
ನವದೆಹಲಿ, 30 ನವೆಂಬರ್ (ಹಿ.ಸ.) :
ಆ್ಯಂಕರ್ : ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಪ್ರಸಾರವಾದ ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕಿ ಬಾತ್’ ನ 128ನೇ ಸಂಚಿಕೆಯಲ್ಲಿ, ಭಾರತೀಯ ಯುವಕರ ವೈಜ್ಞಾನಿಕ ಕುತೂಹಲ ಮತ್ತು ಪ್ರಯೋಗಶೀಲತೆಯನ್ನು ವಿಶೇಷವಾಗಿ ಶ್ಲಾಘಿಸಿದರು.
ಇಸ್ರೋ ಆಯೋಜಿಸಿದ್ದ ವಿಶಿಷ್ಟ ಡ್ರೋನ್ ಸ್ಪರ್ಧೆಯನ್ನು ಉಲ್ಲೇಖಿಸಿದ ಅವರು, “ಬಾಹ್ಯಾಕಾಶದಂತಹ ಸಂಕೀರ್ಣ ಪರಿಸ್ಥಿತಿಗಳಲ್ಲೂ ನಮ್ಮ ಯುವಕರು ಹೆದರದೆ ಮುಂದುವರೆಯುತ್ತಿದ್ದಾರೆ ಎಂದು ಹೇಳಿದರು.
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವೀಡಿಯೊ ಕುರಿತು ಮಾತನಾಡಿದ ಪ್ರಧಾನಿ, ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಯುವಕರು ಮಂಗಳ ಗ್ರಹದಂತಹ ಮೇಲ್ಮೈ ಮತ್ತು ಪರಿಸರವನ್ನು ಅನುಕರಿಸಿ ಸವಾಲಿನ ನಡುವೆಯೇ ಡ್ರೋನ್ ಹಾರಿಸಲು ಪ್ರಯತ್ನಿಸಿದ್ದನ್ನು ಹೊಗಳಿದರು.
ಪುಣೆಯ ವಿದ್ಯಾರ್ಥಿಗಳ ತಂಡದ ಉದಾಹರಣೆ ನೀಡಿದ ಅವರು, “ಡ್ರೋನ್ ಹಲವು ಬಾರಿ ಬಿದ್ದು ಹಾನಿಯಾದರೂ, ವಿದ್ಯಾರ್ಥಿಗಳು ಹಿಂತಿರುಗಲಿಲ್ಲ. ಅವರ ನಿರಂತರ ಪ್ರಯತ್ನ ಅಂತಿಮವಾಗಿ ಫಲಿಸಿದ್ದು, ಮಂಗಳನಂತಹ ಪರಿಸ್ಥಿತಿಯಲ್ಲಿ ಡ್ರೋನ್ ಹಾರಿಸಲು ಅವರು ಯಶಸ್ವಿಯಾಗಿದ್ದಾರೆ,” ಎಂದು ಪ್ರಶಂಸಿಸಿದರು.
ಈ ಸಾಧನೆ ಭಾರತೀಯ ಯುವಕರದಲ್ಲಿರುವ ಕುತೂಹಲ, ನವೋತ್ಸಾಹ ಮತ್ತು ಪರಿಶ್ರಮದ ಪ್ರತೀಕ ಎಂದು ಮೋದಿ ವಿವರಿಸಿದರು.
“ಇಂತಹ ಪ್ರಯತ್ನಗಳು ಭಾರತವನ್ನು ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುವ ಸಾಮರ್ಥ್ಯ ಹೊಂದಿವೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa