
ವಿಜಯಪುರ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರದ ಅರಕೇರಿಯ ಶ್ರೀ ಅಮೋಘಸಿದ್ದ ದೇವರ ಜಾತ್ರೆ ಹಾಗೂ ಗುಡ್ಡಾಪುರದ ಶ್ರೀ ದಾನಮ್ಮದೇವಿಯ ಜಾತ್ರೆಯ ನಿಮಿತ್ಯ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವಿಜಯಪುರ ವಿಭಾಗದಿಂದ ಯಾತ್ರಾರ್ಥಿಗಳಿಗೆ ಉತ್ತಮ ಸಾರಿಗೆ ಸೌಲಭ್ಯ ಕಲ್ಪಿಸಲು ವಿಶೇಷ ಸಾರಿಗೆಗಳ ಕಾರ್ಯಾಚರಣೆ ಮಾಡಲಾಗುವುದರಿಂದ ಸ್ಥಳೀಯ ಸಾರಿಗೆ ಕಾರ್ಯಾಚರಣೆ ಮಾಡಲಾಗುವುದೆಂದು ವಿಭಾಗೀಯ ನಿಯಂತ್ರಣಾಧಿಕಾರಿ ನಾರಾಯಣಪ್ಪ ಕುರುಬರ ಅವರು ತಿಳಿಸಿದ್ದಾರೆ.
ಪ್ರತಿವರ್ಷದಂತೆ ಈ ವರ್ಷವೂ ಕೂಡಾ ನ.15 ರಿಂದ 22ರವರೆಗೆ ಅರಕೇರಿಯ ಶ್ರೀ ಅಮೋಘಸಿದ್ದ ಹಾಗೂ ಗುಡ್ಡಾಪುರದ ಶ್ರೀ ದಾನಮ್ಮದೇವಿಯ ಜಾತ್ರೆಯ ಅಂಗವಾಗಿ ವಿಜಯಪುರ ವಿಭಾಗದ ವಿಜಯಪುರ, ಇಂಡಿ, ಸಿಂದಗಿ, ಮುದ್ದೇಬಿಹಾಳ, ತಾಳಿಕೋಟ ಹಾಗೂ ಬಸವಬನಬಾಗೇವಾಡಿ ಘಟಕಗಳಿಂದ ವಿಶೇಷ ಕಾರ್ಯಾಚರಣೆ ಮಾಡಲಾಗುವುದು.
ಸಾರಿಗೆ ಸೌಲಭ್ಯಕ್ಕಾಗಿ ವಿಜಯಪುರ 1 ಮೊ: 7760992263, ವಿಜಯಪುರ-2: ಮೊ: 7760992264, ವಿಜಯಪುರ-3: ಮೊ: 7760914008, ಇಂಡಿ ಮೊ: 7760992265, ಸಿಂದಗಿ ಮೊ: 7760992266, ಮುದ್ದೇಬಿಹಾಳ ಮೊ: 7760992267, ತಾಳಿಕೋಟೆ ಮೊ: 7760992268, ಬ.ಬಾಗೇವಾಡಿ ಮೊ: 7760992269, ಕೇಂದ್ರ ಬಸ್ ನಿಲ್ದಾಣ ವಿಜಯಪುರ ದೂ: 08352-251344, ಸಹಾಯಕ ಸಂಚಾರ ವ್ಯವಸ್ಥಾಪಕರು ಮೊ: 7760992258 ಸಂಪರ್ಕಿಸಬಹುದಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / jyothi deshpande