
ಸಿರುಗುಪ್ಪ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಎರಡು ದಶಕಗಳಿಂದ ಸಕ್ರಿಯ ಪತ್ರಿಕೋದ್ಯಮಿಯಾಗಿ ಜನಪ್ರಿಯರಾಗಿದ್ದ ಪತ್ರಕರ್ತ ರಾಜೀವ್ ಐರಾಣಿ (56) ಅವರು ಶುಕ್ರವಾರ ಬೆಳಗ್ಗೆ ಅಸುನೀಗಿದ್ದಾರೆ.
ಕೆಲ ಕಾಲದ ಅನಾರೋಗ್ಯದ ಕಾರಣ ಚಿಕಿತ್ಸೆ ಪಡೆಯುತ್ತಿದ್ದ ರಾಜೀವ್ ಐರಾಣಿ ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿಯೇ, ಚಿಕಿತ್ಸೆ ಫಲ ನೀಡದೇ ಅಸು ನೀಗಿದ್ದಾರೆ. ಅವರಿಗೆ ಪತ್ನಿ, ಪುತ್ರ, ಇದ್ದಾರೆ.
ಮೃತರ ಅಂತ್ಯಕ್ರಿಯೆಯು ಸಿರುಗುಪ್ಪದ ರುದ್ರಭೂಮಿಯಲ್ಲಿ ಕುಟುಂಬದ ಸರ್ವ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ನೆರವೇರಿತು.
ಮೃತರ ಆತ್ಮಕ್ಕೆ ಶಾಂತಿ ಕೋರಿ ಪತ್ರಕರ್ತರ ಸಂಘ, ಶಾಸಕ ಬಿ.ಎಂ. ನಾಗರಾಜ್, ಮಾಜಿ ಶಾಸಕರಾದ ಟಿ.ಎಂ. ಚಂದ್ರಶೇಖರಯ್ಯ, ಎಂ.ಎಸ್. ಸೋಮಲಿಂಗಪ್ಪ ಹಾಗೂ ಸರ್ವ ಪಕ್ಷಗಳವರು, ಸಂಘ-ಸಂಸ್ಥೆಗಳವರು ಶೋಕ ಸಂತಾಪ ಸೂಚಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್