಡಲಿದ್ದು, ಮಧ್ಯಾಹ್ನ 12:25 ಕ್ಕೆ ಕರಕಟ್ (ರೋಹ್ತಾಸ್), 1:45 ಕ್ಕೆ ದಿನಾರಾ (ರೋಹ್ತಾಸ್) ಮತ್ತು 3:05 ಕ್ಕೆ ರಾಮಗಢ (ಕೈಮೂರ್) ನಲ್ಲಿ ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa