

ಬಳ್ಳಾರಿ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ತುಂಗಭದ್ರ ಜಲಾಶಯದ ನೀರನ್ನು ಉಳಿಸಿ ಬೇಸಿಗೆ ಬೆಳೆಗೆ ನೀರು ಕೊಟ್ಟು ಅಚ್ಚುಕಟ್ಟು ವ್ಯಾಪ್ತಿಯಲ್ಲಿ ಕೃಷಿಯನ್ನು ಹಾಗೂ ಕೃಷಿಕರನ್ನು ಕಾಪಾಡಬೇಕು ಎಂದು ತುಂಗಭದ್ರ ರೈತ ಸಂಘ ಆಗ್ರಹಿಸಿದೆ.
ತುಂಗಭದ್ರ ರೈತ ಸಂಘದ ಅಧ್ಯಕ್ಷರಾದ ಡಾ. ದರೂರು ಪುರಷೋತ್ತಮಗೌಡ ಅವರು ನೀರಾವರಿ ಇಲಾಖೆ ಮತ್ತು ತುಂಗಭದ್ರ ಜಲಾಶಯದ ಅಧಿಕಾರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಿದ ಅವರು, ನೀರಾವರಿ ತಜ್ಞರಾದ ಕನ್ನಯ್ಯ ನಾಯ್ಡು ಅವರು ತುಂಗಭದ್ರ ಜಲಾಶಯಕ್ಕೆ 33 ಕ್ರಸ್ಟ್‍ಗೇಟ್‍ಗಳನ್ನು ಅಳವಡಿಸುವ ಪೂರ್ವದಲ್ಲಿ ಬೇಸಿಗೆ ಬೆಳೆಗೆ ನೀರನ್ನು ನೀಡಲು ಸಮಯದ ಅವಕಾಶವಿದೆ. ಅಧಿಕಾರಿಗಳು ಮತ್ತು ಸಚಿವರು ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಕಾರಣ ರೈತರಿಗೆ ಅನುಕೂಲವಾಗಲು ಎರಡನೇ ಬೆಳೆಗೆ ನೀರನ್ನು ನೀಡಬೇಕು ಎಂದು ಅವರು ಕೋರಿದ್ದಾರೆ.
ತುಂಗಭದ್ರ ಜಲಾಶಯದ ನೀರನ್ನು ಹೆಚ್ಚುವರಿಯಾಗಿ ಕಾಲುವೆಗಳಿಗೆ ಮತ್ತು ನದಿಗೆ ಬಿಡದೇ ನೀರನ್ನು ಸಮರ್ಥವಾಗಿ ನಿರ್ವಹಣೆ ಮಾಡಿ, ಬೇಸಿಗೆ ಬೆಳೆಗೆ ನೀಡಿದಲ್ಲಿ ರೈತರು ಆರ್ಥಿಕವಾಗಿ ಸುಧಾರಿಸುತ್ತಾರೆ. ನೀರನ್ನು ಪೋಲು ಮಾಡಿದಲ್ಲಿ ತುಂಗಭದ್ರ ಜಲಾಶಯದ ವ್ಯಾಪ್ತಿಯ ಎಲ್ಲಾ ಜಿಲ್ಲೆಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್