ಅತಿ ಸಣ್ಣ ಘಟಕಗಳ ಪ್ರಾರಂಭಿಸಲು ಅವಕಾಶ
ಹಾಸನ, 30 ನವೆಂಬರ್ (ಹಿ.ಸ.) : ಆ್ಯಂಕರ್ : ರಾಜ್ಯ ಜವಳಿ ಉದ್ದಿಮೆಯಲ್ಲಿ 2025-26 ನೇ ಸಾಲಿಗೆ ವೈಯಕ್ತಿಕ ಫಲಾನುಭವಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಜವಳಿ ಸಹಕಾರ ಸಂಘ/ಸಂಸ್ಥೆಯ ವತಿಯಿಂದ ಅತಿ ಸಣ್ಣ(ಎಸ್‌ಎಂಇ) ಘಟಕಗಳನ್ನು ಪ್ರಾರಂಭಿಸಲು ಉತ್ತೇಜಿಸುವ ಸಲುವಾಗಿ ನೇಕಾರರ ಪ್ಯಾಕೆಜ್ ಯೋಜನೆಯಡಿ ಜವಳಿ ಕ್ಷ
ಅತಿ ಸಣ್ಣ ಘಟಕಗಳ ಪ್ರಾರಂಭಿಸಲು ಅವಕಾಶ


ಹಾಸನ, 30 ನವೆಂಬರ್ (ಹಿ.ಸ.) :

ಆ್ಯಂಕರ್ : ರಾಜ್ಯ ಜವಳಿ ಉದ್ದಿಮೆಯಲ್ಲಿ 2025-26 ನೇ ಸಾಲಿಗೆ ವೈಯಕ್ತಿಕ ಫಲಾನುಭವಿ, ಪಾಲುದಾರಿಕೆ ಸಂಸ್ಥೆ, ಕಂಪನಿ, ಜವಳಿ ಸಹಕಾರ ಸಂಘ/ಸಂಸ್ಥೆಯ ವತಿಯಿಂದ ಅತಿ ಸಣ್ಣ(ಎಸ್‌ಎಂಇ) ಘಟಕಗಳನ್ನು ಪ್ರಾರಂಭಿಸಲು ಉತ್ತೇಜಿಸುವ ಸಲುವಾಗಿ ನೇಕಾರರ ಪ್ಯಾಕೆಜ್ ಯೋಜನೆಯಡಿ ಜವಳಿ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಣ್ಣ ಮತ್ತು ಅತಿ ಸಣ್ಣ (ಎಸ್‌ಎಂಇ) ಘಟಕಗಳ ಸ್ಥಾಪನೆಗೆ ಸಹಾಯಧನ ಯೋಜನೆಯಡಿ ಹೊಸ ಘಟಕಗಳ ಪ್ರಸ್ತಾವನೆಯನ್ನು ಸಲ್ಲಿಸುವಂತೆ ಜವಳಿ ಅಭಿವೃದ್ಧಿ ಆಯುಕ್ತರು ಹಾಗೂ ನಿರ್ದೇಶಕರು, ಕೈಮಗ್ಗ ಮತ್ತು ಜವಳಿ ಇಲಾಖೆ, ಕೇಂದ್ರ ಕಚೇರಿ, ಬೆಂಗಳೂರು ಇವರು ಸೂಚಿಸಿದ್ದು, ಈ ಯೋಜನೆಯನ್ನು ಸರ್ಕಾರದ ಮಾರ್ಗಸೂಚಿಯನ್ವಯ ಹಾಸನ ಜಿಲ್ಲೆಯಲ್ಲಿ ಅನುಷ್ಟಾನಗೊಳಿಸಲಾಗುವುದು.

ಸದರಿ ಯೋಜನೆಯಡಿ ಘಟಕ ಸ್ಥಾಪಿಸಲು ಉದ್ದೇಶಿಸಿರುವ ಅಭ್ಯರ್ಥಿಗಳು ಹೆಚ್ಚಿನ ವಿವರಗಳಿಗಾಗಿ ಸಹಾಯಕ ನಿರ್ದೇಶಕರ ಕಚೇರಿ, ಕೈಮಗ್ಗ ಮತ್ತು ಜವಳಿ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ, ಹಾಸನ, ಕಚೆೆÃರಿ ದೂರವಾಣಿ ಸಂಖ್ಯೆ: 08172-240627 ಗೆ ಸಂಪರ್ಕಿಸಲು

ಜಿಲ್ಲಾ ಪಂಚಾಯಿತಿಯ ಕೈಮಗ್ಗ ಮತ್ತು ಜವಳಿ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.

ಹಿಂದೂಸ್ತಾನ್ ಸಮಾಚಾರ್ / Rakesh Mahadevappa


 rajesh pande