
ಹೊಸಪೇಟೆ, 07 ನವೆಂಬರ್ (ಹಿ.ಸ.) :
ಆ್ಯಂಕರ್ : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ವೃತ್ತಿಗಳಾದ ಮೇಸನ್, ಎಲೆಕ್ಟ್ರೀಷಿಯನ್, ವೆಲ್ಡರ್, ಕಾರ್ಪೇಂಟರ್, ಪೇಂಟರ್ ಹಾಗೂ ಪ್ಲಂಬರ್ ಕೆಲಸ ಮಾಡುವ ನೋಂದಾಯಿತ ಕಾರ್ಮಿಕರಿಗೆ ಜೇಷ್ಠತೆ ಅಧಾರದಡಿ ಸುರಕ್ಷತಾ ಕಿಟ್‍ಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಸೂರ್ಯಪ್ಪ ಡೊಂಬರ ಮತ್ತೂರು ತಿಳಿಸಿದ್ದಾರೆ.
ಜಿಲ್ಲಾ ವ್ಯಾಪ್ತಿಯಲ್ಲಿರುವ ಕಾರ್ಮಿಕರಿಗೆ ಒಟ್ಟು 4475 ಸುರಕ್ಷತಾ ಕಿಟ್‍ಗಳು ಸರಬರಾಜು ಆಗಿದ್ದು, ನೋಂದಾಯಿತ ವಿವಿಧ ವೃತ್ತಿಗಳ ಕಾರ್ಮಿಕರಾದ ಮೇಸನ್, ಎಲೆಕ್ಟ್ರೀಷಿಯನ್, ವೆಲ್ಡರ್, ಕಾರ್ಪೇಂಟರ್, ಪೇಂಟರ್ ಹಾಗೂ ಪ್ಲಂಬರ್ ಮಾಡುತ್ತಿರುವವರು ಆಯಾ ತಾಲೂಕಿನ ತಾಲೂಕು ಕಾರ್ಮಿಕ ನಿರೀಕ್ಷಕರ ಕಚೇರಿಗಳಲ್ಲಿ ನ.25 ರೊಳಗಾಗಿ ಅರ್ಜಿಗಳನ್ನು ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.
ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್