ನಾಳೆ ಕಲ್ಲೂರಿನಲ್ಲಿ ಲಕ್ಷ ದೀಪೋತ್ಸವ
ಕೊಪ್ಪಳ, 07 ನವೆಂಬರ್ (ಹಿ.ಸ.) : ಆ್ಯಂಕರ್ : ಯಲಬುರ್ಗಾ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿರುವ ಕಲ್ಲಿನಾಥ ಸ್ವಾಮಿಗೆ ನಾಳೆ ಕಲ್ಲಿನಾಥ ಕೃಪಾ ದೇಶಪಾಂಡೆ ಸೇವಾ ಸಂಸ್ಥೆ ವತಿಯಿಂದ ಲಕ್ಷ ದೀಪೋತ್ಸವ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಸಂತೋಷ ದೇಶಪಾಂಡೆ ಅವರು ತಿಳಿಸಿದ್ದಾರೆ. ಅಗಡಿಯ ಆನಂದವನದ ಗುರುದತ್ತ
ನಾಳೆ ಕಲ್ಲೂರಿನಲ್ಲಿ ಲಕ್ಷ ದೀಪೋತ್ಸವ


ಕೊಪ್ಪಳ, 07 ನವೆಂಬರ್ (ಹಿ.ಸ.) :

ಆ್ಯಂಕರ್ : ಯಲಬುರ್ಗಾ ತಾಲ್ಲೂಕಿನ ಕಲ್ಲೂರು ಗ್ರಾಮದಲ್ಲಿರುವ ಕಲ್ಲಿನಾಥ ಸ್ವಾಮಿಗೆ ನಾಳೆ ಕಲ್ಲಿನಾಥ ಕೃಪಾ ದೇಶಪಾಂಡೆ ಸೇವಾ ಸಂಸ್ಥೆ ವತಿಯಿಂದ ಲಕ್ಷ ದೀಪೋತ್ಸವ ನಡೆಯಲಿದೆ ಎಂದು ಸಂಸ್ಥೆ ಅಧ್ಯಕ್ಷ ಸಂತೋಷ ದೇಶಪಾಂಡೆ ಅವರು ತಿಳಿಸಿದ್ದಾರೆ.

ಅಗಡಿಯ ಆನಂದವನದ ಗುರುದತ್ತಮೂರ್ತಿ ಚಕ್ರ ವರ್ತಿ ಸ್ವಾಮೀಜಿ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ಜರುಗಲಿದ್ದು, ಸಿಂದಗಿಯ ಭೀಮಾಶಂಕರ ಮಠದ ದತ್ತಪ್ಪಯ್ಯ ಸ್ವಾಮೀಜಿ, ಹಾವೇರಿಯ ಶಂಕರಭಟ್ ಜೋಶಿ, ಕರ್ಕಿಹಳ್ಳಿಯ ಕನವಳ್ಳಿಯ ಸುರೇಶ್ವರ ಪಾಟೀಲ, ವಣಗೇರಿಯ ಶೇಷಾಚಲ ಭಟ್ಟ ಜೋಶಿ ಸೇರಿ ದಂತೆ ಅನೇಕರು ಪಾಲ್ಗೊ ಳ್ಳುವರು.

‘ಕಾರ್ಯಕ್ರಮದ ಮುಗಿದ ನಂತರ ರಾತ್ರಿ ಕುಕನೂರಿನಿಂದ ಕೊಪ್ಪಳಕ್ಕೆ ತೆರಳುವವರಿಗೆ 8.45ಕ್ಕೆ ಕೆಎಸ್‍ಆರ್‍ಟಿಸಿ ಬಸ್ ಸೌಲಭ್ಯ ವಿದೆ. ಕಲ್ಲೂರಿನಿಂದ ಕುಕ ನೂರಿಗೆ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿ ಕೊಡಲಾ ಗುವುದು. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಇನ್ನಷ್ಟು ಮಾಹಿತಿಗೆ 9880088367 (ಸಂತೋಷ ದೇಶಪಾಂಡೆ) ಅವರನ್ನು ಸಂಪರ್ಕಿಸಬಹುದು.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande