
ವಿಜಯಪುರ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ವಿಜಯಪುರ ನಗರದ ಪ್ರತಿಷ್ಠಿತ ಬಿ.ಎಲ್.ಡಿ.ಇ ಸಂಸ್ಥೆಯ ಶ್ರೀ ಬಿ. ಎಂ. ಪಾಟೀಲ ಪಬ್ಲಿಕ್ ಶಾಲೆಯಲ್ಲಿ ವಿಜ್ಞಾನ, ಸಮಾಜ, ಗಣಿತ ಸೇರಿದಂತೆ ನಾನಾ ಭಾಷಾ ವಸ್ತು ಪ್ರದರ್ಶನ ನಡೆಯಿತು.
ಬಸವನ ಬಾಗೇವಾಡಿಯ ಸಿಡಿಪಿಓ ಶಿಲ್ಪಾ ಎಸ್. ಹಿರೇಮಠ ಮತ್ತು ಬಿ.ಎಲ್.ಡಿ.ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಎಂಜಿನಿಯರಿಂಗ್ ಕಾಲೇಜಿನ ಪ್ರಾಚಾರ್ಯ ಡಾ. ಪಿ. ಮಂಜುನಾಥ ಪಿ. ಕಾರ್ಯಕ್ರಮ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸ್ಥೆಯ ಮುಖ್ಯ ಸಲಹೆಗಾರ ಡಾ. ಆರ್. ವಿ. ಕುಲಕರ್ಣಿ, ಪ್ರಾಚಾರ್ಯ ಶೈಜೂ ನಾಯರ, ಹಿರಿಯ ಕಾರ್ಯ ಸಂಯೋಜಕರಾದ ದೀಪಾ ಜಂಬೂರೆ, ಬಾಲವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ ಮುಂತಾದವರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ನಾನಾ ಮಾದರಿಗಳನ್ನು
ವೀಕ್ಷಿಸಿದ ಗಣ್ಯರು, ಮಕ್ಕಳೊಂದಿಗೆ ಆ ಮಾದಿರಗಳ ಪ್ರಯೋಜನ ಮತ್ತೀತರ ವಿಷಯಗಳ ಕುರಿತು ಮಾಹಿತಿ ಪಡೆದರು. ಆಂಗ್ಲಭಾಷೆಯ ಸಂಗೀತ ಅನುವಾದ ಮಾದರಿ, ಹಿಂದಿಭಾಷೆಯ ವ್ಯಾಕರಣಕ್ಕೆ ಸಂಬಂಧಿಸಿದ ಮಾದರಿಗಳು ಗಮನ ಸೆಳೆದವು.
ಮಕ್ಕಳು ನಡೆಸಿಕೊಟ್ಟ ಕನ್ನಡ ಭಾಷೆಯ ಅನುಭವ ಮಂಟಪದ ಶರಣರ ವಚನಗೋಷ್ಠಿ ಹಾಗೂ ಜನಪದ ಕಲಾವೈಭವ ಯಕ್ಷಗಾನ, ಕಂಸಾಳೆ, ವೀರಗಾಸೆಗಳು ಪ್ರದರ್ಶನಗಳು ನೆರೆದ ಜನಮನ ಸೂರೆಗೊಂಡವು.
ಹಿಂದೂಸ್ತಾನ್ ಸಮಾಚಾರ್ / jyothi deshpande