ನ. 11 ರಂದು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ತರಬೇತಿ
ಕೊಪ್ಪಳ, 07 ನವೆಂಬರ್ (ಹಿ.ಸ.) : ಆ್ಯಂಕರ್ : ಜಿಲ್ಲಾಡಳಿತದ ವತಿಯಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016 ರ ಕುರಿತು ವಿವಿಧ ಭಾಗೀದಾರರಿಗೆ ನವೆಂಬರ್ 11 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಭಾಗೀದಾರರಿಗೆ ಒಂದು ದಿನದ ತರಬೇತಿ ಕಾರ್ಯ
ನ. 11 ರಂದು ಬಾಲ್ಯ ವಿವಾಹ ನಿಷೇಧ ಕಾಯ್ದೆ ಕುರಿತು ತರಬೇತಿ


ಕೊಪ್ಪಳ, 07 ನವೆಂಬರ್ (ಹಿ.ಸ.) :

ಆ್ಯಂಕರ್ : ಜಿಲ್ಲಾಡಳಿತದ ವತಿಯಿಂದ ಬಾಲ್ಯ ವಿವಾಹ ನಿಷೇಧ ಕಾಯ್ದೆ-2006 ಕರ್ನಾಟಕ ತಿದ್ದುಪಡಿ-2016 ರ ಕುರಿತು ವಿವಿಧ ಭಾಗೀದಾರರಿಗೆ ನವೆಂಬರ್ 11 ರಂದು ಬೆಳಿಗ್ಗೆ 10 ಗಂಟೆಗೆ ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಭಾಗೀದಾರರಿಗೆ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಡೆಕೋರೇಷನ್ ಮತ್ತು ಸಪ್ಲಾಯರ್ಸ್, ಮುದ್ರಕರು ಮತ್ತು ಪ್ರಿಂಟಿಂಗ್ ಪ್ರೆಸ್, ಧಾರ್ಮಿಕ ಮುಖಂಡರುಗಳು, ಫಂಕ್ಷನ್ ಹಾಲ್, ಶಾದಿ ಮಹಲ್, ವಿಡಿಯೋ, ಛಾಯಾಚಿತ್ರಗಾರರು, ಆಡುಗೆದಾರರು ಮತ್ತು ಕೇಟರಿಂಗ್ ಸಂಘ, ವಾದ್ಯ ವೃಂದದವರು, ಕಿರಾಣಿ ಅಂಗಡಿಗಳ ಮಾಲೀಕರುಗಳು ಮತ್ತು ಆಭರಣ ಮಾರಾಟಗಾರರು, ಅರ್ಚಕರು ಹಾಗೂ ಸಾಮೂಹಿಕ ವಿವಾಹ ಆಯೋಜಕರು, ಸರಕು ಮತ್ತು ಸೇವೆ ಒದಗಿಸುವ ಎಲ್ಲ ಭಾಗೀದಾರರು ತಮ್ಮ ಸಂಘದ ಸರ್ವ ಸದಸ್ಯರೊಂದಿಗೆ ತಪ್ಪದೇ ಕಡ್ಡಾಯವಾಗಿ ಹಾಜರಾಗಬೇಕು ಎಂದು ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಅವರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande