ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅರಿವು ಯೋಜನೆಯಡಿ ಅರ್ಜಿ ಅಹ್ವಾನ
ಹೊಸಪೇಟೆ, 07 ನವೆಂಬರ್ (ಹಿ.ಸ.) : ಆ್ಯಂಕರ್ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗದಿಂದ 2025-26ನೇ ಸಾಲಿನಲ್ಲಿ ಅನುಷ್ಟಾನಗೊಳ್ಳುತ್ತಿರುವ ಅರಿವು ಯೋಜನೆ ಸಾಲ ಸೌಲಭ್ಯ ಪಡೆಯಲು ಮುಸ್ಲಿಂ, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರಿವು (ರಿನ್ಯೂವಲ್ ಪಿಜಿಸಿಇಟಿ
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಅರಿವು ಯೋಜನೆಯಡಿ ಅರ್ಜಿ ಅಹ್ವಾನ


ಹೊಸಪೇಟೆ, 07 ನವೆಂಬರ್ (ಹಿ.ಸ.) :

ಆ್ಯಂಕರ್ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗದಿಂದ 2025-26ನೇ ಸಾಲಿನಲ್ಲಿ ಅನುಷ್ಟಾನಗೊಳ್ಳುತ್ತಿರುವ ಅರಿವು ಯೋಜನೆ ಸಾಲ ಸೌಲಭ್ಯ ಪಡೆಯಲು ಮುಸ್ಲಿಂ, ಜೈನರು, ಬೌದ್ಧರು, ಸಿಖ್ಖರು, ಪಾರ್ಸಿ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಂದ ಅರಿವು (ರಿನ್ಯೂವಲ್ ಪಿಜಿಸಿಇಟಿ, ಸಿಇಟಿ, ಡಿಸಿಇಟಿ, ನೀಟ್) ಶೈಕ್ಷಣಿಕ ಸಆಲ ಯೋಜನೆಯಡಿ ಅನ್‍ಲೈನ್ ಮೂಲಕ ಅರ್ಜಿ ಅಹ್ವಾನಿಸಲಾಗಿದೆ.

ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಸಿಇಟಿ/ನೀಟ್/ಡಿ-ಸಿಇಟಿ/ಪಿಜಿ-ಸಿಇಟಿ ನಲ್ಲಿ ಆಯ್ಕೆಯಾದ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‍ಗಳಾದ ವೈದ್ಯಕೀಯ (ಎಂ.ಬಿ.ಬಿ.ಎಸ್, ಎಂ.ಡಿ, ಎಂ.ಎಸ್) ಹಾಗೂ ದಂತ ವೈದ್ಯಕೀಯ (ಬಿ.ಡಿ.ಎಸ್,, ಎಂ.ಡಿ.ಎಸ್), ಹಾಗೂ ಬಿ.ಇ, ಬಿ.ಟೆಕ್, ಬ್ಯಾಚುಲರ್ ಆಫ್ ಆರ್ಕಿಟೇಕ್ಚರ್, ಎಂ.ಆರ್ಕಿಟೇಕ್ಚರ್ ಮತ್ತು ಆಯುಷ್ (ಬಿ.ಆಯುಷ್, ಎಂ.ಆಯುಷ್), ಎಂಬಿಎ, ಎಂಸಿಎ, ಎಲ್‍ಎಲ್‍ಬಿ, ಬಿಎಸ್ಸಿ ತೋಟಗಾರಿಕೆ, ಕೃಷಿ ಇಂಜಿನಿಯರಿಂಗ್, ಡೈರಿ ಟೆಕ್ನಾಲಜಿ, ಫಾರೆಸ್ಟ್ರಿ, ಪಶುಪಾಲನ ಮತ್ತು ವೈದ್ಯಕೀಯ, ಮೀನುಗಾರಿಕೆ, ರೇಷ್ಮೆ, ಬಿಫಾರ್ಮ್, ಎಂ.ಫಾರ್ಮ್, ಡಿ.ಫಾರ್ಮ್ ಗಳಲ್ಲಿ ಆಯ್ಕೆಯಾಗಿರುವಂತಹ ಅಲ್ಪಸಂಖ್ಯಾತರ ವಿದ್ಯಾರ್ಥಿಗಳಿಗೆ ಅರಿವು (ರಿನ್ಯೂವಲ್) ಅನ್‍ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ನಿಗಮದಿಂದ ಈ ಹಿಂದಿನ ವರ್ಷದಲ್ಲಿ ಪಡೆದಿರುವ ಒಟ್ಟು ಸಾಲದ ಬಾಕಿಯ ಮೊತ್ತದ ಶೇ12% ರಷ್ಟನ್ನು ಮೊತ್ತವನ್ನು ಆನ್‍ಲೈನ್ ಮುಖಾಂತರ ಪಾವತಿಸಬಹುದು ಅಥವಾ ಜಿಲ್ಲಾ ಕಚೇರಿಯಲ್ಲಿ ಪಾವತಿಸಬೇಕು. ಈ ಹಿಂದೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ದಿಂದ ಆಯ್ಕೆಯಾಗಿದ್ದು ಬೇರೆ ಬೇರೆ ವರ್ಷಗಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳು ಅರಿವು ವಿದ್ಯಾಭ್ಯಾಸ ಸಾಲ ಪಡೆಯದಿದ್ದಲ್ಲಿ ಅಂತಹ ವಿದ್ಯಾರ್ಥಿಗಳು ಆನ್ ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬಹುದು, ರಿನ್ಯೂವಲ್ ಮೊತ್ತವನ್ನು ಪಾವತಿಸುವುದು ಆಗತ್ಯವಿರುವುದಿಲ್ಲ. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಕೋರಿದೆ.

ಅನ್‍ಲೈನ್‍ನಲ್ಲಿ https://kmdconline.karnataka.gov.in/ ವೆಬ್‍ಸೈಟ್‍ನಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಡಿ.03 ರಂದು ಕೊನೆಯ ದಿನಾಂಕವಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ವ್ಯವಸ್ಥಾಪಕರು, ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ (ನಿ), 1ನೇ ಮಹಡಿ, ಮೌಲಾನ ಆಜಾದ್ ಭವನ, ಜೋಳದರಾಶಿ ದೊಡ್ಡನಗೌಡ ರಂಗಮಂದಿರ ಹತ್ತಿರ, ಬಳ್ಳಾರಿ. ದೂ.08392-294370 ಇವರನ್ನು ಈ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ವ್ಯವಸ್ಥಾಪಕರಾದ ಮೆಹಬೂಬ್.ವಿ ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / ಜಿ.ಎಂ. ರೋಹಿಣಿ ಕುಮಾರ್


 rajesh pande