ಭೀಕರ ಅಪಘಾತ ಓರ್ವ ಸಾವು, ಸಿಸಿಟಿವಿಯಲ್ಲಿ ದೃಶ್ಯಗಳು ಸೆರೆ
ಗದಗ, 30 ನವೆಂಬರ್ (ಹಿ.ಸ.) : ಆ್ಯಂಕರ್ : ಗದಗ ತಾಲೂಕಿನ ಹರ್ತಿ ಗ್ರಾಮದ ಹೊರವಲಯದಲ್ಲಿ ಭೀಕರವಾದ ರಸ್ತೆ ಅಪಘಾತವಾಗಿದೆ. ಬುಲೆರೋ ವಾಹನವು ಬೈಕ್‌ಗೆ ಹಿಂಬದಿಯಿಂದ ಅತಿವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ರಸ್ತೆ ಬದಿಗೆ ಪುಟಿದು ಬಿದ್ದಿದ್ದು, ಈ ಅವಘಡದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್
ಫೋಟೋ


ಗದಗ, 30 ನವೆಂಬರ್ (ಹಿ.ಸ.) :

ಆ್ಯಂಕರ್ : ಗದಗ ತಾಲೂಕಿನ ಹರ್ತಿ ಗ್ರಾಮದ ಹೊರವಲಯದಲ್ಲಿ ಭೀಕರವಾದ ರಸ್ತೆ ಅಪಘಾತವಾಗಿದೆ. ಬುಲೆರೋ ವಾಹನವು ಬೈಕ್‌ಗೆ ಹಿಂಬದಿಯಿಂದ ಅತಿವೇಗದಲ್ಲಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರರು ರಸ್ತೆ ಬದಿಗೆ ಪುಟಿದು ಬಿದ್ದಿದ್ದು, ಈ ಅವಘಡದಲ್ಲಿ ಒಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಘಟನೆಯಲ್ಲಿ ಪೌರಕಾರ್ಮಿಕ ನೀಲಪ್ಪ ದೊಡ್ಡಮನಿ (57) ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಬೈಕ್ ಅನ್ನು ಓಡಿಸುತ್ತಿದ್ದ ಮಂಜುನಾಥ ಕರಿಗೊಳಪ್ಪನವರು ಗಂಭೀರ ಗಾಯಗಳಿಂದ ಬಳಲುತ್ತಿದ್ದು, ಗದಗ ಜಿಲ್ಲಾ ಆಸ್ಪತ್ರೆಗೆ ತಕ್ಷಣ ಸ್ಥಳೀಯರಿಂದ ಕರೆದೊಯ್ಯುವ ಮೂಲಕ ದಾಖಲಿಸಲಾಗಿದೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಅಪಘಾತ ಸಂಭವಿಸಿದ ಕ್ಷಣದ ದೃಶ್ಯ ಹತ್ತಿರದ ಸಿಸಿಟಿವಿ ಕ್ಯಾಮೆರಾದಲ್ಲಿ ಸ್ಪಷ್ಟವಾಗಿ ದಾಖಲಾಗಿದೆ. ಬುಲೆರೋ ವಾಹನ ಅತಿವೇಗದಲ್ಲಿ ಬರುತ್ತಿರುವುದು, ಹಿಂಬದಿಯಿಂದ ಬೈಕ್‌ಗೆ ಡಿಕ್ಕಿ ಹೊಡೆದ ಕ್ಷಣ ಹಾಗೂ ಸವಾರರು ಸಮತೋಲನ ಕಳೆದುಕೊಂಡು ಬಿದ್ದ ದೃಶ್ಯಗಳು ಸ್ಥಳೀಯರಲ್ಲಿ ಬೆಚ್ಚಿ ಬೀಳಿಸುವಂತಿವೆ.

ಘಟನೆ ನಡೆದ ಕೂಡಲೇ ಹರ್ತಿ ಗ್ರಾಮದ ನಿವಾಸಿಗಳು ಸ್ಥಳಕ್ಕೆ ಧಾವಿಸಿ, ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಲು ಸಹಕರಿಸಿದ್ದಾರೆ. ಗ್ರಾಮದಲ್ಲಿ ನೀಲಪ್ಪ ದೊಡ್ಡಮನಿ ಅವರ ಅಕಾಲಿಕ ಮರಣದ ಸುದ್ದಿ ಕೇಳುತ್ತಿದ್ದಂತೆಯೇ ದುಃಖದ ವಾತಾವರಣ ಆವರಿಸಿದೆ. ಪೌರಕಾರ್ಮಿಕನಾಗಿ ನೀಲಪ್ಪ ಹಲವು ವರ್ಷಗಳಿಂದ ನಗರಸಭೆಯಲ್ಲಿ ಸೇವೆ ಸಲ್ಲಿಸುತ್ತಿದ್ದು, ಸರಳ-ಸಹಜ ಸ್ವಭಾವಕ್ಕಾಗಿ ಪರಿಚಿತರಾಗಿದ್ದರು.

ಈ ಅವಘಡ ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬುಲೆರೋ ಚಾಲಕನ ವಿರುದ್ಧ ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಸಿಸಿಟಿವಿ ದೃಶ್ಯವನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹರ್ತಿ ರಸ್ತೆ ಸಮೀಪದಲ್ಲಿ ವಾಹನಗಳ ಅತಿವೇಗ ಹಾಗೂ ನಿಯಮ ಉಲ್ಲಂಘನೆ ಪದೇಪದೇ ನಡೆಯುತ್ತಿದ್ದು, ಸ್ಥಳೀಯರು ಹಲವು ಬಾರಿ ವೇಗ ನಿಯಂತ್ರಣ ಹಾಗೂ ಹಂಪಿಗಳನ್ನು ಸ್ಥಾಪಿಸುವಂತೆ ಮನವಿ ಮಾಡಿದ್ದರೂ ಕ್ರಮ ಕೈಗೊಳ್ಳದ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ.

ಹಿಂದೂಸ್ತಾನ್ ಸಮಾಚಾರ್ / lalita MP


 rajesh pande