
ಕೊಪ್ಪಳ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಯಲಬುರ್ಗಾ ತಾಲ್ಲೂಕಿನ ವಣಗೇರಿ ಗ್ರಾಮದಲ್ಲಿರುವ ಮಾರುತಿ ದೇವಸ್ಥಾನದಲ್ಲಿ ನ.9 ಹಾಗೂ 10ರಂದು ಚಿದಂಬರೇಶ್ವರರ 267ನೇ ಜನ್ಮೋತ್ಸವ ಹಾಗೂ 73ನೇ ವರ್ಷದ ಶಿವಚಿದಂಬರ ಜಯಂತಿ ಕಾರ್ಯಕ್ರಮ ನಡೆಯಲಿದ್ದು, ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಚಿದಂಬರ ಸೇವಾ ಸಮಿತಿ ಪ್ರಮುಖರು ಮನವಿ ಮಾಡಿ ದ್ದಾರೆ.
ಸಮಿತಿ ಪ್ರಮುಖರು ‘9ರಂದು ಬೆಳಿಗ್ಗೆ 8 ಗಂಟೆಗೆ ಧರ್ಮ ಧ್ವಜಾರೋ ಹಣವನ್ನು ಕರ್ಕಿಹಳ್ಳಿಯ ವಿಶ್ವನಾಥ ದೀಕ್ಷಿತ್ ಅವರು ನೆರವೇರಿಸಲಿದ್ದು, ಉತ್ಸವ ಮೂರ್ತಿ, ವೇದ ಘೋಷ ದೊಂದಿಗೆ ದೇವಸ್ಥಾನಕ್ಕೆ ತರುವುದು, ದೇವತಾಸ್ಥಾಪನೆ, ಸೂಕ್ತ ಹವನ, ಸಂಜೆ 6 ಗಂಟೆಗೆ ಕೊಪ್ಪಳ ತಾಲ್ಲೂಕಿನ ಹಿರೇ ವಡ್ರಕಲ್ಲ ಗ್ರಾಮ ದ ಪ್ರಭಾಕರ ರಾವ್ ಪಟವಾರಿ, ಹಿಟ್ನಾಳ ಚಿದಂಬರ ಮೂರ್ತಿ ದಿಕ್ಷೀತ್, ಬೆಂಗಳೂರಿನ ಮಾತಾರ್ಂq Àರಾವ್ ದೇಶಪಾಂಡೆ ಜಾಲಿಹಾಳ ಹಾಗೂ ಇತರರಿಂದ ಸಂಗೀತ ಕಾರ್ಯ ಕ್ರಮ ನಡೆಯಲಿದೆ.
10ರಂದು ಬೆಳಿಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು ಮಧ್ಯಾಹ್ನ 12.15ಕ್ಕೆ ಚಿದಂಬರ ಸ್ವಾಮಿಯ ಜನ್ಮೋತ್ಸವ, ತೊಟ್ಟಿಲಸೇವೆ, ಸಂಜೆ ಗ್ರಾಮದಲ್ಲಿ ಉತ್ಸವ ಮೂರ್ತಿ ಮೆರವಣಿಗೆ, ಮಹಾ ಮಂಗಳಾರತಿ ನಡೆಯಲಿದೆ .
ವಣಗೇರಿ ಗ್ರಾಮಕ್ಕೆ ಬರುವ ವರು ಕೊಪ್ಪಳ ಹಾಗೂ ಕುಷ್ಟಗಿ ಯಿಂದ ಬೇವೂರು ಕ್ರಾಸ್ ತನಕ ಸರ್ಕಾರಿ ಬಸ್ ಹಾಗೂ ಖಾಸಗಿ ವಾಹನಗಳ ಸೌಲಭ್ಯಯಿವೆ. ಯಲಬುರ್ಗಾ, ಗಂಗಾವತಿ, ಕುಕನೂರಿನಿಂದ ನೇರಬಸ್ ಸೌಲಭ್ಯಗಳು ಇವೆ ಎಂದು ಸಮಿತಿ ತಿಳಿಸಿದೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್