
ನವದೆಹಲಿ, 30 ನವೆಂಬರ್ (ಹಿ.ಸ.) :
ಆ್ಯಂಕರ್ : ಸಂಸತ್ತಿನ ಚಳಿಗಾಲದ ಅಧಿವೇಶನಕ್ಕೂ ಮುನ್ನ ನಡೆದ ಸರ್ವಪಕ್ಷ ಸಭೆಯಲ್ಲಿ ಪ್ರತಿ ಪಕ್ಷಗಳು ರಾಷ್ಟ್ರೀಯ ಭದ್ರತೆ, ಪ್ರಜಾಪ್ರಭುತ್ವ ಮತ್ತು ಸಂಸತ್ತಿನ ಕಾರ್ಯಪದ್ಧತಿಯ ಮೇಲಿನ ಸರ್ಕಾರದ ನಿಲುವುಗಳನ್ನು ತೀವ್ರವಾಗಿ ಪ್ರಶ್ನಿಸಿವೆ.
ಸಭೆಯ ಬಳಿಕ ವರದಿಗಾರರೊಂದಿಗೆ ಮಾತನಾಡಿದ ಲೋಕ ಸಭೆಯ ಕಾಂಗ್ರೆಸ್ ಉಪನಾಯಕ ಗೌರವ್ ಗೊಗೊಯ್, ಈ ಬಾರಿ ಚಳಿಗಾಲದ ಅಧಿವೇಶನವನ್ನು ಕೇವಲ 15 ದಿನಗಳಿಗೆ ಸೀಮಿತಗೊಳಿಸಿರುವುದು ಸಂಸತ್ತಿನ ಇತಿಹಾಸದಲ್ಲೇ ಅತ್ಯಲ್ಪ ಅಧಿವೇಶನವಾಗುವ ಸಾಧ್ಯತೆ ಇದೆ ಎಂದು ಟೀಕಿಸಿದರು.
ಅಧಿವೇಶನವನ್ನು ಕರೆಯುವಲ್ಲಿ ಅನಗತ್ಯ ವಿಳಂಬವಾಯಿತು. ಇದರಿಂದ ಸರ್ಕಾರ ಪ್ರಜಾಪ್ರಭುತ್ವದ ಮಾನ್ಯತೆ ಮತ್ತು ಸಂಸದೀಯ ಸಂಪ್ರದಾಯಗಳನ್ನು ನಿರ್ಲಕ್ಷಿಸುತ್ತಿದೆ ಎನ್ನುವುದು ಸ್ಪಷ್ಟವಾಗುತ್ತದೆ” ಎಂದರು.
ಪ್ರತಿ ಪಕ್ಷಗಳು ದೆಹಲಿಯಲ್ಲಿ ನಡೆದ ಬಾಂಬ್ ಸ್ಫೋಟಗಳನ್ನು ಕಾನೂನು–ಸುವ್ಯವಸ್ಥೆ ವೈಫಲ್ಯದ ಉದಾಹರಣೆಯಾಗಿದೆ. ಭದ್ರತೆ ಕುರಿತ ಚರ್ಚೆಗೆ ಸರ್ಕಾರ ಸಿದ್ಧವಿಲ್ಲ ಎಂದು ಆರೋಪಿಸಿದರು.
ನಾಳೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಪ್ರತಿ ಪಕ್ಷಗಳು ಮತ್ತೆ ಸಭೆ ಸೇರಿ ಚಳಿಗಾಲದ ಅಧಿವೇಶನದ ಕಾರ್ಯತಂತ್ರವನ್ನು ಚರ್ಚಿಸಲು ನಿರ್ಧರಿಸಿದ್ದಾಗಿ ಗೊಗೊಯ್ ತಿಳಿಸಿದರು.
ಹಿಂದೂಸ್ತಾನ್ ಸಮಾಚಾರ್ / Rakesh Mahadevappa